ಮಂಚು ಮನೋಜ್ ಸಿನೆಮಾದಲ್ಲಿ ಮೆಗಾ ಡಾಟರ್ ನಿಹಾರಿಕಾ, ವಾಟ್ ದಿ ಫಿಶ್ ಸಿನೆಮಾದ ಫಸ್ಟ್ ಲುಕ್ ವೈರಲ್……!

Follow Us :

ಟಾಲಿವುಡ್ ಸಿನಿರಂಗದ ಮೆಗಾ ಕುಟುಂಬದ ಏಕೈಕ ನಟಿ ನಿಹಾರಿಕಾ ಕೊಣಿದೆಲಾ ಕೆಲವು ದಿನಗಳ ಹಿಂದೆಯಷ್ಟೆ ಚೈತನ್ಯ ಜೊನ್ನಲಗಡ್ಡ ರವರಿಂದ ವಿಚ್ಚೇದನ ಪಡೆದುಕೊಂಡು ಸುದ್ದಿಯಾಗಿದ್ದರು. ವಿಚ್ಚೇದನ ಪಡೆಯುವುದಕ್ಕೂ ಮುಂಚೆಯಿಂದಲೇ ನಿಹಾರಿಕಾ ಚೈತನ್ಯ ರಿಂದ ದೂರವೇ ಉಳಿದಿದ್ದರು. ಸದ್ಯ ನಿಹಾರಿಕಾ ತನ್ನ ಸಂಪೂರ್ಣ ಪೋಕಸ್ ಸಿನೆಮಾಗಳ ಮೇಲಿಟ್ಟಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಸಹ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದು, ಇದೀಗ ಆಕೆ ವಾಟ್ ದಿ ಫಿಶ್ ಎಂಬ ಸಿನೆಮಾದಲ್ಲಿ ಮಂಚು ಮನೋಜ್ ಜೊತೆಗೆ ನಟಿಸಲಿದ್ದು, ಸಿನೆಮಾ ಫಸ್ಟ್ ಲುಕ್ ಪೋಸ್ಟರ್‍ ಬಿಡುಗಡೆಯಾಗಿದೆ.

ನಟಿ ನಿಹಾರಿಕಾ ಡಿ.18 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ  ಅನೇಕ ಅಭಿಮಾನಿಗಳು ಶುಭಾಷಯಗಳ ಸುರಿಮಳೆ ಗೈದಿದ್ದಾರೆ. ಸದ್ಯ ನಿಹಾರಿಕಾ ವಾಟ್ ದಿ ಫಿಶ್ ಎಂಬ ಸಿನೆಮಾದಲ್ಲಿ ಮಂಚು ಮನೋಜ್ ಜೊತೆಗೆ ನಟಿಸಲಿದ್ದಾರೆ. ಆಕೆಯ ಹುಟ್ಟುಹಬ್ಬದ ಅಂಗವಾಗಿ ವಾಟ್ ದಿ ಫಿಶ್ ಸಿನೆಮಾದ ಪೋಸ್ಟರ್‍ ಸಹ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್‍ ನಲ್ಲಿ ನಿಹಾರಿಕಾ ಸೂಪರ್‍ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಟೈಟ್ ಫಿಟ್ ಮಿನಿ ಡ್ರೆಸ್ ನಲ್ಲಿ ನಿಹಾರಿಕಾ ಮಿಂಚಿದ್ದಾರೆ. ಈ ಸಿನೆಮಾದಲ್ಲಿ ಆಕೆಯ ಪಾತ್ರದ ಹೆಸರು ಆಷ್ ಎಂದು ಹೇಳಿದ್ದಾರೆ. ಈ ಸಿನೆಮಾದಲ್ಲಿ ನಿಹಾರಿಕಾ ಪಾತ್ರದ ಪೂರ್ಣ ಹೆಸರು ಅಷ್ಟಲಕ್ಷ್ಮಿಯಂತೆ. ಈ ಸಿನೆಮಾದಲ್ಲಿ ನಿಹಾರಿಕಾ ಪಾತ್ರ ಹಣದ ಸುತ್ತಾ ಇರುತ್ತದೆ ಎಂದು ಹೇಳಲಾಗುತ್ತಿದೆ.

ಇನ್ನೂ ನಟಿ ನಿಹಾರಿಕಾ ಮದುವೆಯಾದ ಕೆಲವೇ ವರ್ಷಗಳಲ್ಲಿ ಗಂಡನಿಂದ ವಿಚ್ಚೇದನ ಪಡೆದುಕೊಂಡರು. ಸದ್ಯ ಆಕೆ ತನ್ನ ಪೋಕಸ್ ಸಂಪೂರ್ಣವಾಗಿ ಸಿನೆಮಾಗಳ ಮೇಲಿಟ್ಟಿದ್ದಾರೆ. ಸಿನೆಮಾಗಳ ಅವಕಾಶಗಳಿಗಾಗಿ ಆಕೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಮೇಕರ್ಸ್ ಗಮನ ಸಹ ಸೆಳೆಯುತ್ತಿರುತ್ತಾರೆ. ಜೊತೆಗೆ ತನ್ನ ಸ್ವಂತ ನಿರ್ಮಾಣ ಸಂಸ್ಥೆಯನ್ನು ಸಹ ಹೊಂದಿದ್ದಾರೆ. ಪಿಂಕ್ ಎಲಿಫೆಂಟಾ ಎಂಬ ಬ್ಯಾನರ್‍ ಮೂಲಕ ಕೆಲವೊಂದು ಕಿರುಚಿತ್ರಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಸದ್ಯ ಆಕೆ ವಾಟ್ ದಿ ಫಿಶ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನೂ ಮಂಚು ಮನೋಜ್ ಸಹ ಕಳೆದ ವರ್ಷ ಭೂಮಾ ಮೋನಿಕಾ ರೆಡ್ಡಿ ಎಂಬಾಕೆಯನ್ನು ಮದುವೆಯಾದರು. ಜೊತೆಗೆ ಮಂಚು ಮನೋಜ್ ಸಿನೆಮಾಗಳಿಂದಲೂ ಸಹ ದೂರವೇ ಇದ್ದರು. ಮದುವೆಯಾದ ಬಳಿಕ ಮನೋಜ್ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಾಟ್ ದಿ ಫಿಶ್ ಎಂಬ ಸಿನೆಮಾದ ಜೊತೆಗೆ ಅವರು ಉಸ್ತಾದ್ ಎಂಬ ಟಾಕ್ ಶೋ ಹೋಸ್ಟ್ ಮಾಡುತ್ತಿದ್ದಾರೆ.