ಅನುಷ್ಕಾ ಬೇಕೆಂತಲೇ ತೂಕ ಹೆಚ್ಚಿಸಿಕೊಂಡರೇ? ಆ ಸಿನೆಮಾಗಾಗಿಯೇ ಆಕೆ ತೂಕ ಹೆಚ್ಚಿಸಿಕೊಂಡರೇ?

Follow Us :

ಸೌತ್ ಸಿನಿರಂಗದಲ್ಲಿ ಸೂಪರ್‍ ಸ್ಟಾರ್‍ ಆಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಈಕೆ ಸಿನಿಮಾಗಳಲ್ಲಿ ಕಾಣಿಸಿಕೊಂಡು ಸುಮಾರು ತಿಂಗಳುಗಳೇ ಕಳೆದಿದೆ. ಬಾಹುಬಲಿ ಸೀರಿಸ್ ಬಳಿಕ ಅನುಷ್ಕಾ ಭಾಗಮತಿ, ನಿಶ್ಯಬ್ದಂ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಕಳೆದ ಶಿವರಾತ್ರಿ ಹಬ್ಬದ ಸಂಭ್ರಮದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಆಕೆ ತುಂಬಾ ದಪ್ಪ ಆಗಿ ಕಾಣಿಸಿಕೊಂಡಿದ್ದರು. ಇದೀಗ ಅನುಷ್ಕಾ ಬೇಕಂತಲೇ ದಪ್ಪವಾಗಿದ್ದಾರೆ. ಆ ಸಿನೆಮಾಗಾಗಿ ಆಕೆ ದಪ್ಪ ಆಗಿದ್ದಾರೆ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ.

ನಟಿ ಅನುಷ್ಕಾ ಈ ಹಿಂದೆ ಸೈಜ್ ಜಿರೋ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ಆಖೆ ಫ್ಯಾಟ್ ಲೇಡಿಯಾಗಿ ಕಾಣಿಸಿಕೊಂಡಿದ್ದರು. ಆಕೆ ದಪ್ಪವಾಗಿ ಕಾಣಲು ಆಕೆ ನಿಜವಾಗಿಯೇ ತೂಕ ಹೆಚ್ಚಿಸಿಕೊಂಡಿದ್ದರು. ಇನ್ನೂ ಈ ಸಿನೆಮಾವನ್ನು ಆಕೆ ರಾಘವೇಂದ್ರರಾವ್ ರವರಿಗಾಗಿ ಮಾಡಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಆಕೆ ತುಂಬಾ ರಿಸ್ಕ್ ತೆಗೆದುಕೊಂಡು ಸಿನೆಮಾ ಮಾಡಿದರೇ ಆ ಸಿನೆಮಾ ಮಾತ್ರ ಡಿಜಾಸ್ಟರ್‍ ಆಗಿ ಉಳಿಯಿತು. ಬಳಿಕ ಅನುಷ್ಕಾ ಮತಷ್ಟು ದಪ್ಪ ಆದರು. ಇನ್ನೂ ಈ ಕಾರಣದಿಂದ ಆಕೆ ತುಂಬಾನೆ ಕಷ್ಟಪಟ್ಟರು. ಬಾಹುಬಲಿ-2 ಸಿನೆಮಾಗಾಗಿ ರಾಜಮೌಳಿ ಸಹ ಆಕೆಯನ್ನು ಸಣ್ಣ ರೀತಿಯಲ್ಲಿ ತೋರಿಸಲು ತುಂಬಾನೆ ಪ್ರಯತ್ನ ಸಹ ಮಾಡಿದರು. ಕೆಲವೊಂದು ಪದ್ದತಿಗಳನ್ನು ಪಾಲಿಸಿ ಕೊಂಚ ಸಣ್ಣ ಆದರೂ ಸಹ ಆಕೆ ಮಾತ್ರ ಮೊದಲಿನಂತೆ ಆಗಲಿಲ್ಲ.

ಇನ್ನೂ ಆಕೆ ಸಿನೆಮಾಗಳಿಂದ ಸಹ ಅನುಷ್ಕಾ ದೂರವಾದ ಹಿನ್ನೆಲೆಯಲ್ಲಿ  ಆಕೆ ಹೇಗಿದ್ದಾರೆ ಎಂಬ ಆಲೋಚನೆ ಸಹ ಅಭಿಮಾನಿಗಳಲ್ಲಿ ಇಲ್ಲದೇ ಹೋಯಿತು. ಆದರೆ ಮಹಾಶಿವರಾತ್ರಿ ಹಬ್ಬದ ಆಚರಣೆಗಾಗಿ ಆಕೆ ಕೇರಳಗೆ ಹೋಗಿದ್ದರು. ಈ ವೇಳೆ ಆಕೆಯನ್ನು ಕಂಡ ಅಭಿಮಾನಿಗಳು ಶಾಕ್ ಆಗಿದ್ದರು. ಆಕೆಯನ್ನು ಕಂಡ ಅನೇಕರು ಸೈಜ್ ಜಿರೋ ಸಿನೆಮಾದಲ್ಲಿದ್ದಂತೆ ಇದ್ದಾರೆ ಎಂಬ ಅಭಿಪ್ರಾಯಗಳನ್ನು ಹೊರಹಾಕಿದರು. ಇನ್ನೂ ಆಕೆ ಅಷ್ಟೊಂದು ತೂಕ ಹೆಚ್ಚಿಸಿಕೊಳ್ಳಲು ಕಾರಣ ಏನು ಎಂಬ ಚರ್ಚೆಗಳೂ ಸಹ ಶುರುವಾಗಿದ್ದವು. ಇದೀಗ ಹೊಸದೊಂದು ಸುದ್ದಿ ಕೇಳಿಬರುತ್ತಿದ್ದು. ಅದರಂತೆ ಆಕೆ ಬೇಕೆಂತಲೇ ತೂಕ ಹೆಚ್ಚಿಸಿಕೊಂಡಿದ್ದಾರೆ, ಆ ಸಿನೆಮಾಗಾಗಿ ಆಕೆ ತೂಕ ಹೆಚ್ಚಿಸಿಕೊಂಡಿದ್ದಾರೆ ಎಂಬ ವಾದ ಕೇಳಿಬರುತ್ತಿದೆ.

ನಟಿ ಅನುಷ್ಕಾ ಸುಮಾರು ವರ್ಷಗಳ ಬಳಿಕ ಮಿಸ್ ಶೆಟ್ಟಿ, ಮಿಸ್ಟರ್‍ ಪೊಲಿಶೆಟ್ಟಿ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾದ ಟೈಟಲ್ ಸಹ ರಿವೀಲ್ ಆಗಿದೆ. ಇದೀಗ ಯುಗಾದಿ ಹಬ್ಬದ ಸಂದರ್ಭವಾಗಿ ಈ ಸಿನೆಮಾದಿಂದ ನೊ ನೊ ನೊ ಎಂಬ ಹಾಡನ್ನು ರಿಲೀಸ್ ಮಾಡಲಾಗಿದೆ. ಈ ಹಾಡಿನಲ್ಲಿ ಅನುಷ್ಕಾ ರನ್ನು ನೋಡಿದ ಬಳಿಕ ಈ ಸಿನೆಮಾಗಾಗಿಯೇ ಆಕೆ ತೂಕ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಇದೊಂದು ಏಜ್ ಬಾರ್‍ ಲವ್ ಸ್ಟೋರಿ ಎಂದು ಹೇಳಲಾಗುತ್ತಿದೆ. ಇನ್ನೂ ಭಾರಿ ಫಾಲೋಯಿಂಗ್ ಹೊಂದಿರುವ ಅನುಷ್ಕಾ ಹೇಗೆ ಕಾಣಿಸಿಕೊಂಡರು ಆಕೆಯ ಸಿನೆಮಾಗಳನ್ನು ಮಾತ್ರ ನೋಡದೇ ಇರಲ್ಲ. ಈ ಸಿನೆಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.