Film News

ಬಾಯ್ ಫ್ರೆಂಡ್ ಇಲ್ಲದೇ ದುಃಖ ಪಡುತ್ತಿದ್ದೀನಿ ಎಂದು ಬೋಲ್ಡ್ ಕಾಮೆಂಟ್ಸ್ ಮಾಡಿದ ವಿಷ್ಣು ಪ್ರಿಯಾ…!

ಸುಮಾರು ದಿನಗಳಿಂದ ತೆಲುಗು ಆಂಕರ್‍ ಕಂ ನಟಿ ವಿಷ್ಣುಪ್ರಿಯಾ ಟಿ.ವಿ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದಾರೆ. ಇನ್ನೂ ಆಕೆ ಏತಕ್ಕಾಗಿ ದೂರ ಉಳಿದರು ಎಂದು, ಆಕೆ ಏನು ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಆಕೆಯ ಅಭಿಮಾನಿಗಳು ಸೋಷಿಯಲ್ ಮಿಡಿಯಾದಲ್ಲಿ ಪ್ರಶ್ನೆಗಳು ಶುರುವಾಗಿದೆ. ಈ ಹಾದಿಯಲ್ಲೇ ಆಕೆ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡಿದ್ದಾರೆ. ಈ ವೇಳೆ ಆಕೆ ಕೆಲವೊಂದು ಬೋಲ್ಡ್ ಕಾಮೆಂಟ್ ಗಳನ್ನು ಮಾಡಿದ್ದು, ಆಕೆಯ ಹೇಳಿಕೆಗಳು ವೈರಲ್ ಆಗುತ್ತಿವೆ.

ಆಂಕರ್‍ ವಿಷ್ಣುಪ್ರಿಯಾ ಇನ್ಸ್ಟಾಗ್ರಾಂ ನಲ್ಲಿ ಅತೀ ಕಡಿಮೆ ಸಮಯದಲ್ಲೇ ಭಾರಿ ಫಾಲೋಯಿಂಗ್ ಬೆಳೆಸಿಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತನ್ನ ಕರಿಯರ್‍, ವೈಯುಕ್ತಿಕ ವಿಚಾರಗಳ ಜೊತೆಗೆ ಹಾಟ್ ಪೊಟೋಶೂಟ್ಸ್ ಹಾಗೂ ವಿಡಿಯೋ ಗಳ ಮೂಲಕ ಮತಷ್ಟು ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ವಿಷ್ಣು ಪ್ರಿಯಾ ಅಕೌಂಟ್ ಸಹ ಈ ಹಿಂದೆ ಹ್ಯಾಕ್ ಆಗಿತ್ತು. ಆಕೆಯ ಪೇಜ್ ನಿಂದ ಕೆಲವೊಂದು ಅಸಭ್ಯಕರವಾದ ಪೊಟೋಗಳೂ ಸಹ ಶೇರ್‍ ಮಾಡಲಾಗಿತ್ತು. ಇದರಿಂದ ಆಕೆ ಸೋಷಿಯಲ್ ಮಿಡಿಯಾದಿಂದ ಕೆಲ ದಿನಗಳ ಕಾಲ ದೂರ ಉಳಿದಿದ್ದರು. ಇನ್ನೂ ಕಿರುತೆರೆ ಶೋಗಳ ಜೊತೆಗೆ ಇತ್ತೀಚಿಗೆ ಪ್ರವೈಟ್ ಸಾಂಗ್ ಒಂದರಲ್ಲೂ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದರು. ಆದರೆ ಸುಮಾರು ದಿನಗಳಿಂದ ಆಕೆ ಶೋಗಳಿಂದ ದೂರವೇ ಉಳಿದಿದ್ದರು. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಚಿಟ್ ಚಾಟ್ ಮೂಲಕ ಆಕೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಲೈವ್ ವಿಡಿಯೋದಲ್ಲಿ ಮಾತನಾಡಿದ ವಿಷ್ಣು ಪ್ರಿಯಾ ನನಗೂ ವೈಯುಕ್ತಿಕ ಜೀವನ, ಕೆಲವೊಂದು ಜವಾಬ್ದಾರಿಗಳಿವೆ. ಆದ್ದರಿಂದ ನಾನು ಕೊಂಚ ಬ್ಯುಸಿಯಾಗಿದ್ದೇನೆ. ಕೆಲವು ದಿನಗಳ ಹಿಂದೆಯಷ್ಟೆ ವಿಷ್ಣುಪ್ರಿಯಾ ತಾಯಿ ಸಹ ಮೃತಪಟ್ಟ ಕಾರಣ ಆಕೆಯ ಜವಾಬ್ದಾರಿ ಸಹ ಹೆಚ್ಚಾಗಿದೆ. ಇನ್ನೂ ತನ್ನ ಜೀವನದಲ್ಲಿ ಭಾಯ್ ಪ್ರೆಂಡ್ ಇಲ್ಲದೇ ದುಃಖಪಡುತ್ತಿದ್ದಾರಂತೆ. ಒಂದು ವೇಳೆ ಅವನಿದ್ದರೂ ಸಹ ನನ್ನ ಸಮಯವೆಲ್ಲಾ ವ್ಯರ್ಥವಾಗುತ್ತಿತ್ತು. ನಾನು ರಿಲೇಷನ್ ಶಿಪ್ ನಲ್ಲಿದ್ದರೂ ಇಲ್ಲದೇ ಇದ್ದರೂ ನಾನು ಒಂದೇ ರೀತಿಯಲ್ಲಿ ಇರುತ್ತಿದ್ದೆ. ಇನ್ನೂ ಇಲ್ಲಿಯವರೆಗೂ ನಾನು ಬ್ರೇಕಪ್ ಹೇಳಿದವರನ್ನು ದೂರ ಇಡದೇ ಅವರನ್ನೂ ಸಹ ನನ್ನ ಕುಟುಂಬದಂತೆ ನೋಡಿಕೊಳ್ಳುತ್ತಿರುತ್ತೇನೆ. ಇನ್ನೂ ನನ್ನ ಮೊದಲ ಕಿಸ್ 17 ವರ್ಷದಲ್ಲೇ ನಡೆದು ಹೋಗಿದೆ. ಅದರ ಬಗ್ಗೆ ಹೆಚ್ಚು ಕೇಳಬೇಡಿ ಎಂದಿದ್ದಾರೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ವಿಷ್ಣು ಪ್ರಿಯಾ ಆಗಾಗ ಹಾಟ್ ಪೊಟೋಶೂಟ್ಸ್ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.ಇತ್ತೀಚಿಗೆ ಆಕೆ ಬಿಗ್ ಬಾಸ್ ಬಗ್ಗೆ ಸಹ ಮಾತನಾಡಿದ್ದಾರೆ. ತೆಲುಗು ಬಿಗ್ ಬಾಸ್ ಮೇಲೆ ನನಗೆ ಆಸಕ್ತಿಯಿಲ್ಲ. ಹಿಂದಿ ಭಾಷೆಯ ಬಿಗ್ ಬಾಸ್ ನಲ್ಲಿ ಅವಕಾಶ ಬಂದರೇ ಹೋಗುತ್ತೇನೆ ಎಂದು ಹೇಳಿದ್ದಾರೆ. ಸದ್ಯ ವಿಷ್ಣುಪ್ರಿಯಾ ನೀಡಿದ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top