Film News

ಅತಿಲೋಕ ಸುಂದರಿ ಶ್ರೀದೇವಿಗಾಗಿ ರಾಘವೇಂದ್ರರಾವ್ ರವರಿಗೇ ವಾರ್ನಿಂಗ್ ಕೊಟ್ಟಿದ್ದರಂತೆ ಆರ್.ಜಿ.ವಿ……!

ತೆಲುಗು ಸಿನಿರಂಗದ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಭಾರಿ ಸದ್ದು ಮಾಡುವ ನಿರ್ದೇಶಕರಲ್ಲಿ ರಾಮ್ ಗೋಪಾಲ್ ವರ್ಮಾ ಮೊದಲಿಗರು ಎಂದರೇ ತಪ್ಪಾಗಲಾರದು. ಇನ್ನೂ ವರ್ಮಾ ರವರಿಗೆ ಅತಿಲೋಕ ಸುಂದರಿ ಶ್ರೀದೇವಿ ಎಂದರೇ ತುಂಬಾ ಇಷ್ಟ. ಈ ವಿಚಾರವನ್ನು ಅನೇಕ ಬಾರಿ ಬಹಿರಂಗವಾಗಿಯೇ ಹೇಳಿದ್ದಾರೆ. ಇದೀಗ ಶ್ರೀದೇವಿ ರವರಿಗಾಗಿ ಖ್ಯಾತ ನಿರ್ದೇಶಕ ರಾಘವೇಂದ್ರರಾವ್ ರವರನ್ನೇ ಸಾಯುಸುತ್ತೇನೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಈ ಸಂಬಂಧ ವಿಡಿಯೋ ಒಂದು ವೈರಲ್ ಆಗುತ್ತಿದೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅನೇಕ ಸಮಯದಲ್ಲಿ ಸೋಷಿಯಲ್ ಮಿಡಿಯಾದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಜೊತೆಗೆ ಅವರು ನೀಡಿದ ಹೇಳಿಕೆಗಳನ್ನನು ಸಮರ್ಥನೆ ಮಾಡುವ ಕೌಶಲ್ಯ ಸಹ ಅವರಿಲ್ಲದೆ. ಯಾವುದೇ ಎಮೋಷನ್ ಇಲ್ಲದ ರಾಮ್ ಗೋಪಾಲ್ ವರ್ಮಾ ರವರಿಗೆ ಅತಿಲೋಕ ಸುಂದರಿ ಶ್ರೀದೇವಿ ಎಂದರೇ ತುಂಬಾನೆ ಪ್ರಾಣ. ಅನೇಕ ಬಾರಿ ಶ್ರೀದೇವಿ ಎಂದರೇ ಇಷ್ಟ ಎಂದು ಸಾರ್ವಜನಿಕವಾಗಿಯೇ ಹೇಳಿದ್ದಾರೆ. ಇದೀಗ ಶ್ರೀದೇವಿಯವರಿಗಾಗಿ ಆರ್‍.ಜಿ.ವಿ ನಿರ್ದೇಶಕ ರಾಘವೇಂದ್ರರಾವ್ ರವರನ್ನು ಸಾಯುಸುತ್ತೀನಿ ಎಂದು ಬೆದರಿಕೆ ಹಾಕಿದ್ದಾರಂತೆ. ಶ್ರೀದೇವಿ ಚಿಕ್ಕಂದಿನಲ್ಲಿದ್ದಾಗ ರಾಘವೇಂದ್ರ ರಾವ್, ರಾಮ್ ಗೋಪಾಲ್ ವರ್ಮಾ ಹಾಗೂ ಶ್ರೀದೇವಿ ಮೂವರೂ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಶ್ರೀದೇವಿ ಬಾಲನಟಿಯಾಗಿ ಕೆರಿಯರ್‍ ಆರಂಭಿಸಿದ್ದರು. ಬಾಲನಟಿಯಾಗಿ ಶ್ರೀದೇವಿ ರಾಘವೇಂದ್ರರಾವ್ ರವರ ತಂದೆ ಸೂರ್ಯ ಪ್ರಕಾಶ್ ನಿರ್ದೇಶನದ ಸಿನೆಮಾಗಳಲ್ಲಿ ನಟಿಸಿದ್ದರು. ರಾಘವೇಂದ್ರ ರಾವ್ ಆ ಸಮಯದಲ್ಲಿ ಕೆಲವೊಂದು ಸನ್ನಿವೇಶಗಳನ್ನು ನಿರ್ದೇಶನ ಮಾಡುತ್ತಿದ್ದರಂತೆ. ಇನ್ನೂ ತನ್ನ ತಂದೆಯಿಲ್ಲದಿದ್ದಾಗಿ ಶ್ರೀದೇವಿಯವರೊಂದಿಗೆ ರನ್ನಿಂಗ್ ಸನ್ನಿವೇಶವೊಂದನ್ನು ಶೂಟ್ ಮಾಡಲು ರಾಘವೇಂದ್ರರಾವ್ ಮುಂದಾಗಿದ್ದರಂತೆ. ಮದ್ರಾಸ್ ನ ಮೌಂಟ್ ರೋಡಿನಲ್ಲಿ ಶ್ರೀದೇವಿ ರಸ್ತೆ ದಾಟುವ ದೃಶ್ಯ ಇದಾಗಿತ್ತು. ಶ್ರೀದೇವಿ ಆಗ ಚಿಕ್ಕವಳಾದ ಹಿನ್ನೆಲೆಯಲ್ಲಿ ಹೇಳಿದ ಕೂಡಲೇ ಮಾಡಿದ್ದಾಎ. ರೋಡಿನಲ್ಲಿ ವೇಗವಾಗಿ ಓಡುತ್ತಿದ್ದಾಗ ಕೂದಳೆಯಲ್ಲೇ ಅಪಘಾತದಿಂದ ಪಾರಾಗಿದ್ದರು. ಈ ವಿಚಾರವನ್ನು ರಾಘವೇಂದ್ರ ರಾವ್ ನೆನಪಿಸಿಕೊಂಡರು. ಜತೆಗೆ ಕ್ಷಣದಲ್ಲೇ ಪ್ರಮಾದದಿಂದ ಪಾರಾದೆ ಎಂದು ಶ್ರೀದೇವಿ ಹೇಳಿದರು.

ಕೇವಲ ಕ್ಷಣದಲ್ಲೇ ದೊಡ್ಡ ಪ್ರಮಾದ ತಪ್ಪಿತ್ತು ಎಂದು ರಾಘವೇಂದ್ರ ರಾವ್ ಹೇಳಿದ ಕೂಡಲೇ ವರ್ಮಾ ಕೋಪದಲ್ಲಿ ನಿಮ್ಮನ್ನು ನಾನು ಸಾಯಿಸಿ ಬಿಡುತ್ತಿದ್ದೆ ಎಂದು ಕಾಮೆಂಟ್ಸ್ ಮಾಡಿದ್ದಾರೆ. ಈ ವೇಳೆ ಎಲ್ಲರೂ ನಕ್ಕಿದ್ದಾರೆ. ಇನ್ನೂ ವರ್ಮಾ ರವರ ನಿರ್ದೇಶನದಲ್ಲಿ ಶ್ರೀದೇವಿ ಕ್ಷಣಕ್ಷಣಂ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಅಪಾರ ಪ್ರೀತಿಯನ್ನು ವರ್ಮಾ ಶ್ರೀದೇವಿಯವರ ಮೇಲೆ ಇಟ್ಟುಕೊಂಡಿದ್ದು, ಅನೇಕ ಸಂದರ್ಭದಲ್ಲಿ ಅದನ್ನು ಬಹಿರಂಗವಾಗಿಯೇ ಹೇಳಿದ್ದಾರೆ.

Most Popular

To Top