Film News

ಮದುವೆ ಬಳಿಕ ಅದು ಬದಲಾಗಿದೆ ಎಂದು ನೆಟ್ಟಿಗನ ಪ್ರಶ್ನೆಗೆ ಉತ್ತರ ನೀಡಿದ ಹನ್ಸಿಕಾ……!

ಸೌತ್ ಸಿನಿರಂಗದಲ್ಲಿ ಆಪಲ್ ಬ್ಯೂಟಿ ಎಂತಲೇ ಖ್ಯಾತಿ ಪಡೆದುಕೊಂಡ ಹನ್ಸಿಕಾ ಮೊಟ್ವಾನಿ ಹಾಗೂ ಉದ್ಯಮಿ ಸೊಹೈಲ್ ಮದುವೆ ಜಯಪುರದಲ್ಲಿ ಅದ್ದೂರಿಯಾಗಿ ನಡೆದಿದೆ. ಸಂಪ್ರದಾಯಬದ್ದವಾಗಿ ಈ ಜೋಡಿಯ ಮದುವೆ ನಡೆದಿದ್ದು, ಕುಟುಂಬಸ್ಥರು, ಹತ್ತಿರದ ಸಂಬಂಧಿಗಳು ಕೆಲವು ಸೆಲೆಬ್ರೆಟಿಗಳು ಮಾತ್ರ ಭಾಗಿಯಾಗಿದ್ದರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ಮದುವೆಯಾದರು. ಇದೀಗ ಆಕೆ ಅಭಿಮಾನಿಗಳೊಂದಿಗೆ ನಡೆಸಿದ ಚಿಟ್ ಚಾಟ್ ನಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಹನ್ಸಿಕಾ ಮೊಟ್ವಾನಿ.

ನಟಿ ಹನ್ಸಿಕಾ ಮೊಟ್ವಾನಿ ದೇಶ ಮುದುರು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ತೆಲುಗು ಸೇರಿದಂತೆ ಇತರೆ ಭಾಷೆಗಳಲ್ಲೂ ಸಹ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಗಿಟ್ಟಿಸಿಕೊಂಡರು. ಇನ್ನೂ ಸಿನೆಮಾಗಳಲ್ಲಿ ಬ್ಯುಸಿಯಾಗಿ ಸಾಗುತ್ತಿರುವ ಸಮಯದಲ್ಲೇ ಆಕೆ ಮುಂಬೈ ಮೂಲದ ಉದ್ಯಮಿ ಸೊಹೈಲ್ ಕತೂರಿಯಾ ಎಂಬಾತನನ್ನು ಮದುವೆಯಾದರು. ಇನ್ನೂ ಹನ್ಸಿಕಾ ಮದುವೆಯಾಗಿದ್ದು ತನ್ನ ಬ್ಯುಸಿನೆಸ್ ಪಾರ್ಟನರ್‍ ನನ್ನೇ. ಜೊತೆಗೆ ಆತ ಹನ್ಸಿಕಾ ಸ್ನೇಹಿತೆಯ ಮಾಜಿ ಪತಿ ಸಹ ಹೌದು ಈ ಕುರಿತು ಸಹ ಅನೇಕ ಚರ್ಚೆಗಳು ನಡೆದವು. ಇನ್ನೂ ಅವರ ಮದುವೆಯ ವಿಡಿಯೋ ಲವ್ ಷಾದಿ ಡ್ರಾಮಾ ಎಂಬ ಟೈಟಲ್ ನಡಿ ಡಿಸ್ನಿ + ಹಾಟ್ ಸ್ಟಾರ್‍ ನಲ್ಲಿ ಸ್ಟ್ರೀಮಿಂಗ್ ಮಾಡಲಾಗುತ್ತಿದೆ. ನಟಿ ಹನ್ಸಿಕಾ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಲೇಟೆಸ್ಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ.

ಇನ್ನೂ ಹನ್ಸಿಕಾ ಮೊಟ್ವಾನಿ ಸೋಷಿಯಲ್ ಮಿಡಿಯಾದ ಮೂಲಕ ಅಭಿಮಾನಿಗಳೊಂದಿಗೆ ಲೈವ್ ಸೆಷನ್ ಮಾಡಿದ್ದರು. ಈ ವೇಳೆ ಅಭಿಮಾನಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರಗಳನ್ನು ಸಹ ನೀಡಿದ್ದಾರೆ. ಈ ವೇಳೆ ನೆಟ್ಟಿಗನೊಬ್ಬ ಕೇಳಿದ ಪ್ರಶ್ನೆಗೆ ತನ್ನದೇ ಆದ ಶೈಲಿಯಲ್ಲಿ ಉತ್ತರಿಸಿದ್ದಾರೆ. ಓರ್ವ ನೆಟ್ಟಿಗ ಮದುವೆಯಾದ ಬಳಿಕ ಜೀವನ ಹೇಗಿದೆ, ಏನಾದರೂ ಬದಲಾವಣೆಗಳು ಆಗಿದೆಯೇ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಹನ್ಸಿಕಾ ಸಹ ಉತ್ತರ ನೀಡುತ್ತಾ, ಲೈಫ್ ತುಂಬಾ ಚೆನ್ನಾಗಿದೆ. ಇನ್ನೂ ಮದುವೆ ಬಳಿಕ ಬದಲಾಗಿದ್ದು ಅದು ಒಂದು ಮಾತ್ರ ಬೇರೇನೂ ಇಲ್ಲ. ಬದಲಾಗಿದ್ದು, ನನ್ನ ಮನೆಯ ವಿಳಾಸ ಮಾತ್ರ ಎಂದು ಫನ್ನಿಯಾಗಿ ಉತ್ತರಿಸಿದ್ದಾರೆ. ಸದ್ಯ ಹನ್ಸಿಕಾ ನೀಡಿದ ಈ ಫನ್ನಿ ಕಾಮೆಂಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಸಹ ಆಗುತ್ತಿವೆ.

ಇನ್ನೂ ಮದುವೆಯಾದರೂ ಸಹ ಹನ್ಸಿಕಾ ಮತಷ್ಟು ಹಾಟ್ ಆಗಿ ಪೊಟೋಗಳನ್ನು ಶೇರ್‍ ಮಾಡುತ್ತಾ, ಸ್ವತಂತ್ರವಾಗಿ ತಿರುಗಾಡುತ್ತಿದ್ದಾರೆ. ಜೊತೆಗೆ ಆಕೆ ಸೌತ್ ನ ಸಿನೆಮಾಗಳಲ್ಲೂ ಸಹ ಬ್ಯುಸಿಯಾಗಿದ್ದಾರೆ. ಸದ್ಯ ಆಕೆ ಒಪ್ಪಿಕೊಂಡ ಸಿನೆಮಾಗಳನ್ನು ಪೂರ್ಣಗೊಳಿಸಿದ ಬಳಿಕ ಸಿನಿರಂಗದಲ್ಲಿ ಮುಂದುವರೆಯುತ್ತಾರಾ ಅಥವಾ ನಿಲ್ಲಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top