Film News

ಕಾಂಟ್ರವರ್ಸಿ ಬ್ಯೂಟಿ ಉರ್ಫಿ ಹಿಂದೂ ಹುಡುಗನ ಜೊತೆ ಮದುವೆಯಂತೆ? ವೈರಲ್ ಆದ ಪೊಟೋಸ್……!

ಬಾಲಿವುಡ್ ಸಿನಿರಂಗದಲ್ಲಿ ವಿಚಿತ್ರವಾದ ಬಟ್ಟೆಗಳನ್ನು ಧರಿಸಿ ಸುದ್ದಿಯಾಗುತ್ತಿರುವ ನಟಿಯರಲ್ಲಿ ಉರ್ಫಿ ಜಾವೇದ್ ಅಗ್ರ ಸ್ಥಾನದಲ್ಲಿರುತ್ತಾರೆ. ಸಾಮಾನ್ಯವಾಗಿ ಬಾಲಿವುಡ್ ನಲ್ಲಿ ಗ್ಲಾಮರ್‍ ಪ್ರದರ್ಶನ ಕೊಂಚ ಓವರ್‍ ಆಗಿಯೇ ಇರುತ್ತದೆ. ಆದರೆ ಉರ್ಫಿ ಎಲ್ಲರಿಗಿಂತಲೂ ಸಹ ಓವರ್‍ ಆಗಿಯೇ ಬೋಲ್ಡ್ ಪೊಟೋಸ್ ಶೇರ್‍ ಮಾಡುತ್ತಿರುತ್ತಾರೆ. ಸಾರ್ವಜನಿಕವಾಗಿಯೇ ವಿಚಿತ್ರ ಬಟ್ಟೆಗಳನ್ನು ಧರಿಸಿ ಪೋಸ್ ಕೊಡುತ್ತಿರುತ್ತಾರೆ. ಇದೀಗ ಉರ್ಫಿ ಜಾವೇದ್ ಮದುವೆಯಾಗಲಿದ್ದಾರಂತೆ. ಈ ಸಂಬಂಧ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಿನಿ ಪ್ರಪಂಚದಲ್ಲಿ ಹಾಲಿವುಡ್ ತಾರೆಯರೂ ಸಹ ಧರಿಸಿದಂತಹ ಬಟ್ಟೆಗಳನ್ನು ಧರಿಸುವ ಏಕೈಕ ನಟಿ ಎಂದರೇ ಅದನ್ನು ಉರ್ಫಿ ಜಾವೇದ್ ಎನ್ನಬಹುದು. ಸದಾ ವಿಚಿತ್ರವಾದ ಅವತಾರಗಳಲ್ಲಿ ಆಕೆ ಕಾಣಿಸಿಕೊಳ್ಳುತ್ತಾ ಸದಾ ಸುದ್ದಿಯಲ್ಲೇ ಇರುತ್ತಾರೆ. ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಬಟ್ಟೆಗಳನ್ನು ಧರಿಸಿ ಎಲ್ಲರ ಕಣ್ಣಿಗೆ ಬೀಳುತ್ತಾರೆ. ಅದರಲ್ಲೂ ಆಕೆ ಬೋಲ್ಡ್ ಆಗಿರುವ ಬಟ್ಟೆಗಳನ್ನು ಧರಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಗೋಣಿಚೀಲ, ಚೈನ್ ಗಳು, ಗ್ಲಾಸ್ ಗಳು ಮೊದಲಾದವುಗಳನ್ನು ಬಳಸಿಕೊಂಡು ಡ್ರೆಸ್ ತಯಾರಿಸಿ ಕಾಣಿಸಿಕೊಂಡಿದ್ದ ಉರ್ಫಿ ಇದೀಗ ತನ್ನ ಅಭಿಮಾನಿಗಳಿಗೆ ಶಾಕ್ ಆಗುವಂತೆ ಮಾಡಿದ್ದಾರೆ. ಯುವಕನ ಜೊತೆಗೆ ಎಂಗೇಜ್ ಮೆಂಟ್ ಮಾಡಿಕೊಳ್ಳುತ್ತಿರುವ ಪೊಟೋ ಒಂದನ್ನು ಆಕೆ ಹಂಚಿಕೊಳ್ಳುವ ಮೂಲಕ ಶಾಕ್ ನೀಡಿದ್ದಾರೆ ಎನ್ನಲಾಗಿದೆ.

ವಿಚಿತ್ರವಾದ ಬಟ್ಟೆಗಳಿಂದಲೇ ಅಪಾರ ಸಂಖ್ಯೆಯ ಅಭಿಮಾನಿಗಳೊಂದಿಗೆ ಖ್ಯಾತಿಯನ್ನು ಸಹ ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ಮೂಲಕ ಫೇಂ ಪಡೆದುಕೊಂಡ ಈಕೆ ಅನೇಕ ಕಿರುತೆರೆಯ ಸೀರಿಯಲ್ ಗಳಲ್ಲೂ ಸಹ ನಟಿಸಿದ್ದಾರೆ. ಸದಾ ವಿಚಿತ್ರ ಬಟ್ಟೆಗಳ ಮೂಲಕ ಸದ್ದು ಮಾಡುತ್ತಿದ್ದ ಉರ್ಫಿ ಇದೀಗ ಹಿಂದೂ ಯುವಕನೊಬ್ಬನ ಜೊತೆಗೆ ಹೋಮಕುಂಡದ ಮುಂದೆ ಕುಳಿತು ಕಾಣಿಸಿಕೊಂಡಿದ್ದಾರೆ. ಈ ಪೊಟೋದಲ್ಲಿ ಆಕೆ ಸಂಪ್ರದಾಯಬದ್ದವಾಗಿ ಸಲ್ವಾರ್‍ ಹಾಕಿ ಕಾಣಿಸಿಕೊಂಡಿದ್ದಾರೆ. ಈ ಪೊಟೋ ಕಾರಣದಿಂದ ಉರ್ಫಿ ಹಿಂದೂ ಯುವಕನ ಜೊತೆಗೆ ಎಂಗೇಜ್ ಮೆಂಟ್ ಮಾಡಿಕೊಂಡರೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಇನ್ನೂ ಈ ಪೊಟೋ ಬಗ್ಗೆ ಯಾವುದೇ ಸ್ಪಷ್ಟನೆ ಸಿಗದ ಕಾರಣ ಸೋಷಿಯಲ್ ಮಿಡಿಯಾದಲ್ಲಿ ವಿವಿಧ ರೀತಿಯ ಚರ್ಚೆಗಳು ಶುರುವಾಗಿದೆ ಎನ್ನಲಾಗಿದೆ.

Most Popular

To Top