Film News

ಸೌಂದರ್ಯ ವೃದ್ದಿಗಾಗಿ ಇಂಜೆಕ್ಷನ್ ಪಡೆದುಕೊಂಡರೇ ಆಪಲ್ ಬ್ಯೂಟಿ ಹನ್ಸಿಕಾ, ಇದಕ್ಕೆ ಹನ್ಸಿಕಾ ತಾಯಿ ಕೊಟ್ಟ ಸ್ಪಷ್ಟನೆ?

ಮೊದಲನೇ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ಹನ್ಸಿಕಾ ಸಹ ಒಬ್ಬರಾಗಿದ್ದಾರೆ. ತೆಲುಗಿನ ದೇಶಮುದುರು ಎಂಬ ಸಿನೆಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ನಟಿಸಿದ ಹನ್ಸಿಕಾ ಮೊಟ್ವಾನಿ ಕಡಿಮೆ ಸಮಯದಲ್ಲೇ ಅನೇಕ ಯುವಕರ ಕನಸಿನ ರಾಣಿಯಾದರು. ಈ ಸಿನೆಮಾದ ಬಳಿಕ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಸಹ ಪಡೆದುಕೊಂಡರು. ಕೆಲವು ದಿನಗಳ ಹಿಂದೆಯಷ್ಟೆ ಹನ್ಸಿಕಾ ತನ್ನ ಬ್ಯುಸಿನೆಸ್ ಪಾರ್ಟನರ್‍ ಸೊಹೈಲ್ ರನ್ನು ವಿವಾಹವಾದರು. ಇದೀಗ ಹನ್ಸಿಕಾ ಸೌಂದರ್ಯ ವೃದ್ದಿಗಾಗಿ ಇಂಜೆಕ್ಷನ್ಸ್ ಪಡೆದುಕೊಂಡಿದ್ದರು ಎಂಬ ರೂಮರ್‍ ಒಂದು ಕೇಳಿಬರುತ್ತಿದ್ದು, ಅದಕ್ಕೆ ಹನ್ಸಿಕಾ ತಾಯಿ ಸ್ಪಷ್ಟನೆ ಸಹ ನೀಡಿದ್ದಾರೆ.

ಟೀನೇಜ್ ನಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಹನ್ಸಿಕಾ ಗ್ಲಾಮರ್‍ ಪರವಾಗಿ ಭಾರಿ ಫೇಂ ಸಂಪಾದಿಸಿಕೊಂಡರು. ಇಂದಿಗೂ ಸಹ ಆಕೆ ಗ್ಲಾಮರ್‍ ಕೊಂಚ ಕೂಡ ಕಡಿಮೆಯಾಗಿಲ್ಲ ಎಂಬಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಕಳೆದ ವರ್ಷ ಡಿ.4 ರಂದು ಹನ್ಸಿಕಾ ಜೈಪೂರ್‍ ನ ಪ್ಯಾಲೆಸ್ ಒಂದರಲ್ಲಿ ಸೊಹೈಲ್ ಎಂಬಾತನೊಂದಿಗೆ ಸಪ್ತಪದಿ ತುಳಿದಿದ್ದಾರೆ. ಸದ್ಯ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿರುವ ಹನ್ಸಿಕಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ಶೋ ನಲ್ಲಿ ಹನ್ಸಿಕಾ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಆಕೆಯ ಮೇಲೆ ಕೇಳಿಬರುತ್ತಿರುವ ಕೆಲವೊಂದು ರೂಮರ್‍ ಗಳ ಬಗ್ಗೆ ಸಹ ರಿಯಾಕ್ಟ್ ಆಗಿದ್ದಾರೆ. ಈ ಶೋ ನಲ್ಲಿ ಹನ್ಸಿಕಾ ಜೊತೆಗೆ ಆಕೆಯ ತಾಯಿ ಮೋನಾ ಸಹ ಭಾಗಿಯಾಗಿದ್ದರು. ಸೌಂದರ್ಯ ವೃದ್ದಿಗಾಗಿ ಹನ್ಸಿಕಾ ಇಂಜೆಕ್ಷನ್ ಪಡೆದುಕೊಂಡಿದ್ದರು ಎಂಬ ರೂಮರ್‍ ಬಗ್ಗೆ ಈ ಶೋ ನಲ್ಲಿ ಸ್ಪಷ್ಟನೆ ದೊರೆತಿದೆ.

ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳಿಗೆ ಸಂಬಂಧಿಸಿದ ಸುದ್ದಿಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ನಟಿಯರ ದೇಹದ ಭಾಗಗಳಲ್ಲಿ ಏನಾದರೂ ಬದಲಾವಣೆಗಳು ಕಂಡು ಬಂದರೇ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಚರ್ಚೆಗಳೂ ಸಹ ನಡೆಯುತ್ತವೆ. ಅವರ ದೇಹದಲ್ಲಿನ ಬದಲಾವಣೆಗೆ ಕಾರಣಗಳೇನು, ಸರ್ಜರಿ ಮಾಡಿಸಿಕೊಂಡರೇ ಎಂಬ ಅನುಮಾನಗಳನ್ನು ಸೋಷಿಯಲ್ ಮಿಡಿಯಾದ ವೇದಿಕೆಯಲ್ಲಿ ರಿವೀಲ್ ಮಾಡುತ್ತಾರೆ. ಈ ಹಾದಿಯಲ್ಲೇ ಹನ್ಸಿಕಾ ಸೌಂದರ್ಯ ವೃದ್ದಿಗಾಗಿ ಹಾರ್ಮೋನ್ ಇಂಜೆಕ್ಷನ್ ಪಡೆದುಕೊಂಡಿದ್ದಾರೆ ಎಂಬ ರೂಮರ್‍ ಕೇಳಿಬಂದಿದ್ದು, ಇದಕ್ಕೆ ಹನ್ಸಿಕಾ ಉತ್ತರ ನೀಡಿದ್ದಾರೆ. ನನಗೆ 21 ವರ್ಷ ವಯಸ್ಸಿನಲ್ಲಿದ್ದಾಗ ಅನೇಕರು ನನ್ನ ಬಗ್ಗೆ ಅಸಭ್ಯಕರವಾದ ಕಾಮೆಂಟ್ ಗಳನ್ನು ಮಾಡಿದ್ದರು. ನಾನು 8 ವರ್ಷಕ್ಕೆ ನಟಿಯಾಗಿದ್ದೆ, ಬೇಗ ದೊಡ್ಡವಳಾಗಲು ನಮ್ಮ ತಾಯಿ ನನಗೆ ಇಂಜೆಕ್ಷನ್ ಸಹ ನೀಡಿದ್ದರು ಎಂದು ಅಸಭ್ಯಕರವಾಗಿ ಪ್ರಚಾರ ಮಾಡಿದ್ದರು. ಇಂತಹ ಸುಳ್ಳು ಸುದ್ದಿಗಳನ್ನು ನಿಜ ಎಂದು ಹೇಗೆ ನಂಬುತ್ತಾರೋ ನನಗೆ ತಿಳಿಯದು ಎಂದು ಹನ್ಸಿಕಾ ಬೇಸರಗೊಂಡಿದ್ದಾರೆ.

ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಹನ್ಸಿಕಾ ತಾಯಿ ಮೋನಾ ಸಹ ಮಾತನಾಡಿದ್ದಾರೆ. ನಾನು ಆ ರೀತಿ ಹಾರ್ಮೋನ್ ಇಂಜೆಕ್ಷನ್ ಕೊಡಿಸಿದಿದ್ದರೇ ಟಾಟಾ ಬಿರ್ಲಾ ರವರಿಗಿಂತ ಶ್ರೀಮಂತಳಾಗುತ್ತಿದ್ದೆ. ಪ್ರತಿಯೊಬ್ಬರು ಬೇಗ ಬೆಳೆಯಲು ನನ್ನ ಬಳಿಗೆ ಬರುತ್ತಿದ್ದರಲ್ಲವೇ, ಇಂತಹ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಲು ಕನಿಷ್ಟ ಜ್ಞಾನ ಸಹ ಇಲ್ಲದೇ ಇದ್ದರೇ ಹೇಗೆ ಎಂದು ಮೋನಾ ಸಹ ಬೇಸರಗೊಂಡಿದ್ದಾರೆ.

Most Popular

To Top