Film News

ಬೇಬಿ ಸಿನೆಮಾದ ನಟಿಗೆ ಅತ್ಯಾಚಾರದ ಬೆದರಿಕೆ, ಆಕೆಯನ್ನು ಫಾಲೋ ಮಾಡುತ್ತಾ ಕಿರುಕುಳವಂತೆ…!

ಸಿನೆಮಾ ಸೆಲೆಬ್ರೆಟಿಗಳು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲೇ ಇರುತ್ತಾರೆ. ಅದರ ಜೊತೆಗೆ ಕೆಲವು ಸೆಲೆಬ್ರೆಟಿಗಳಂತೂ ಕಿರುಕುಳ, ಬೆದರಿಕೆ ಗಳನ್ನು ಎದುರಿಸುತ್ತಿರುತ್ತಾರೆ. ಅದರಲ್ಲೂ ಹೊಸದಾಗಿ ಫೇಮಸ್ ಆದ ಸೆಲೆಬ್ರೆಟಿಗಳಿಗಂತೂ ಕೊಂಚ ಹೆಚ್ಚಾಗಿಯೇ ಇರುತ್ತದೆ ಎಂದು ಹೇಳಬಹುದು. ಇತ್ತೀಚಿಗಷ್ಟೆ ಬಿಡುಗಡೆಯಾದ ಬೇಬಿ ಸಿನೆಮಾದ ನಟಿಗೂ ಸಹ ಅಂತಹ ಬೆದರಿಕೆಗಳು, ಕಿರುಕುಳಗಳು ಹೆಚ್ಚಾಗಿದೆಯಂತೆ. ಅಷ್ಟಕ್ಕೂ ಆಕೆಗೆ ಬೆದರಿಕೆಗಳು ಬಂದಿದ್ದಾದರೂ ಏಕೆ ಎಂಬ ವಿಚಾರಕ್ಕೆ ಬಂದರೇ,

ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಅಭಿನಯದ ಬೇಬಿ ಸಿನೆಮಾ ಕೆಲವು ದಿನಗಳ ಹಿಂದೆಯಷ್ಟೆ ರಿಲೀಸ್ ಆಗಿದೆ. ಈ ಸಿನೆಮಾ ಬಿಡುಗಡೆಯಾಗಿ ಹತ್ತು ದಿನಗಳು ಕಳೆದರೂ ಭಾರಿ ಸದ್ದು ಮಾಡುತ್ತಿದೆ. ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾದ ಈ ಸಿನೆಮಾ ಈಗಾಗಲೇ ಸುಮಾರು 70 ಕೋಟಿ ಕಲೆಕ್ಷನ್ ಮಾಡಿದೆ. ಈ ಸಿನೆಮಾದ ಡಿಸ್ಟ್ರಿಬ್ಯೂಟರ್‍ ಗಳು ಲಾಭದ ಖುಷಿಯಲ್ಲಿದ್ದಾರೆ. ದೊಡ್ಡ ದೊಡ್ಡ ಸಿನೆಮಾಗಳ ತಂದುಕೊಡದ ಲಾಭವನ್ನು ಈ ಸಿನೆಮಾ ತಂದುಕೊಟ್ಟಿದೆ. ಜೊತೆಗೆ ಈ ಸಿನೆಮಾದಲ್ಲಿ ನಟಿಸಿದ ಕಲಾವಿದರಿಗೂ ಸಹ ಅದೇ ಮಾದರಿಯ ಕ್ರೇಜ್ ಸಹ ದೊರೆತಿದೆ. ಈ ಸಿನೆಮಾದಲ್ಲಿ ಮೂವ್ವರು ಮೈನ್ ಲೀಡ್ಸ್ ಪಾತ್ರಗಳಲ್ಲಿ ನಟಿಸಿದ್ದಾರೆ. ಸೀತ ಹಾಗೂ ವೈಷ್ಣವಿ ಎರಡೂ ಪಾತ್ರಗಳೂ ಸಹ ತುಂಬಾನೆ ಕ್ರೇಜ್ ಪಡೆದುಕೊಂಡಿದೆ. ಸೀತೆಯ ಪಾತ್ರ ಕಾಣಿಸುವುದು ಕಡಿಮೆಯಾದರೂ ಸಹ ಇಂಪ್ಯಾಕ್ಟ್ ಮಾತ್ರ ಜಾಸ್ತಿ ಇದೆ ಎಂದು ಹೇಳಬಹುದಾಗಿದೆ.

ಇನ್ನೂ ಸೀತೆಯ ಪಾತ್ರ ನೆಗಟೀವ್ ಆದ ಹಿನ್ನೆಲೆಯಲ್ಲಿ ಅನೇಕರು ಆಕೆಯನ್ನು ವಿರೋಧಿಸಿದ್ದಾರೆ. ಸಿನೆಮಾ ಪರವಾಗಿ ಆಕೆಯ ಮೇಲೆ ಕೋಪಗೊಂಡರೇ ಪರವಾಗಿಲ್ಲ. ಆದರೆ ನಿಜ ಜೀವನದಲ್ಲೂ ಸಹ ಅನೇಕರು ಆಕೆಯನ್ನು ವಿರೋಧಿಸುತ್ತಿದ್ದಾರಂತೆ. ಈ ಬಗ್ಗೆ ಆಕೆ ಹೇಳಿಕೊಂಡಿದ್ದಾರೆ. ಅನೇಕರು ಆಕೆಯ ಹಿಂದೆ ಬಿದ್ದು ರೇಪ್ ಮಾಡಿ ಸಾಯಿಸಿಬಿಡುತ್ತೇವೆ ಎಂದರೇ ಮತ್ತೆ ಕೆಲವರು ಆಕೆಯ ಮೇಲೆ ಹಲ್ಲೆಗೂ ಟ್ರೈ ಮಾಡಿದ್ದರಂತೆ. ಒಂದು ದಿನ ಈವೆಂಟ್ ಮುಗಿಸಿ ಬರುವಾಗ ಕೆಲವು ಹುಡುಗರು ಹಿಂದೆ ಬಿದ್ದು ಬೆದರಿಕೆ ಹಾಕಿದ್ದಾರಂತೆ. ಅವರ ಬಗ್ಗೆ ಪೊಲೀಸರಿಗೆ ದೂರು ನೀಡಿ ಎಂದು ಸ್ನೇಹಿತರು ಸಲಹೆ ನೀಡಿದ್ದರಂತೆ. ಆದರೆ ಆಕೆ ಆ ಕೆಲಸ ಮಾಡಲಿಲ್ಲವಂತೆ. ಅವರೆಲ್ಲಾ ನನ್ನ ರೀಲ್ ಲೈಫ್ ಕ್ಯಾರೆಕ್ಟರ್‍ ನೋಡಿ ಆ ರೀತಿ ಮಾಡುತ್ತಿದ್ದಾರೆ. ಅದಕ್ಕಾಗಿ ಅದನ್ನು ನಾನು ಕಿವಿಗೆ ಹಾಕಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಇನ್ನೂ ನಟಿ ಸೀತ ಈ ಹಿಂದೆ ಅನೇಕ ಕಿರು ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಆಕೆಗೆ ಬೇಬಿ ಸಿನೆಮಾ ಮಾತ್ರ ಭಾರಿ ಕ್ರೇಜ್ ತಂದುಕೊಟ್ಟಿದೆ. ಈ ಸಿನೆಮಾದ ಮೂಲಕ ಭಾರಿ ಫೇಮಸ್ ಆದ ಈಕೆ ಮುಂದಿನ ದಿನಗಳಲ್ಲಿ ಮತಷ್ಟು ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top