Film News

ಆ ಸಂಗೀತ ನಿರ್ದೇಶಕನನ್ನು ನಟಿ ಪ್ರಣಿತಾ ಲವ್ ಮಾಡಿದ್ರಂತೆ, ಹೀಗೊಂದು ರೂಮರ್…!

ಸಿನಿರಂಗದಲ್ಲಿ ಲವ್, ಬ್ರೇಕಪ್ ಗಳು ಸರ್ವೆ ಸಾಮಾನ್ಯವಾಗಿರುತ್ತದೆ. ಆದರೆ ಕೆಲವು ಹೊರ ಬರುತ್ತವೆ ಕೆಲವು ನಿಗೂಡವಾಗಿಯೇ ಉಳಿಯುತ್ತದೆ. ಅನೇಕರು ಯಾರಿಗೂ ತಿಳಿಯದಂತೆ ಸೀಕ್ರೇಟ್ ಆಗಿ ಲವ್ ಟ್ರಾಕ್ ನಡೆಸುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅಂತಹ ಸುದ್ದಿಗಳು ಹೊರಬರುತ್ತಿರುತ್ತದೆ. ಲವ್, ಅಫೈರ್‍ ಬಗ್ಗೆ ಇಲ್ಲಿಯವರೆಗೂ ಯಾವುದೇ ಸುದ್ದಿಯಿಲ್ಲದ ಕನ್ನಡದ ನಟಿ ಪ್ರಣಿತಾ ಸುಭಾಷ್ ಖ್ಯಾತ ಮ್ಯೂಸಿಕ್ ಡೈರೆಕ್ಟರ್‍ ರೊಂದಿಗೆ ಪ್ರೇಮಪಯಣ ಸಾಗಿಸಿದ್ದರಂತೆ. ಈ ಬಗ್ಗೆ ಸುದ್ದಿಯೊಂದು ಕೇಳಿಬರುತ್ತಿದೆ.

ನಟಿ ಪ್ರಣಿತಾ ಮ್ಯೂಸಿಕ್ ಡೈರೆಕ್ಟರ್‍ ಒಬ್ಬರ ಜೊತೆಗೆ ಪ್ರೇಮಾಯಣ ನಡೆಸಿದ್ದರಂತೆ. ತುಂಬಾ ಸೀಕ್ರೇಟ್ ಆಗಿ ಇಬ್ಬರೂ ಲವ್ ಮಾಡುತ್ತಿದ್ದರಂತೆ. ಸುಮಾರು ದಿನಗಳ ಕಾಲ ಇಬ್ಬರೂ ಸೀಕ್ರೇಟ್ ಆಗಿ ಲವ್ ಮಾಡಿಕೊಂಡಿದ್ದರಂತೆ. ಕೆಲವೊಂದು ಕಾರಣಗಳಿಂದ ಅವರಿಬ್ಬರೂ ಬೇರೆಯಾಗಿದ್ದಾರಂತೆ. ಪ್ರಣಿತಾ ಮದುವೆಯಾಗಿ ಮಗುವಿಗೆ ಜನ್ಮ ಸಹ ಕೊಟ್ಟಿದ್ದಾರೆ. ಆದರೆ ಆ ಸಂಗೀತ ನಿರ್ದೇಶಕ ಮಾತ್ರ ಇನ್ನೂ ಮದುವೆಯಾಗಿಲ್ಲವಂತೆ. ಈ ರೀತಿಯಾಗಿ ರೂಮರ್‍ ಒಂದು ಜೋರಾಗಿಯೇ ಹರಿದಾಡುತ್ತಿದೆ. ಇಲ್ಲಿಯವರೆಗೂ ನಟಿ ಪ್ರಣಿತಾ ಬಗ್ಗೆ ಇಂತಹ ಯಾವುದೇ ರೂಮರ್‍ ಕೇಳಿಬಂದಿಲ್ಲ ಎಂದು ಹೇಳಬಹುದಾಗಿದೆ. ಅಷ್ಟಕ್ಕು ಪ್ರಣಿತಾ ಲವ್ ಮಾಡುತ್ತಿದ್ದ ಆ ನಿರ್ದೇಶಕ ಯಾರೂ ಎಂಬ ವಿಚಾರಕ್ಕೆ ಬಂದರೇ,

ನಟಿ ಪ್ರಣಿತಾ ಸುಮಾರು ದಿನಗಳ ಕಾಲ ಸಂಗೀತ ನಿರ್ದೇಶಕನನ್ನು ಲವ್ ಮಾಡಿದ್ದರಂತೆ. ಆತ ಬೇರೆ ಯಾರೂ ಅಲ್ಲ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಎಂದು ಹೇಳಲಾಗುತ್ತಿದೆ. ಅತ್ತಾರಿಂಟಿಕಿ ದಾರೆದಿ ಸಿನೆಮಾದ ಸಮಯದಲ್ಲಿ ಅವರಿಬ್ಬರ ನುಡವೆ ಪರಿಚಯ ಬಳಿಕ ಪ್ರೀತಿ ಹುಟ್ಟಿದೆಯಂತೆ. ಇನ್ನೂ ಮದುವೆ ಮಾಡಿಕೊಳ್ಳಲು ಸಹ ಇಬ್ಬರೂ ಸಿದ್ದವಾಗಿದ್ದರಂತೆ ಆದರೆ ಅದೇ ಸಮಯದಲ್ಲಿ ಪ್ರಣಿತಾ ಹಾಗೂ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ರವರ ನಡುವೆ ಗಲಾಟೆ ನಡೆದ ಕಾರಣದಿಂದ ಅವರಿಬ್ಬರು ಬೇರೆಯಾಗಬೇಕಾಯಿತಂತೆ. ಈ ಕಾರಣದಿಂದಲೇ ದೇವಿ ಶ್ರೀ ಪ್ರಸಾದ್ ಹಾಗೂ ಪ್ರಣಿತಾ ನಡುವೆ ಬ್ರೇಕಪ್ ಆಗಿದೆ ಎಂದು ಹೇಳಲಾಗಿದೆ. ಇನ್ನೂ ಈಗಲೂ ಸಹ ದೇವಿ ಶ್ರೀ ಪ್ರಸಾದ್ ಮದುವೆಯಾಗದೇ ಸಿಂಗಲ್ ಆಗಿಯೇ ಇದ್ದಾರೆ. ಇನ್ನೂ ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎಂಬುದು ತಿಳಿಯದು. ಆದರೆ ಸೆಲೆಬ್ರೆಟಿಗಳ ಬಗ್ಗೆ ಏನಾದರೂ ಇಂತಹ ರೂಮರ್‍ ಗಳು ಬಂದರೇ ನಿಜವೇ ಸುಳ್ಳೆ ಎನ್ನದೇ ಸೊಷಿಯಲ್ ಮಿಡಿಯಾದಲ್ಲಿ ಮಾತ್ರ ಸಖತ್ ವೈರಲ್ ಆಗಿಬಿಡುತ್ತದೆ.

ಇನ್ನೂ ಪ್ರಣಿತಾ ಬೆಂಗಳೂರಿನ ಉದ್ಯಮಿ ನಿತಿನ್ ರಾಜ್ ಎಂಬಾತನನ್ನು ವಿವಾಹವಾಗಿದ್ದಾರೆ. ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವೇ ಉಳಿದಿದ್ದರು. ಇತ್ತೀಚಿಗಷ್ಟೆ ಆಕೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಸಿನೆಮಾಗಳಿಂದ ದೂರವುಳಿದರೂ ಸಹ ಪ್ರಣಿತಾ ತನ್ನ ಅಭಿಮಾನಿಗಳೊಂದಿಗೆ ಸೋಷಿಯಲ್ ಮಿಡಿಯಾ ಮೂಲಕ ಟಚ್ ನಲ್ಲೇ ಇದ್ದರು. ಇದೀಗ ಮತ್ತೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಿದ್ದು, ಆಕೆ ಕೆಲವೊಂದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top