ಐಸಿಐಸಿಐ ಬ್ಯಾಂಕ್ ಉದ್ಯೋಗಿಯಾದರೂ ಲ್ಯಾಪ್ ಟಾಪ್ ಕದಿಯುತ್ತಿದ್ದ ಕಳ್ಳಿಯನ್ನು ಹಿಡಿದ ಪೊಲೀಸರು, 24 ಲ್ಯಾಪ್ ಟಾಪ್ ಸೀಜ್…..!

Follow Us :

ಸಾವಿರಗಟ್ಟಲೇ ಸಂಪಾದನೆಯಿದ್ದರೂ ಸಹ ಕೆಲವರು ಕಳ್ಳತನ ಮಾಡುವ ಖಯಾಲಿಯನ್ನು ಹೊಂದಿರುತ್ತಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಸಿಐಸಿಐ ಬ್ಯಾಂಕ್ ಉದ್ಯೋಗಿಯಾಗಿರುವ ಯುವತಿಯೊಬ್ಬಳು ಲ್ಯಾಪ್ ಟಾಪ್ ಕಳ್ಳತನ ಮಾಡುವ ಖಯಾಲಿ ಇಟ್ಟುಕೊಂಡಿದ್ದು, ಆಕೆಯನ್ನು ಬಂಧಿಸಿರುವ ಪೊಲೀಸರು ಆಕೆಯಿಂದ 10 ಲಕ್ಷ ಮೌಲ್ಯದ 24 ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಐಟಿ-ಬಿಟಿ ಸಿಟಿ ಎಂದೇ ಕರೆಯಲಾಗುವ ಬೆಂಗಳೂರಿನಲ್ಲಿ ಐಸಿಐಸಿಈ ಬ್ಯಾಂಕ್ ನಲ್ಲಿ ಉದ್ಯೋಗ ಮಾಡುತ್ತಿದ್ದರೂ, ಐಶಾರಾಮಿ ಜೀವನ ನಡೆಸಲು ಕಳ್ಳತನ ಮಾಡುವ ಹಾದಿಯನ್ನು ಹಿಡಿದಿದ್ದಾಳೆ. ಪೇಯಿಂಗ್ ಗೆಸ್ಟ್, ಹೋಟೆಲ್ ಗಳಲ್ಲಿ ಬ್ಯಾಗ್ ಇಟ್ಟು ಊಟ ಮಾಡಲು ಹೋಗುತ್ತಿದ್ದವರನ್ನು ಗಮನಿಸಿ ಅವರ ಲ್ಯಾಪ್ ಟಾಪ್ ಕದಿಯುತ್ತಿದ್ದಳು. ಈ ಸಂಬಂಧ ಹೆಚ್.ಎ.ಎಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಚಾಲಾಕಿ ಕಳ್ಳಿಯನ್ನು ಬಂದಿಸಿದ್ದಾರೆ. ಆಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ಬಳಿಕ ಎಲ್ಲಾ ವಿಚಾರಗಳನ್ನು ಆಕೆ ಹೊರಹಾಕಿದ್ದಾರೆ.

ಬಂಧಿತ ಆರೋಪಿ ಹೋಟೆಲ್, ಪಿಜಿಗಳನ್ನು ಟಾರ್ಗೆಟ್ ಮಾಡಿ ಅವರು ಊಟಕ್ಕೆ ಹೋಗುವ ಸಮಯದಲ್ಲಿ ಲ್ಯಾಪ್ ಟಾಪ್ ಕದ್ದು ಎಸ್ಕೇಪ್ ಆಗುತ್ತಿದ್ದಳಂತೆ. ಬ್ಯಾಂಕ್ ನ ಉದ್ಯೋಗಿಯಾಗಿದ್ದರೂ ಐಶಾರಾಮಿ ಜೀವನ ನಡೆಸಲು ಕಳ್ಳತನಕ್ಕೆ ಇಳಿದಿದ್ದಾಳೆ. ಇಂದಿರಾನಗರ, ಕೋರಮಂಗಲ, ಹೆಚ್.ಎ.ಎಲ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲ್ಯಾಪ್ ಟಾಪ್ ಗಳನ್ನು ಕಳ್ಳತನ ಮಾಡುತ್ತಿದ್ದಳಂತೆ. ಸದ್ಯ ಆಕೆಯನ್ನು ಬಂಧಿಸಿರುವ ಪೊಲೀಸರು ಆಕೆಯ ಬಳಿಯಿದ್ದ 10 ಲಕ್ಷ ಬೆಲೆಬಾಳುವ 24 ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.