ಭಯದಿಂದ ಅನೇಕ ಸಿನೆಮಾಗಳನ್ನು ಬಿಟ್ಟಿದ್ದೇನೆ ಎಂದ ಮಲ್ಲು ಬ್ಯೂಟಿ ಅನುಪಮಾ ಪರಮೇಶ್ವರನ್, ವೈರಲ್ ಆದ ಕಾಮೆಂಟ್ಸ್…….!

Follow Us :

ಮಲಯಾಳಂ ಮೂಲದ ನಟಿ ಅನುಪಮಾ ಪರಮೇಶ್ವರನ್ ಪ್ರೇಮಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಕಡಿಮೆ ಸಮಯದಲ್ಲೇ ಬಹುಬೇಡಿಕೆಯನ್ನು ಸೃಷ್ಟಿಸಿಕೊಂಡರು. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಇನ್ನೂ ಇತ್ತಿಚಿಗೆ ಆಕೆ ನಟಿಸಿದ ಬಹುತೇಕ ಎಲ್ಲಾ ಸಿನೆಮಾಗಳು ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಇದೀಗ ಅನುಪಮಾ ಸಿನೆಮಾಗಳ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು ಆಕೆಯ ಹೇಳಿಕೆಗಳು ವೈರಲ್ ಆಗುತ್ತಿವೆ.

ಮಲಯಾಳಂ ನಲ್ಲಿ ಪ್ರೇಮಂ ಸಿನೆಮಾದ ಮೂಲಕ ಎಂಟ್ರಿ ಕೊಟ್ಟ ಅನುಪಮಾ ಹೆಚ್ಚಾಗಿ ಮಲಯಾಳಂ ಹಾಗೂ ತೆಲುಗು ಸಿನೆಮಾಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಆಕೆ ಅಭಿನಯದ ಕಾರ್ತಿಕೇಯ-2, 18 ಪೇಜಸ್, ಬಟರ್‍ ಪ್ಲೈ ಸಿನೆಮಾಗಳ ಒಳ್ಳೆಯ ಸಕ್ಸಸ್ ಕಂಡಿದೆ. ಬಳಿಕ ನಾನಿ ಅಭಿನಯದ ಅಂಟೆ ಸುಂದರಾನಿಕಿ ಸಿನೆಮಾದಲ್ಲೂ ಸಹ ಅತಿಥಿ ಪಾತ್ರದಲ್ಲಿ ನಟಿಸಿ ಒಳ್ಳೆಯ ಪ್ರಶಂಸೆ ಪಡೆದುಕೊಂಡರು. ಸದ್ಯ ಅನುಪಮಾ ತೆಲುಗಿನಲ್ಲಿ ಡಿಜೆ ಟಿಲ್ಲು ಸೀಕ್ವೆಲ್ ನಲ್ಲಿ ಹಾಗೂ ಮಲಯಾಳಂನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿರುವ ಅನುಪಮಾ ಇದೀಗ ತನ್ನ ಪಾತ್ರಗಳ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಆಕೆಯ ಕಾಮೆಂಟ್ ಗಳು ಇದೀಗ ವೈರಲ್ ಆಗುತ್ತಿವೆ.

ಇನ್ನೂ ಅನುಪಮಾ ಪರಮೇಶ್ವರ್‍ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ತುಂಬಾ ಸಮಸ್ಯೆಗೆ ಗುರಿಯಾಗುತ್ತಿದ್ದರಂತೆ. ಕಳೆದ 2021 ರವರೆಗೂ ಪಾತ್ರಗಳ ಆಯ್ಕೆಯಲ್ಲಿ ಸಮಸ್ಯೆ ಪಡುತ್ತಿದ್ದರಂತೆ. ಅದೇ ಸಮಯದಲ್ಲಿ ಆಕೆ ಫ್ರೀಡಂ ಅಟ್ ಮಿಡ್ ನೈಟ್ ಎಂಬ ಶಾರ್ಟ್ ಫಿಲಂ ನಲ್ಲಿ ನಟಿಸಿದ್ದರಂತೆ. ಈ ಶಾರ್ಟ್ ಫಿಲಂ ಬಳಿಕ ಆಕೆಗೆ ಹೆಸರಿನ ಜೊತೆಗೆ ಆಕೆಯಲ್ಲಿ ಧೈರ್ಯ ಸಹ ಬಂತಂತೆ. ಈ ಸಿನೆಮಾ ಅನ್ನು ಎಲ್ಲರೂ ಬೆಂಬಲಿಸಿದರು. ಈ ಶಾರ್ಟ್ ಸಿನೆಮಾ ಕಾರಣದಿಂದ ಅನುಪಮಾ ರಲ್ಲಿದ್ದ ಭಯ, ತಪ್ಪು ಕಲ್ಪನೆಗಳು ಎಲ್ಲವೂ ಮರೆಯಾದವು. ಇನ್ನೂ ಸಿನೆಮಾಗಳಲ್ಲಿ ಪಾತ್ರಗಳನ್ನು ಬಿಡುವ ಪ್ರಶ್ನೆ ಉದ್ಬವಿಸುವುದಿಲ್ಲ. ಈ ಹಿಂದೆ ಭಯದಿಂದಲೇ ಅನೇಕ ಪಾತ್ರಗಳನ್ನು ಬೇಡ ಎಂದಿದ್ದೆ. ಇದೀಗ ನಾನು ನಿರ್ಭಯದಿಂದ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಆದರೆ ಅನುಪಮಾ ಸಿನೆಮಾಗಳ ಆಫರ್‍ ಗಳು ಬಂದರೇ ಕೂಡಲೇ ಒಪ್ಪುವುದಿಲ್ಲ. ಪಾತ್ರಕ್ಕೆ ತೂಕ ಇದ್ದರೇ ಮಾತ್ರ ಒಪ್ಪುತ್ತಾರೆ. ಪಾತ್ರಕ್ಕೆ ಬಲ ಇದ್ದರೇ ಸಣ್ಣ ಪಾತ್ರ ಮಾಡಲು ಸಹ ಆಕೆ ರೆಡಿಯಂತೆ. ಸದ್ಯ ಆಕೆ ಡಿಜೆ ಟಿಲ್ಲು ಸ್ಕ್ವೇರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮಿಳಿನಲ್ಲಿ ಒಂದು ಸಿನೆಮಾ ಹಾಗೂ ಮಲಯಾಳಂ ನಲ್ಲಿ ಕೆಲವೊಂದು ಸಿನೆಮಾಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗುತ್ತಿದೆ.