News

ಹೆಣ್ಣು ಸಿಗದೇ ಬೇಸತ್ತ ವರ, ಮದುವೆಯಾಗಲು ಆತ ಮಾಡಿದ್ದು ಏನು ಗೊತ್ತಾ, ವೈರಲ್ ಆದ ಪೊಟೋ…..!

ಮಧ್ಯಪ್ರದೇಶದ 29 ವರ್ಷ ವಯಸ್ಸಿನ ಯುವಕನೋರ್ವ ಮದುವೆಯಾಗಲು ಹೆಣ್ಣು ಸಿಗದೇ ಬೇಸತ್ತು, ವಧುವನ್ನು ಹುಡಕಲು ಹೊಸ ಪ್ಲಾನ್ ಮಾಡಿದ್ದಾನೆ. ತಮ್ಮ ಹೆಸರಿನಿಂದ ಹಿಡಿದು ಎಲ್ಲಾ ವಿವರಗಳಿರುವಂತಹ ಬ್ಯಾನರ್‍ ಮಾಡಿಸಿಕೊಂಡು ತನ್ನ ಆಟೋ ರಿಕ್ಷಾ ವಾಹನಕ್ಕೆ ಅಂಟಿಸಿಕೊಂಡಿದ್ದು, ಈ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮಧ್ಯಪ್ರದೇಶದ ದೀಪೇಂದ್ರ ರಾಥೋಡ್ ಎಂಬ ಯುವಕ ಮದುವೆಯಾಗಲು ಹೆಣ್ಣು ಸುಮಾರು ವರ್ಷಗಳಿಂದ ಹುಡುಕುತ್ತಿದ್ದ, ಅನೇಕ ಮಾಟ್ರಿಮೋನಿ ತಾಣಗಳಲ್ಲಿ ಸಹ ಹುಡುಕಾಟ ನಡೆಸಿದ್ದ. ಆದ್ದರಿಂದ ಬೇಸತ್ತ ಯುವಕ ಹೊಸ ಪ್ಲಾನ್ ಮಾಡಿದ್ದಾನೆ. ತಮ್ಮ ಸಂಪೂರ್ಣ ಬಯೋಡೇಟಾ ಇರುವಂತಹ ಬ್ಯಾನರ್‍ ತಯಾರಿಸಿ ತನ್ನ ಆಟೋಗೆ ಹಾಕಿಕೊಂಡಿದ್ದಾನೆ. ಸದ್ಯ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ಬ್ಯಾನರ್‍ ನಲ್ಲಿ ತಾನು ಯಾವುದೇ ಜಾತಿ, ಧರ್ಮದ ಮಹಿಳೆಯಾದರು ಸರಿ ಮದುವೆಯಾಗಲು ಸಿದ್ದನಿದ್ದೇನೆ ಎಂದು ಬ್ಯಾನರ್‍ ನಲ್ಲಿ ಬರೆದಿದ್ದಾನೆ.

ಇನ್ನೂ ಈ ಕುರಿತು ಖಾಸಗಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ದೀಪೇಂದ್ರ ಸಮಾಜದಲ್ಲಿ ಮಹಿಳೆಯರ ಅಭಾವ ಹೆಚ್ಚಾಗಿದೆ. ಇದರಿಂದ ಹೆಣ್ಣು ಹುಡುಕಲು ಕಷ್ಟವಾಗುತ್ತಿದೆ. ಧರ್ಮ ಹಾಗೂ ಜಾತಿಯ ಬಗ್ಗೆ ನನಗೆ ಸಮಸ್ಯೆಯಿಲ್ಲ. ಯಾವುದೇ ಮಹಿಳೆ ಮದುವೆಯ ಪ್ರಸ್ತಾಪದೊಂದಿಗೆ ನನ್ನ ಸಂಪರ್ಕ ಮಾಡಬಹುದು ಎಂದು ಹೇಳಿದ್ದಾನೆ. ಇನ್ನೂ ದೀಪೇಂದ್ರ ತನ್ನ ಆಟೋಗೆ ಅಂಟಿಸಿಕೊಂಡ ಪೋಸ್ಟರ್‍ ನಲ್ಲಿ ಎತ್ತರ, ಹುಟ್ಟಿದ ದಿನಾಂಕ, ಸಮಯ, ರಕ್ತದ ಗುಂಪು, ಶೈಕ್ಷಣಿಕ ಅರ್ಹತೆ, ಗೋತ್ರ ಸೇರಿದಂತೆ ತಮ್ಮ ಬಗೆಗಿನ ಎಲ್ಲಾ ವಿಚಾರಗಳನ್ನು ಬ್ಯಾನರ್‍ ನಲ್ಲಿ ಬರೆಸಿದ್ದಾರೆ. ಅದನ್ನು ತಮ್ಮ ಆಟೋಗೆ ಹಾಕಿಕೊಂಡಿದ್ದಾರೆ. ಈ ಪೊಟೋ ಇದೀಗ ಸೊಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

Most Popular

To Top