Film News

ಬನ್ನಿ, ಚರಣ್ ಅಥವಾ ಎನ್.ಟಿ.ಆರ್ ರವರಲ್ಲಿ ಡ್ಯಾನ್ಸ್ ಪಾರ್ಟನರ್ ಯಾರಾಗಿರಬೇಕು ಎಂಬ ಪ್ರಶ್ನೆಗೆ ಮೈಂಡ್ ಬ್ಲೋಯಿಂಗ್ ಉತ್ತರ ಕೊಟ್ಟ ಸಾಯಿ ಪಲ್ಲವಿ…..!

ಸೌತ್ ಸಿನಿರಂಗದಲ್ಲಿ ಸಾಯಿ ಪಲ್ಲವಿ ಪ್ರತ್ಯೇಕವಾದ ಸ್ಥಾನವನ್ನು ಹೊಂದಿದ್ದಾರೆ.  ಸಿನಿರಂಗದಲ್ಲಿ ಗ್ಲಾಮರ್‍ ಗೆ ಯಾವುದೇ ಜಾಗ ನೀಡದೇ ಸಿನಿ ಜರ್ನಿಯನ್ನು ಸಾಗಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಶ್ಯಾಮ ಸಿಂಗರಾಯ್, ವಿರಾಟಪರ್ವ ಹಾಗೂ ಗಾರ್ಗಿ ಸಿನೆಮಾದ ಮೂಲಕ ಎಲ್ಲರನ್ನೂ ರಂಜಿಸಿದ್ದರು. ಸಹಜವಾದ ನಟನೆ, ನೃತ್ಯದ ಮೂಲಕ ಆಕೆ ತುಂಬಾನೆ ಕ್ರೇಜ್ ಪಡೆದುಕೊಂಡರು. ಅಲ್ಲು ಅರ್ಜುನ್, ರಾಮ್ ಚರಣ್ ಅಥವಾ ಎನ್.ಟಿ.ಆರ್‍ ಈ ಮೂವರಲ್ಲಿ ಯಾವ ನಟನೊಂದಿಗೆ ನೃತ್ಯ ಮಾಡಲು ಇಷ್ಟಪಡುತ್ತೀರಾ ಎಂಬ ಪ್ರಶ್ನೆಯೊಂದು ಸಾಯಿ ಪಲ್ಲವಿಗೆ ಎದುರಾಗಿದ್ದು ಆಕೆ ಮೈಂಡ್ ಬ್ಲೋಯಿಂಗ್ ಉತ್ತರ ನೀಡಿದ್ದಾರೆ.

ಸಿನಿರಂಗದಲ್ಲಿ ಕೇವಲ ನಟನೆಯಿಂದ ಸ್ಟಾರ್‍ ಡಮ್ ಪಡೆದುಕೊಂಡವರಲ್ಲಿ ಕಡಿಮೆ ಮಂದಿಯೇ ಇರುತ್ತಾರೆ. ಅವರಲ್ಲಿ ಸಾಯಿ ಪಲ್ಲವಿ ಸಹ ಒಬ್ಬರಾಗಿದ್ದಾರೆ. ಪ್ರಸಕ್ತ ಕಾಲದ ಹಿರೋಯಿನ್ ಗಳಲ್ಲಿ ಸಾಯಿ ಪಲ್ಲವಿ ಪ್ರತ್ಯೇಕ ಎಂದು ಹೇಳಬಹುದಾಗಿದೆ. ಇನ್ನೂ ನಟಿ ಸಾಯಿ ಪಲ್ಲವಿ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆ. ನಟರಿಗೆ ಸಮನಾಗಿ ಆಕೆ ಹೆಜ್ಜೆ ಹಾಕಬಲ್ಲ ಪ್ರಾವೀಣ್ಯತೆ ಹೊಂದಿದ್ದಾರೆ. ಇನ್ನೂ ತೆಲುಗು ಸಿನಿರಂಗದ ಟಾಪ್ ಡ್ಯಾನ್ಸರ್‍ ಹಿರೋಗಳೆಂದೇ ಕರೆಯಲಾಗುವ ಜೂನಿಯರ್‍ ಎನ್.ಟಿ.ಆರ್‍, ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಜೊತೆಗೆ ಸಾಯಿ ಪಲ್ಲವಿ ಒಂದು ಡ್ಯಾನ್ಸ್ ಮಾಡಬೇಕೆಂಬ ಬೇಡಿಕೆ ಸಿನಿರಸಿಕರು ಕೋರುತ್ತಿದ್ದಾರೆ. ಆದರೆ ಆಕೆ ಅವರ ಸಿನೆಮಾಗಳಲ್ಲಿ ನಟಿಸಿದಾಗ ಸಿನಿರಸಿಕರ ಬೇಡಿಕೆ ಈಡೆರಬಹುದಾಗಿದೆ. ಇನ್ನೂ ಇತ್ತೀಚಿಗೆ ನಡೆದ ಟಾಕ್ ಶೋ ನಲ್ಲಿ ಸಾಯಿ ಪಲ್ಲವಿಗೆ ಈ ಮೂರು ನಟರ ಜೊತೆಗೆ ನೃತ್ಯ ಮಾಡುವ ಅವಕಾಶ ಬಂದರೇ ಯಾರ ಜೊತೆ ನಟಿಸುತ್ತೀರಾ ಎಂದು ಪ್ರಶ್ನೆ ಎದುರಾಗಿದ್ದು, ಈ ಬಗ್ಗೆ ಆಕೆ ಮೈಂಡ್ ಬ್ಲಾಕ್ ಆಗುವಂತಹ ಉತ್ತರ ನೀಡಿದ್ದಾರೆ.

ಇನ್ನೂ ಸಾಯಿ ಪಲ್ಲವಿಗೆ ಹೀಗೊಂದು ಪ್ರಶ್ನೆ ಎದುರಾಗಿದ್ದು, ಜೂನಿಯರ್‍ ಎನ್.ಟಿ.ಆರ್‍, ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಈ ಮೂವರಲ್ಲಿ ಯಾವ ನಟನೊಂದಿಗೆ ಡ್ಯಾನ್ಸ್ ಮಾಡಲು ಬಯಸುತ್ತೀರಾ ಎಂದು ಪ್ರಶ್ನೆ ಬಂದಿದೆ. ಈ ವೇಳೆ ಆಕೆ ಉತ್ತರ ನೀಡುತ್ತಾ ನಾನು ಮೂವರೊಂದಿಗೆ ಒಂದು ಸಾಂಗ್ ಮಾಡುತ್ತೇನೆ ಎಂದು ಮೈಂಡ್ ಬ್ಲೋಯಿಂಗ್ ಉತ್ತರ ನೀಡಿದ್ದಾರೆ. ಇನ್ನೂ ನಟಿ ಸಾಯಿ ಪಲ್ಲವಿ ಚಾಣಕ್ಷತೆಯಿಂದ ಉತ್ತರ ನೀಡಿದ್ದಾರೆ ಎನ್ನಬಹುದಾಗಿದೆ. ಏಕೆಂದರೆ ಒಬ್ಬ ನಟನ ಹೆಸರು ಹೇಳಿದರೇ, ಉಳಿದ ಇಬ್ಬರು ನಟರ ಅಭಿಮಾನಿಗಳು ಬೇಸರಗೊಳ್ಳುತ್ತಾರೆ. ಈ ಕಾರಣದಿಂದಲೇ ಸಾಯಿಪಲ್ಲವಿ ಟ್ಯಾಲೆಂಟ್ ಆಗಿ ಉತ್ತರ ನೀಡಿದ್ದಾರೆ.

ಇನ್ನೂ ಸಾಯಿ ಪಲ್ಲವಿ ಕೊನೆಯದಾಗಿ ವೀರಾಟಪರ್ವಂ ಎಂಬ ಸಿನೆಮಾದ ಮೂಲಕ ಕಾಣಿಸಿಕೊಂಡಿದ್ದರು. ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಆಗಲಿಲ್ಲ. ಬಳಿಕ ಆಕೆ ಯಾವುದೇ ಸಿನೆಮಾದಲ್ಲಿ ನಟಿಸುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಆಕೆ ಪುಷ್ಪಾ-2 ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆಂಬ ಸುದ್ದಿಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತವಾದ ಪ್ರಕಟನೆ ಮಾತ್ರ ಇಲ್ಲ. ಇನ್ನೂ ಸಾಯಿಪಲ್ಲವಿ ಶಿವಕಾರ್ತಿಕೇಯನ್ ಜೊತೆ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದಾರೆ.

Most Popular

To Top