ಅಂತಹ ದೃಶ್ಯಗಳಲ್ಲಿ ನಟಿಸೋದೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ ಬೋಲ್ಡ್ ಬ್ಯೂಟಿ ಅಮಿಷಾ ಪಟೇಲ್…..!

ಸುಮಾರು ವರ್ಷಗಳ ಹಿಂದೆ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದಲ್ಲಿ ತುಂಬಾನೆ ಕ್ರೇಜ್ ಹೊಂದಿರುವ ನಟಿಯರಲ್ಲಿ ಅಮಿಷಾ ಪಟೇಲ್ ಸಹ ಒಬ್ಬರಾಗಿದ್ದಾರೆ. ಶೀಘ್ರದಲ್ಲೆ ಆಕೆ ಆಫ್ ಸೆಂಚುರಿಗೆ ಹತ್ತಿರದಲ್ಲೇ ಇದ್ದಾರೆ. ಆದರೂ ಸಹ ಆಕೆಯ ಹಾಟ್ ನೆಸ್ ಯಂಗ್ ಬ್ಯೂಟಿಯರನ್ನೂ ಸಹ ಹಿಂದೆ ಹಾಕುತ್ತಿದೆ. ಸಿನೆಮಾಗಳಿಂದ ದೂರವುಳಿದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳನ್ನು ಹಾಟ್ ಪೊಟೋಶೂಟ್ಸ್, ವಿಡಿಯೋಗಳ ಮೂಲಕ ರಂಜಿಸುತ್ತಲೇ ಇದ್ದರು. ಇದೀಗ ಆಕೆ ಸಿನೆಮಾಗಳಲ್ಲಿ ಅಂತಹ ದೃಶ್ಯಗಳಿದ್ದರೇ ನಾನು ನಟಿಸೊಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಹಾಟ್ ನಟಿ ಅಮಿಷಾ ಪಟೇಲ್ ಕಹೋನಾ ಪ್ಯಾರ್‍ ಹೈ ಎಂಬ ಹಿಂದಿ ಸಿನೆಮಾದ ಮೂಲಕ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕ ದೊಡ್ಡ ಮಟ್ಟದ ಕ್ರೇಜ್ ಸಂಪಾದಿಸಿಕೊಂಡ ಈ ಬ್ಯೂಟಿ ಬಳಿಕ ಕೂಡಲೇ ತೆಲುಗು ಸಿನೆಮಾದಲ್ಲಿ ಕಾಣಿಸಿಕೊಂಡರು. ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಜೊತೆಗೆ ಬದ್ರಿ ಸಿನೆಮಾದಲ್ಲಿ ಕಾಣಿಸಿಕೊಂಡರು. ಅಮಿಷಾ ಪಟೇಲ್ ಇತ್ತೀಚಿಗೆ ತೆರೆಕಂಡ ಗದರ್‍-2 ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಪಡೆದುಕೊಂಡಿದ್ದಾರೆ. ಈ ಸಿನೆಮಾದ ಮೂಲಕ ಆಕೆ ಬೌನ್ಸ್ ಬ್ಯಾಕ್ ಆಗಿದ್ದಾರೆ ಎಂದು ಹೇಳಬಹುದಾಗಿದೆ. ಬದ್ರಿ,  ನಾನಿ, ನರಸಿಂಹುಡು ಸಿನೆಮಾಗಳಲ್ಲಿ ನಟಿಸಿದ ಅಮಿಷಾ ಬಳಿಕ ಬಾಲಿವುಡ್ ನಲ್ಲೇ ಹೆಚ್ಚು ನಟಿಸಿದರು. ಸುಮಾರು ದಿನಗಳಿಂದ ಆಕೆ ಸಿನೆಮಾಗಳಿಂದ ದೂರವುಳಿದಿದ್ದರು. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಪುಲ್ ಆಕ್ಟೀವ್ ಆಗಿಯೇ ಇದ್ದರು.

ಇತ್ತೀಚಿಗೆ ಅಮಿಷಾ ಪಟೇಲ್ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗಿದ್ದರು. ಆಕೆಯ ಗ್ಲಾಮರ್‍ ಹಾಟ್ ಶೋ ಹಾಟ್ ಟಾಪಿಕ್ ಆಗಿತ್ತು. ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಗ್ಲಾಮರ್‍ ಶೋ ಮಾಡುವ ಅಮಿಷಾ ಪಟೇಲ್ ಸಿನೆಮಾಗಳಲ್ಲಿ ಮಾತ್ರ ಬೋಲ್ಡ್ ದೃಶ್ಯಗಳಲ್ಲಿ ನಟಿಸಲು ಸ್ಟ್ರಿಕ್ಟ್ ಕಂಡಿಷನ್ಸ್ ಹಾಕುತ್ತಿದ್ದಾರಂತೆ. ಗದರ್‍ 2 ಪ್ರಮೋಷನ್ ನಲ್ಲಿ ಪುಲ್ ಆಕ್ಟೀವ್ ಆಗಿದ್ದ ಅಮಿಷಾ ಸಿಲ್ವರ್‍ ಸ್ಕ್ರೀನ್ ಮೇಲೆ ಸಲ್ಮಾನ್ ಖಾನ್, ಸನ್ನಿ ಡಿಯೋಲ್ ರವರನ್ನು ಫಾಲೋ ಮಾಡುತ್ತಿದ್ದಾರಂತೆ. ಅವರಂತೆ ಸಿನೆಮಾಗಳಲ್ಲಿ ಇಂಟಿಮೇಟ್ ದೃಶ್ಯಗಳಿಗೆ ನೋ ಎನ್ನುತ್ತಾರಂತೆ. ಸಿನೆಮಾಗಳಲ್ಲಿ ಲಿಪ್ ಲಾಕ್ ದೃಶ್ಯಗಳಿಗೂ ನೋ ಎಂದು ಹೇಳುತ್ತಾರಂತೆ. ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಇಮೇಜ್ ಹೊಂದಿರುವ ಅಮಿಷಾ ಸಿನೆಮಾಗಳಲ್ಲಿ ಅಂತಹ ದೃಶ್ಯಗಳಿಗೆ ನೋ ಹೇಳಿದರೇ ಅವಕಾಶಗಳು ಬರುತ್ತಾ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಸುಮಾರು ವರ್ಷಗಳ ಬಳಿಕ ನಟಿ ಅಮಿಷಾ ಪಟೇಲ್ ರವರಿಗೆ ಗದರ್‍-2 ಸಿನೆಮಾದ ಮೂಲಕ ಒಳ್ಳೆಯ ಸಕ್ಸಸ್ ಕಂಡುಕೊಂಡರು. ಈ ಸಿನೆಮಾದ ಮೂಲಕ ಆಕೆ ಮತ್ತೊಮ್ಮೆ ಹಾಟ್ ಟಾಪಿಕ್ ಆಗಿದ್ದಾರೆ. ಗದರ್‍-2 ಸಿನೆಮಾದ ಮೂಲಕ ಬೌನ್ಸ್ ಬ್ಯಾಕ್ ಆದ ಅಮಿಷಾ ಪಟೇಲ್ ಮತಷ್ಟು ಅವಕಾಶಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.