Film News

ಸೌತ್ ನಟಿಯೆಂದು ನನ್ನನ್ನು ಅವಮಾನಿಸಿದರು ಎಂದ ಹನ್ಸಿಕಾ, ಬಾಲಿವುಡ್ ನಲ್ಲಿ ತಮಗಾದ ಅವಮಾನದ ಬಗ್ಗೆ ಶಾಕಿಂಗ್ ಕಾಮೆಂಟ್ಸ್……!

ಮೊದಲನೇ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡು ಸ್ಟಾರ್‍ ಡಂ ಗಿಟ್ಟಿಸಿಕೊಂಡ ನಟಿಯರ ಸಾಲಿಗೆ ಆಪಲ್ ಬ್ಯೂಟಿ ಹನ್ಸಿಕಾ ಸಹ ಸೇರುತ್ತಾರೆ. ಬಾಲನಟಿಯಾಗಿ ಬಳಿಕ ದೇಶಮುದುರು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಕಡಿಮೆ ಸಮಯದಲ್ಲೇ ತುಂಬಾ ಖ್ಯಾತಿ ಪಡೆದುಕೊಂಡರು. ಇದೀಗ ಆಕೆಗೆ ಬಾಲಿವುಡ್ ಸಿನಿರಂಗದಲ್ಲಿ ಎದುರಾದ ಕೆಲವೊಂದು ಕಹಿ ಘಟನೆಗಳ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ನಟಿ ಹನ್ಸಿಕಾ ಬಾಲನಟಿಯಾಗಿ ಸಿರೀಯಲ್ ಹಾಗೂ ಕೆಲವೊಂದು ಸಿನೆಮಾಗಳಲ್ಲಿ ನಟಿಸಿ, ದೇಶ ಮುದುರು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ತೆಲುಗು ಸೇರಿದಂತೆ ಇತರೆ ಭಾಷೆಗಳಲ್ಲೂ ಸಹ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಗಿಟ್ಟಿಸಿಕೊಂಡರು. ಇನ್ನೂ ಸಿನೆಮಾಗಳಲ್ಲಿ ಬ್ಯುಸಿಯಾಗಿ ಸಾಗುತ್ತಿರುವ ಸಮಯದಲ್ಲೇ ಆಕೆ ಮುಂಬೈ ಮೂಲದ ಉದ್ಯಮಿ ಸೊಹೈಲ್ ಕತೂರಿಯಾ ಎಂಬಾತನನ್ನು ಮದುವೆಯಾದರು. ಇನ್ನೂ ಹನ್ಸಿಕಾ ಮದುವೆಯಾಗಿದ್ದು ತನ್ನ ಬ್ಯುಸಿನೆಸ್ ಪಾರ್ಟನರ್‍ ನನ್ನೇ. ಜೊತೆಗೆ ಆತ ಹನ್ಸಿಕಾ ಸ್ನೇಹಿತೆಯ ಮಾಜಿ ಪತಿ ಸಹ ಹೌದು ಈ ಕುರಿತು ಸಹ ಅನೇಕ ಚರ್ಚೆಗಳು ನಡೆದವು. ಇನ್ನೂ ಅವರ ಮದುವೆಯ ವಿಡಿಯೋ ಲವ್ ಷಾದಿ ಡ್ರಾಮಾ ಎಂಬ ಟೈಟಲ್ ನಡಿ ಡಿಸ್ನಿ + ಹಾಟ್ ಸ್ಟಾರ್‍ ನಲ್ಲಿ ಸ್ಟ್ರೀಮಿಂಗ್ ಮಾಡಲಾಗುತ್ತಿದೆ. ಇದೀಗ ಆಕೆ ಬಾಲಿವುಡ್ ಬಗ್ಗೆ ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ನಟಿ ಹನ್ಸಿಕಾಗೆ ಬಾಲಿವುಡ್ ಸಿನಿರಂಗದಲ್ಲಿ ಎದುರಾದ ಕೆಲವೊಂದು ಕಹಿ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ನಾನು ಸೌತ್ ಮೂಲದ ನಟಿಯಾದ ಕಾರಣದಿಂದ ಬಟ್ಟೆಗಳನ್ನು ನೀಡುವುದಿಲ್ಲ ಎಂದು ಅಲ್ಲಿನ ಡಿಸೈನರ್‍ ಗಳು ಅವಮಾನಿಸಿದ್ದರು. ಅಲ್ಲಿನ ಡಿಸೈನರ್‍ ಗಳು ಕೀಳಾಗಿ ನೋಡಿದ್ದರು. ಸೌತ್ ಹಿರೋಯಿನ್ ಗಳೆಂದರೇ ಅಲ್ಲಿನವರಿಗೆ ತುಂಬಾ ಕೀಳು ಭಾವನೆ ಇತ್ತು. ನಾವು ನಿಮಗೆ ಬಟ್ಟೆಗಳು ನೀಡುವುದಿಲ್ಲ ಎಂದು ಮುಖದ ಮೇಲೆಯೇ ಹೇಳುತ್ತಿದ್ದರು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಅವರೇ ಬಂದು ನಾವು ಡಿಸೈನ್ ಮಾಡಿದ ಬಟ್ಟೆಗಳ್ನನು ಧರಿಸಿ ಎಂದು ಕೇಳಿಕೊಳ್ಳುವ ಸ್ಥಿತಿ ಬಂದಿದೆ. ಒಂದು ಸಮಯದಲ್ಲಿ ಕೀಳಾಗಿ ನೋಡಿದವರೇ ಇದೀಗ ಬಂದು ನಮ್ಮಲ್ಲಿ ಕೇಳಿಕೊಳ್ಳುವ ಫೀಲಿಂಗ್ ಒಂದು ತರಹ ಚೆನ್ನಾಗಿದೆ ಎಂದು ಹೇಳಿದ್ದಾರೆ. ಆಕೆಯ ಈ ಕಾಮೆಂಟ್ ಗಳು ಸಖತ್ ವೈರಲ್ ಆಗುತ್ತಿವೆ.

ಸದ್ಯ ಪತಿಯೊಂದಿಗೆ ವೈವಾಹಿಕ ಜೀವನ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಮದುವೆಯಾದರೂ ಸಹ ಗ್ಲಾಮರ್‍ ಶೋನಲ್ಲಿ ಮಾತ್ರ ತಗ್ಗೇದೇ ಲೇ ಎನ್ನುವಂತೆ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಾಟ್ ಅಂಡ್ ಬೋಲ್ಡ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಆಕೆಯ ಕೈಯಲ್ಲಿ ಆರಕ್ಕೂ ಹೆಚ್ಚು ಸಿನೆಮಾಗಳಿದ್ದು, ತೆಲುಗು ಹಾಗೂ ತಮಿಳು ಭಾಷೆಯ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top