Film News

ಮೊದಲ ಬಾರಿಗೆ ಅವಳಿ ಮಕ್ಕಳೊಂದಿಗೆ ಹೊರಗೆ ಕಾಣಿಸಿಕೊಂಡ ನಯನ್ ಅಂಡ್ ವಿಗ್ನೇಶ್, ಪೊಟೋಸ್ ವೈರಲ್…!

ಇತ್ತೀಚಿಗೆ ಸಿನಿರಂಗದಲ್ಲಿ ಸದಾ ಸುದ್ದಿಯಲ್ಲೇ ಇದ್ದಂತಹ ಜೋಡಿ ಎಂದರೇ ಅದು ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿ. ಕಳೆದ ಜೂನ್ 9 ರಂದು ಚೆನ್ನೈನಲ್ಲಿ ನಯನ್ ಅಂಡ್ ವಿಕ್ಕಿ ಮದುವೆ ಅದ್ದೂರಿಯಾಗಿಯೇ ನಡೆಯಿತು. ಬಳಿಕ ಅವರು ಅನೇಕ ವಿವಾದಗಳಲ್ಲಿ ಸಿಲುಕಿಕೊಂಡರು. ಇನ್ನೂ ಇತ್ತೀಚಿಗಷ್ಟೆ ಈ ಜೋಡಿ ಸೆರಗೋಸಿ ಪದ್ದತಿಯ ಮೂಲಕ ಅವಳಿ ಗಂಡು ಮಕ್ಕಳನ್ನು ಪಡೆದುಕೊಂಡಿದ್ದು, ಈ ವಿಚಾರ ಹೊರ ಬರುತ್ತಿದ್ದಂತೆ ಅನೇಕ ವಿವಾದಗಳೂ ಸಹ ಹುಟ್ಟಿಕೊಂಡವು. ಎಲ್ಲ ವಿವಾದಗಳಿಂದ ಈ ಜೋಡಿ ಇದೀಗ ಹೊರಬಂದು ಜೀವನ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಮೊದಲ ಬಾರಿಗೆ ಅವಳಿ ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದು, ಪೊಟೋಗಳು ವೈರಲ್ ಆಗುತ್ತಿವೆ.

ಸೌತ್ ಸಿನಿರಂಗದಲ್ಲಿ ನಯನತಾರಾ ಲೇಡಿ ಸೂಪರ್‍ ಸ್ಟಾರ್‍ ಆಗಿ ಫೇಂ ಸಂಪಾದಿಸಕೊಂಡು ಮದುವೆಯಾದರೂ ಸಹ ಭಾರಿ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಕಳೆದ ವರ್ಷ ಜೂನ್ ಮಾಹೆಯಲ್ಲಿ ನಯನತಾರ ಹಾಗೂ ವಿಘ್ನೇಶ್ ಮದುವೆಯಾದರು. ಮದುವೆಯಾದ ಕೆಲವೇ ತಿಂಗಳಲ್ಲಿ ಸೆರಗೋಸಿ ಪದ್ದತಿಯ ಮೂಲಕ ಅವಳಿ ಮಕ್ಕಳ ತಾಯಿಯಾದರು. ಈ ಸುದ್ದಿ ಸಿನಿವಲಯದಲ್ಲಿ ಜೋರಾಗಿಯೇ ಸದ್ದು ಮಾಡಿತ್ತು. ಸರ್ಕಾರದ ನಿಯಮಗಳ ಪಾಲನೆ ಮಾಡಿಲ್ಲ ಎಂಬ ವಿವಾದ ಜೋರಾಗಿತ್ತು.  ಬಳಿಕ ಆ ವಿವಾದಕ್ಕೆ ಕ್ಲೀನ್ ಚಿಟ್ ಸಹ ದೊರೆಯಿತು.

ಸದ್ಯ ನಯನತಾರಾ ಸಿನೆಮಾಗಳ ಜೊತೆಗೆ ತನ್ನ ಮಕ್ಕಳೊಂದಿಗೆ ಕುಟುಂಬವನ್ನೂ ಸಹ ಲೀಡ್ ಮಾಡುತ್ತಿದ್ದಾರೆ. ಇತ್ತೀಚಿಗೆ ಆಕೆ ಕನೆಕ್ಟ್ ಎಂಬ ಹಾರರ್‍ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇನ್ನೂ ನಯನತಾರಾ ಹಾಗೂ ವಿಗ್ನೇಶ್ ಆಗಾಗ ಹೊರಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ತಮ್ಮ ಅವಳಿ ಮಕ್ಕಳೊಂದಿಗೆ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಇನ್ನು ನಯನ್ ವಿಗ್ನೇಶ್ ತಮ್ಮ ಮಕ್ಕಳೊಂದಿಗೆ ಹೊರಗೆ ಬಂದಿದ್ದು, ಅಲ್ಲಿದ್ದ ಕೆಲ ಕ್ಯಾಮೆರಾಗಳು ಅವರನ್ನು ಸೆರೆ ಹಿಡಿದಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದಾರೆ. ನಯನ್ ಹಾಗೂ ವಿಗ್ನೇಶ್ ತಮ್ಮ ಮಕ್ಕಳನ್ನು ಎತ್ತಿಕೊಂಡು ಕಾರಿನಿಂದ ಇಳಿದು ಆತುರವಾಗಿ ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನೂ ಈ ಜೋಡಿ ಮಕ್ಕಳನ್ನು ಪಡೆದುಕೊಂಡಾಗಿನಿಂತ ತಮ್ಮ ಮಕ್ಕಳ ಮುಖವನ್ನು ತೋರಿಸಿರಲಿಲ್ಲ. ಈಗಲೂ ಸಹ ಮಕ್ಕಳ ಮುಖ ಕ್ಯಾಮೆರಾ ಕಣ್ಣಿಗೆ ಬೀಳದಂತೆ ಎಚ್ಚರಿಕೆ ತೆಗೆದುಕೊಂಡಿದ್ದಾರೆ. ಇನ್ನೂ ಇಬ್ಬರೂ ಮಕ್ಕಳಿಗೂ ಒಂದೆ ಮಾದರಿ ಬಟ್ಟೆಗಳನ್ನು ಹಾಕಿದ್ದರು. ಸದ್ಯ ಈ ವಿಡಿಯೋಗಳು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

Most Popular

To Top