ಸಲಾರ್ ಸಿನೆಮಾದಲ್ಲಿ ಮಲ್ಟಿ ಸ್ಟಾರರ್ಸ್? ಯಶ್, ಜೂನಿಯರ್ ಎನ್.ಟಿ.ಆರ್ ಎಂಟ್ರಿ, ಥ್ರಿಲ್ ಆದ ಫ್ಯಾನ್ಸ್…..!

Follow Us :

ಸ್ಯಾಂಡಲ್ ವುಡ್ ನಿರ್ದೇಶಕ ಪ್ರಶಾಂತ್ ನೀಲ್ ಕೆ.ಜಿ.ಎಫ್ ಸಿನೆಮಾದ ಮೂಲಕ ವಿಶ್ವದಾದ್ಯಂತ ಕ್ರೇಜ್ ಪಡೆದುಕೊಂಡರು. ಸದ್ಯ ಪ್ರಶಾಂತ್ ನೀಲ್ ಬಿಗ್ ಬಜೆಟ್ ನಲ್ಲಿ ಸಲಾರ್‍ ಸಿನೆಮಾ ಮಾಡುತ್ತಿದ್ದಾರೆ. ಈ ಸಿನೆಮಾ ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿದೆ. ಇದೀಗ ಈ ಸಿನೆಮಾದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್‍ ಗಳಾದ ರಾಕಿಂಗ್ ಸ್ಟಾರ್‍ ಯಶ್ ಹಾಗೂ ಯಂಗ್ ಟೈಗರ್‍ ಎನ್.ಟಿ.ಆರ್‍ ಸಹ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದ್ದು, ಸುದ್ದಿ ಕೇಳಿದ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ ಎನ್ನಲಾಗಿದೆ.

ಸಲಾರ್‍ ಸಿನೆಮಾ ಕೆಜಿಎಫ್-3 ಎಂದೂ ಸಹ ಹೇಳಲಾಗಿತ್ತು. ಸಲಾರ್‍ ಸಿನೆಮಾದ ಕ್ಲೈಮ್ಯಾಕ್ಸ್ ನಲ್ಲಿ ಯಶ್ ಹಾಗೂ ಜೂನಿಯರ್‍ ಎನ್.ಟಿ.ಆರ್‍ ಸಹ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಸಲಾರ್‍ ಟೀಸರ್‍ ಗಮನಿಸಿದರೇ ಕೆಜಿಎಫ್ ಸಿನೆಮಾದ ಹೋಲಿಕೆಗಳು ಸಹ ಕಾಣಿಸಿತ್ತು. ಇದೇ ಸಮಯದಲ್ಲಿ ಕೆಜಿಎಫ್-3 ಸಿನೆಮಾ ಸಹ ಶುರುವಾಗಲಿದೆ ಎಂಬ ರೂಮರ್‍ ಗಳೂ ಸಹ ಕೇಳಿಬರುತ್ತಿವೆ. ಇನ್ನೂ ಜೂನಿಯರ್‍ ಎನ್.ಟಿ.ಆರ್‍ ಜೊತೆಗೆ ಸಹ ಸಿನೆಮಾ ಮಾಡುವುದಾಗಿ ಪ್ರಶಾಂತ್ ನೀಲ್ ಘೋಷಣೆ ಮಾಡಿದ್ದಾರೆ. ಈ ಸಿನೆಮಾ ಸಹ ಕೆಜಿಎಫ್ ಸಿನೆಮಾದೊಂದಿಗೆ ಲಿಂಕ್ ಇದೆ ಎನ್ನಲಾಗಿದೆ.

ಇದೀಗ ಮತ್ತೊಂದು ಸುದ್ದಿ ಸಹ ಕೇಳಿಬರುತ್ತಿದೆ. ಸಲಾರ್‍ ಸಿನೆಮಾದಲ್ಲಿ ಯಶ್ ಹಾಗೂ ಎನ್.ಟಿ.ಆರ್‍ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಪ್ರಮುಖ ದೃಶ್ಯವೊಂದರಲ್ಲಿ ಅವರು ಎಂಟ್ರಿ ಕೊಡಲಿದ್ದಾರಂತೆ. ಈ ಸಂಬಂಧ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ರೂಮರ್‍ ನಿಜವೇ ಆದರೇ  ಈ ಸಿನೆಮಾದ ರೇಂಜ್ ಎಷ್ಟಿರುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಮೂರು ಮಂದಿ ಪ್ಯಾನ್ ಇಂಡಿಯಾ ಮಾಸ್ ಹಿರೋಗಳು ನಟಿಸಿದ ಭಾರಿ ಸಿನೆಮಾ ಆಗಿ ಕ್ರೇಜ್ ಪಡೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಈ ಬಗ್ಗೆ ಯಾವುದೇ ಅಧಿಕೃತ ಸಮಾಚಾರ ಇಲ್ಲದೇ ಇದ್ದರೂ ಸುದ್ದಿ ಮಾತ್ರ ಸಖತ್ ವೈರಲ್ ಆಗುತ್ತಿದೆ. ಈ ಹಿಂದೆ ಸಲಾರ್‍ ಸಿನೆಮಾ ಕನ್ನಡದ ಉಗ್ರಂ ಸಿನೆಮಾದ ರಿಮೇಕ್ ಎಂದೂ ಸಹ ಹೇಳಲಾಗುತ್ತಿತ್ತು. ಈ ಕಾರಣದಿಂದಲೇ ಯೂಟ್ಯೂಬ್ ನಿಂದ ಉಗ್ರಂ ಹಿಂದಿ ವರ್ಷನ್ ಡಿಲೀಟ್ ಮಾಡಲಾಗಿದೆ ಎಂದು ಸಹ ಹೇಳಲಾಗಿತ್ತು. ಒಟ್ಟಿನಲ್ಲಿ ಸಲಾರ್‍ ಸಿನೆಮಾದ ಹೈಫ್ ದಿನೇ ದಿನೇ ಹೆಚ್ಚಾಗುತ್ತಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಸಿನೆಮಾ ಡಿಸೆಂಬರ್‍ 22 ರಂದು ವಿಶ್ವದಾದ್ಯಂತ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಸಹ ಮಾಡಿದೆ.