ಬೋಲ್ಡ್ ದೃಶ್ಯಗಳಲ್ಲಿನ ನಟನೆಯ ಬಗ್ಗೆ ತಮನ್ನಾ ಪ್ರಿಯಕರ ವಿಜಯ್ ವರ್ಮಾ ರಿಯಾಕ್ಷನ್……!

Follow Us :

ಗ್ಲಾಮರ್‍ ಮೂಲಕ ಸೌತ್ ಸಿನಿರಂಗವನ್ನು ಸುಮಾರು ವರ್ಷಗಳ ಕಾಲ ಆಳಿದಂತಹ ನಟಿ ಮಿಲ್ಕಿ ಬ್ಯೂಟಿ ತಮನ್ನಾ ಇತ್ತಿಚಿಗೆ ಭಾರಿ ಸುದ್ದಿಯಾಗುತ್ತಿದ್ದಾರೆ. ಆಕೆ ಇತ್ತಿಚಿಗೆ ಎರಡು ವೆಬ್ ಸಿರೀಸ್ ಗಳಲ್ಲಿ ನಟಿಸಿದ್ದು, ಈ ಸಿರೀಸ್ ಗಳಲ್ಲಿ ಆಕೆ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಆಕೆ ಈ ರೀತಿಯಾಗಿ ನಟಿಸಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಆಕೆಯ ಪ್ರಿಯಕರ ವಿಜಯ್ ವರ್ಮಾ ಇದೀಗ ರಿಯಾಕ್ಟ್ ಆಗಿದ್ದಾರೆ. ಈ ಬಗ್ಗೆ ಆತ ಹೇಳಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಲವ್ ಬರ್ಡ್ಸ್ ತಮನ್ನಾ ಹಾಗೂ ವಿಜಯ್ ನಟಿಸಿರುವ ಲಸ್ಟ್ ಸ್ಟೋರಿಸ್-2 ವೆಬ್ ಸಿರೀಸ್ ಸಖತ್ ಸದ್ದು ಮಾಡುತ್ತಿದೆ. ಪ್ರತಿ ನಿತ್ಯ ಈ ಸಿರೀಸ್ ಗೆ ಸಂಬಂಧಿಸಿದ ಸುದ್ದಿ ವೈರಲ್ ಆಗುತ್ತಿದೆ. ಇದೇ ಮಾಹೆಯ 29 ರಿಂದ ಈ ಸಿರೀಸ್ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಸಹ ಆಗಲಿದೆ. ಕೆಲವು ದಿನಗಳ ಹಿಂದೆಯಷ್ಟೆ ಈ ಸಿರೀಸ್ ನ ಟ್ರೈಲರ್‍ ಸಹ ಬಿಡುಗಡೆಯಾಗಿದ್ದು, ವಿಭಿನ್ನ ರೀತಿಯಲ್ಲಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಈ ಸಿರೀಸ್ ನಲ್ಲಿ ಮದುವೆಗೂ ಮುಂಚೆ ಟ್ರಯಲ್ ಎಂಬಂತೆ ತಮನ್ನಾ ಹಾಗೂ ವಿಜಯ್ ವರ್ಮಾ ತುಂಬಾ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಸಿರೀಸ್ ಶೀಘ್ರದಲ್ಲೇ ಸ್ಟ್ರೀಮಿಂಗ್ ಆಗಲಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಮೋಷನ್ ಕೆಲಸಗಳನ್ನು ಸಹ ಜೋರಾಗಿಯೇ ನಿರ್ವಹಿಸುತ್ತಿದೆ. ಈ ಹಾದಿಯಲ್ಲೇ ನಟ ವಿಜಯ್ ವರ್ಮಾ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ನಟ ವಿಜಯ್ ವರ್ಮಾ ಸಂದರ್ಶನವೊಂದರಲ್ಲಿ ಭಾಗಿಯಾಗಿ ಅನೇಕ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಈ ವೇಳೆ ತಮನ್ನಾ ಆತನಿಗಾಗಿ ಬ್ರೇಕ್ ಮಾಡಿದ ರೂಲ್ಸ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಲಸ್ಟ್ ಸ್ಟೋರಿಸ್-2 ಸಿರೀಸ್ ಗಾಗಿ ಆಕೆ 18 ವರ್ಷದ ನೋ ಕಿಸ್ ಪಾಲಿಸಿಯನ್ನು ಬ್ರೇಕ್ ಮಾಡಿದ್ದಾರೆ. ಆನ್ ಸ್ಕ್ರೀನ್ ಮೇಲೆ ತಮನ್ನಾ ಇಲ್ಲಿಯವರೆಗೂ ಯಾರಿಗೂ ಕಿಸ್ ನೀಡಿಲ್ಲ. ಆದರೆ ಆಕೆ ನನಗಾಗಿ ಆ ರೂಲ್ ಸಹ ಬ್ರೇಕ್ ಮಾಡಿದ್ದಾರೆ. ಈ ವಿಚಾರವನ್ನು ಈ ಹಿಂದೆ ನಡೆದ ಸಂದರ್ಶನದಲ್ಲಿ ತಮನ್ನಾ ಸಹ ಹೇಳಿದ್ದರು. ಇನ್ನೂ ಲಸ್ಟ್ ಸ್ಟೋರಿಸ್ ನಲ್ಲಿನ ಆ ಪಾತ್ರಕ್ಕೆ ತಮನ್ನಾ ಮಾತ್ರ ಸ್ಯೂಟ್ ಆಗುತ್ತಾರೆ. ಆಕೆ ನಟಿಸುವ ಪಾತ್ರಕ್ಕೆ ಜೀವ ಕೊಟ್ಟು ನಟಿಸುತ್ತಾರೆ. ತುಂಬಾ ಶ್ರದ್ದೆಯಿಂದ ಕೆಲಸ ಮಾಡುತ್ತಾರೆ. ಆಕೆ ಮಾತ್ರ ಆ ರೀತಿಯಾಗಿ ಮಾಡುತ್ತಾರೆ ಎಂದಿದ್ದಾರೆ.

ಅಷ್ಟೇಅಲ್ಲದೇ ಶೂಟಿಂಗ್ ವೇಳೆ ತಮನ್ನಾ ಎನರ್ಜಿ ತುಂಭಾನೆ ಹೈ ಆಗಿರುತ್ತದೆ. ಆ ಕಾರಣದಿಂದಲೇ ತಮನ್ನಾ ಐಕಾನ್. ನಾನು ತಮನ್ನಾ ಅಭಿನಯದ ಬಾಹುಬಲಿ ಸಿನೆಮಾ ಹಾಗೈ ಬಬ್ಲಿ ಬೌನ್ಸರ್‍ ಸಿನೆಮಾಗಳನ್ನು ನೋಡಿದ್ದೆ. ಈ ಸಿನೆಮಾಗಳಲ್ಲಿ ಆಕೆಯ ಅಭಿನಯಕ್ಕೆ ಫೀದಾ ಆಗಿದ್ದೇನೆ. ಲಸ್ಟ್ ಸ್ಟೋರೀಸ್ 2 ನೋಡಿದ ಬಳಿವೂ ಪ್ರೇಕ್ಷಕರು ಅದೇ ರೀತಿಯ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ವಿಜಯ್ ವರ್ಮಾ ಕಾಮೆಂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.