Film News

ಪುಷ್ಪಾ ಸಿನೆಮಾದಲ್ಲಿ ಅಲ್ಲು ಅರ್ಜುನ್ ಮಾಡಿದ ಸ್ಟೈಲ್ ಆ ಸಿನೆಮಾದಿಂದ ಕಾಪಿ ಹೊಡೆದ್ರಾ, ವೈರಲ್ ಆದ ಸುದ್ದಿ…..!

ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನೆಮಾ ದೇಶದ ಸಿನಿರಂಗದಲ್ಲಿ ದೊಡ್ಡ ರೇಂಜ್ ನಲ್ಲಿ ಸಕ್ಸಸ್ ಆದ ಸಿನೆಮಾ. ಸಿನೆಮಾದಲ್ಲಿನ ಹಾಡುಗಳು ಹಾಗೂ ಡೈಲಾಗ್ ಗಳು ಎಲ್ಲರನ್ನೂ ರಂಜಿಸಿದ್ದು, ಇಂದಿಗೂ ಸಹ ಹವಾ ಮುಂದುವರೆಸಿಕೊಂಡು ಹೋಗುತ್ತಿದೆ. ಬಾಲಿವುಡ್ ಸಿನಿರಂಗದಲ್ಲೂ ಸಹ ತೆಲುಗು ಸಿನೆಮಾದ ಖದರ್‍ ತೋರಿದ  ಈ ಸಿನೆಮಾದಲ್ಲಿ ಅಲ್ಲು ಅರ್ಜುನ್ ಮ್ಯಾನರಿಜಂ ದಿವಂಗತ ಶ್ರೀಹರಿ ರವರ ಹಳೇಯ ಸಿನೆಮಾದ ಸ್ಟೈಲ್ ಕಾಫಿ ಹೊಡೆದಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಸುಕುಮಾರ್‍ ನಿರ್ದೇಶನದಲ್ಲಿ ತೆರೆಗೆ ಬಂದ ಈ ಸಿನೆಮಾ ಅನೇಕ ರೆಕಾರ್ಡ್‌ಗಳನ್ನು ಸೃಷ್ಟಿ ಮಾಡಿದೆ. ರಕ್ತ ಚಂದನದ ಸ್ಮಗ್ಲಿಂಗ್ ಮಾಡುವ ಕಥೆಯನ್ನು ಆಧರಿಸಿದ ಈ ಸಿನೆಮಾ ಭಾರಿ ಹೆಸರು ಸೃಷ್ಟಿಸಿತ್ತು. ಈ ಸಿನೆಮಾಗಾಗಿ ರಾಷ್ಟ್ರೀಯ ಉತ್ತಮ ನಟನಾಗಿ ಅಲ್ಲು ಅರ್ಜುನ್ ರವರಿಗೆ ಅವಾರ್ಡ್ ಸಹ ಪಡೆದುಕೊಂಡರು. ಈಗಲೂ ಈ ಸಿನೆಮಾದ ಮ್ಯಾನರೀಜಂ, ಡೈಲಾಗ್ ಗಳು, ವಾಕಿಂಗ್ ಸ್ಟೈಲ್ ಅಭಿಮಾನಿಗಳನ್ನು ಆಕರ್ಷಣೆ ಮಾಡಿದೆ. ಪುಷ್ಪಾ ತಗ್ಗೆದೇಲೆ ಎಂಬ ಡೈಲಾಗ್, ಆತನ ವಾಕಿಂಗ್ ಸ್ಟೈಲ್ ಅನೇಕರು ಫಾಲೋ ಮಾಡಿದ್ದಾರೆ. ಕೇವಲ ಅಲ್ಲು ಅರ್ಜುನ್ ಅಭಿಮಾನಿಗಳು ಮಾತ್ರವಲ್ಲದೇ ದೊಡ್ಡ ದೊಡ್ಡ ಸ್ಟಾರ್‍ ಗಳು, ಕ್ರಿಕೆಟಿಗರು ಸಹ ಆ ಸ್ಟೈಲ್ ಅನುಕರಣೆ ಮಾಡಿದ್ದರು.

ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಅದರಂತೆ ಅಲ್ಲು ಅರ್ಜುನ್ ವಾಕಿಂಗ್ ಸ್ಟೈಲ್ ಸುಮಾರು ವರ್ಷಗಳ ಹಿಂದೆಯೇ ದಿವಂಗತ ಶ್ರೀಹರಿ ಮಾಡಿದ್ದರಂತೆ. ಕಳೆದ 2002 ರಲ್ಲಿ ತೆರೆಕಂಡ ಪೃಥ್ವಿನಾರಾಯಣ ಎಂಬ ಸಿನೆಮಾದಲ್ಲಿ ಪುಷ್ಪಾ ಸಿನೆಮಾದಲ್ಲಿ ಅಲ್ಲು ಅರ್ಜುನ್ ರವರಂತೆ ಸೇಮ್ ವಾಕಿಂಗ್ ಸ್ಟೈಲ್ ಮೂಲಕ ರಂಜಿಸಿದ್ದರು. ಇದೀಗ ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದ ಅನೇಕರು ಶ್ರೀಹರಿ ಸ್ಟೈಲ್ ಸೂಪರ ಎಂದು ಹೇಳಿದ್ದಾರೆ. ಜೊತೆಗೆ ಪುಷ್ಪಾ ಸಿನೆಮಾದಲ್ಲಿ ಅಲ್ಲು ಅರ್ಜುನ್ ರವರು ಶ್ರೀಹರಿ ರವರ ಸ್ಟೈಲ್ ಕಾಫಿ ಹೊಡೆದಿದ್ದಾರೆ ಎಂದು ಕಾಮೆಂಟ್ ಗಳು ಮಾಡುತ್ತಿದ್ದಾರೆ. ಇನ್ನೂ ಸುಮಾರು ವರ್ಷಗಳಿಂದ ಪುಷ್ಪಾ ಅಭಿಮಾನಿಗಳು ಪುಷ್ಪಾ-2 ಸಿನೆಮಾಗಾಗಿ ಕಾಯುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದ್ದು, ಆಗಸ್ಟ್ 15 ರಂದು ಈ ಸಿನೆಮಾ ತೆರೆಕಾಣಲಿದೆ.

Most Popular

To Top