Film News

ಮದುವೆಗೂ ಮುಂಚೆ ಗರ್ಭಿಣಿಯಾದರೇ ಬಿಗ್ ಬಾಸ್ ಬ್ಯೂಟಿ ಪುರ್ನನವಿ? ತೃತೀಯ ಲಿಂಗಿಯಿಂದ ಗರ್ಭಿಣಿಯಾದರು ಎಂದು ರೂಮರ್…!

ಬಿಗ್ ಭಾಸ್ ಖ್ಯಾತಿಯ ಪುರ್ನನವಿ ಭೂಪಾಳಂ ಬಿಗ್ ಭಾಸ್ ಶೋ ಮೂಲಕ ಕ್ರೇಜ್ ದಕ್ಕಿಸಿಕೊಂಡರು. ಈಕೆಯನ್ನು ಸಿನಿರಂಗದಲ್ಲಿ ಬೋಲ್ಡ್ ಬ್ಯೂಟಿ ಎಂತಲೇ ಕರೆಯುತ್ತಾರೆ. ಜೊತೆಗೆ ಆಕೆ ಯಾವುದೇ ವಿಚಾರವಾದರೂ ಸರಿ ನೇರವಾಗಿಯೇ ಮಾತನಾಡುತ್ತಾರೆ. ಉಯ್ಯಾಲ ಜಂಪಾಲ ಸಿನೆಮಾದಲ್ಲಿ ಪುರ್ನನವಿ ಕ್ಯಾರೆಕ್ಟರ್‍ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಕೆಲವೊಂದು ಸಿನೆಮಾಗಳಲ್ಲಿ, ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡರು. ಇದ್ಯಾವುದು ವರ್ಕೌಟ್ ಆಗದ ಕಾರಣ ಆಕೆ ಲಂಡನ್ ಗೆ ಹಾರಿಬಿಟ್ಟರು. ಈ ಹಿಂದೆ ಪುರ್ನನವಿ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದರು. ಆದರೆ ಇತ್ತಿಚಿಗೆ ಸೈಲೆಂಟ್ ಆಗಿದ್ದಾರೆ.

ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳ ಬಗ್ಗೆ ರೂಮರ್‍ ಗಳು ಹರಿದಾಡುತ್ತಲೇ ಇರುತ್ತದೆ. ಈ ಹಾದಿಯಲ್ಲೇ ನಟಿ ಪುರ್ನನವಿ ಬಗ್ಗೆ ಸಹ ಅನೇಕ ರೂಮರ್‍ ಗಳು ಹರಿದಾಡುತ್ತಲೇ ಇವೆ. ಇನ್ನೂ ಇದೀಗ ಮತ್ತೊಂದು ರೂಮರ್‍ ಪುರ್ನನವಿ ಬಗ್ಗೆ ಹರಿದಾಡುತ್ತಿದೆ. ಇತ್ತೀಚಿಗೆ ಆಕೆ ಹಂಚಿಕೊಂಡ ಪೊಟೋಗಳ ಕಾರಣದಿಂದ ಆಕೆಯ ಬಗ್ಗೆ ಹೊಸ ರೂಮರ್‍ ಹುಟ್ಟಿಕೊಂಡಿದೆ. ಆಕೆಯ ಲೇಟೆಸ್ಟ್ ಪೊಟೋಗಳಲ್ಲಿ ಆಕೆ ಹೊಟ್ಟೆ ಕೊಂಚ ದೊಡ್ಡದಾಗಿ ಕಾಣಿಸಿಕೊಂಡಿದೆ. ಇದರಿಂದ ಆಕೆ ಗರ್ಭಿಣಿಯಾಗಿದ್ದಾರೆ ಎಂಬ ಪ್ರಚಾರ ಜೋರಾಗಿದೆ. ಮದುವೆಗೂ ಮುಂಚೆಯೇ ಪುರ್ನನವಿ ತನ್ನ ತೃತೀಯ ಲಿಂಗಿ ಫ್ರೆಂಡ್ ನಿಂದ ಗರ್ಭಿಣಿಯಾಗಿದ್ದಾರೆ ಎಂದು ರೂಮರ್‍ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಈ ಕುರಿತು ಪುರ್ನನವಿ ಸಹ ಗಟ್ಟಿಯಾಗಿಯೇ ಕೌಂಟರ್‍ ಸಹ ನೀಡಿದ್ದಾರೆ.

ಇನ್ನೂ ಈ ರೂಮರ್‍ ಗಳ ಬಗ್ಗೆ ರಿಯಾಕ್ಟ್ ಆಗಿ ಪುರ್ನನವಿ ಕೆಲವೊಂದು ಯೂಟ್ಯೂಬ್ ಚಾನೆಲ್ ಗಳು ನನ್ನ ಗೇ ಬೆಸ್ಟಿ ಜೊತೆಗೆ ಗರ್ಭಿಣಿಯಾಗಿದ್ದೇನೆ ಎಂದು ಅವರಿಗೆ ಇಷ್ಟಬಂದಂತೆ ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದಾರೆ ಇದೊಂದು ನಾನ್ ಸೆನ್ಸ್ ಆಗಿದೆ. ಈ ಹಿಂದೆ ನನ್ನ ಆರೋಗ್ಯ ಸಮಸ್ಯೆಯಾಗಿತ್ತು. ಆದರೆ ಕೆಲವರು ನನ್ನ ಪರಿಸ್ಥಿತಿ ತುಂಬಾ ಕ್ರಿಟಿಕಲ್ ಆಗಿತ್ತು ಎಂದು ಸುದ್ದಿ ಹರಿಬಿಟ್ಟಿದ್ದರು. ಇದೀಗ ನಾನು ಗರ್ಭಿಣಿ ಎಂದು ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ಆದರೆ ಇಂತಹ ಸುದ್ದಿಗಳನ್ನು ಯಾರೂ ಸಹ ನಂಬಬೇಡಿ. ಇಂತಹ ಸುಳ್ಳು ಸುದ್ದಿಗಳ ಕಾರಣದಿಂದ ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂಬುದನ್ನು ನೀವು ಸಹ ಅರ್ಥ ಮಾಡಿಕೊಳ್ಳಬೇಕು ಎಂದು ಪುರ್ನನವಿ ಪೋಸ್ಟ್ ಮಾಡಿದ್ದಾರೆ.

ಇನ್ನೂ ಪುರ್ನನವಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕ ಅನೇಕ ವಿಚಾರಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಇನ್ನೂ ಆಗಾಗ ಆಕೆ ತನ್ನ ಗೇ ಫ್ರೆಂಡ್ ಜೊತೆಗಿನ ಪೊಟೋಗಳನ್ನೂ ಸಹ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಗರ್ಭಿಣಿಯೆಂಬ ರೂಮರ್‍ ಗೆ ಆಕೆ ಕೌಂಟರ್‍ ನೀಡಿದ್ದು, ಈ ರೂಮರ್‍ ನಿಲ್ಲುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top