ಅಸಭ್ಯಕರವಾದ ಕೆಲಸ ಮಾಡಿ ದೇವರನ್ನ ಜಪಿಸಿದರೇ ಪಾಪಗಳು ಹೋಗುತ್ತಾ ಎಂದ ನೆಟ್ಟಿಗ, ಕಾಮೆಂಟ್ ಮಾಡಿದ ನೆಟ್ಟಿಗನಿಗೆ ಸರಿಯಾಗಿ ಕೌಂಟರ್ ಕೊಟ್ಟ ರಶ್ಮಿ…..!

Follow Us :

ತೆಲುಗು ಕಿರುತೆರೆಯಲ್ಲಿ ಭಾರಿ ಕ್ರೇಜ್ ಪಡೆದುಕೊಂಡ ಆಂಕರ್‍ ಗಳಲ್ಲಿ ಒಬ್ಬರಾದ ರಶ್ಮಿ ಕಿರುತೆರೆ ಶೋಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಜೊತೆಗೆ ಕೆಲವೊಮ್ಮೆ ಆಕೆ ಸಂಚಲನಾತ್ಮಕ ಪೋಸ್ಟ್ ಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಆಕೆ ಹಂಚಿಕೊಳ್ಳುವ ಕೆಲವೊಂದು ಪೋಸ್ಟ್ ಗಳ ಕಾರಣದಿಂದ ಆಕೆಯನ್ನು ಟ್ರೋಲ್ ಸಹ ಮಾಡುತ್ತಿರುತ್ತಾರೆ. ಇದೀಗ ಆಕೆಗೆ ವಲ್ಗರ್‍ ಆಗಿ ಕಾಮೆಂಟ್ ಮಾಡಿದಂತಹ ನೆಟ್ಟಿಗನಿಗೆ ಮುಟ್ಟಿ ನೋಡಿಕೊಳ್ಳುವಂತಹ ಕೌಂಟರ್‍ ಕೊಟ್ಟಿದ್ದಾರೆ.

ಆಂಕರ್‍ ಕಂ ನಟಿ ರಶ್ಮಿ ಕಿರುತೆರೆಯಲ್ಲಿ ಭಾರಿ ಪೇಂ ಪಡೆದುಕೊಂಡಿದ್ದಾರೆ. ನಟಿಯಾಗಿ ಕೆರಿಯರ್‍ ಆರಂಭಿಸಿದರೂ ಸಹ ಆಕೆಗೆ ಕಿರುತೆರೆಯಲ್ಲಿ ಭಾರಿ ಕ್ರೇಜ್ ಪಡೆದುಕೊಂಡರು. ಇದೀಗ ಸಿನೆಮಾಗಳಲ್ಲೂ ಸಹ ಫೇಂ ಪಡೆದುಕೊಳ್ಳಲು ಭಾರಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಸಹ ಯಾವುದೇ ಸಿನೆಮಾ ಆಕೆಗೆ ಬ್ರೇಕ್ ನೀಡಲಿಲ್ಲ ಎಂದೇ ಹೇಳಬಹುದು. ಸಿನೆಮಾಗಳಲ್ಲಿ ಆಕೆಯ ಜೋರು ಕಡಿಮೆಯಾದರೂ ಸಹ ಕಿರುತೆರೆಯಲ್ಲಿ ಮಾತ್ರ ಆಕೆ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ವಿವಿಧ ಶೋಗಳ ಮೂಲಕ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ತೆಲುಗು ಕಿರುತೆರೆ ಶೋಗಳಿಗೆ, ವಿಶೇಷ ಕಾರ್ಯಕ್ರಮಗಳಿಗೆ ಮೊದಲ ಆಯ್ಕೆ ಆಗಿದ್ದಾರೆ ಎನ್ನಬಹುದಾಗಿದೆ.

ಇನ್ನೂ ನಟಿ ರಶ್ಮಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್, ವಿಡಿಯೋಗಳ ಮೂಲಕ ತನ್ನ ದೇಹದ ಮೈಮಾಟ ಶೋ ಮಾಡುತ್ತಾ ಅಭಿಮಾನಿಗಳು ಹಾಗೂ ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ. ಆಗಾಗ ತನ್ನ ಅಭಿಮಾನಿಗಳೊಂದಿಗೆ ಸಂವಾದ ಮಾಡುತ್ತಿರುತ್ತಾರೆ. ಇನ್ನೂ ಆಕೆ ಹಂಚಿಕೊಳ್ಳುವಂತಹ ಪೋಸ್ಟ್ ಗಳಿಗೆ ಬ್ಯಾಡ್ ಕಾಮೆಂಟ್ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ರಶ್ಮಿ ಬಗ್ಗೆ ಓರ್ವ ನೆಟ್ಟಿಗ ಬ್ಯಾಡ್ ಕಾಮೆಂಟ್ ಮಾಡಿದ್ದಾರೆ. ಅಯೋಧ್ಯ ರಾಮಮಂದಿರ ಉದ್ಘಾಟನೆಯ ಕುರಿತು ರಶ್ಮಿ ಸಂತೋಷ ವ್ಯಕ್ತಪಡಿಸುತ್ತಾ ರಶ್ಮಿ ಟ್ವೀಟ್ ಒಂದನ್ನು ಮಾಡಿದ್ದರು. ಈ ಪೋಸ್ಟ್ ಗೆ ಓರ್ವ ನೆಟ್ಟಿಗ ವ್ಯಂಗವಾಗಿ ಕಾಮೆಂಟ್ ಮಾಡಿದ್ದಾನೆ. ಮಾಡೋದೆಲ್ಲಾ ಅಸಭ್ಯಕರವಾದ ಕೆಲಸಗಳು, ದೇವರ ಹೆಸರನ್ನು ಜಪಿಸಿದರೇ ಎಲ್ಲವೂ ಹೋಗುತ್ತಾ ಎಂದು ಕಾಮೆಂಟ್ ಮಾಡಿದಾರೆ.

ಈ ಕಾಮೆಂಟ್ ಗೆ ರಶ್ಮಿ ಸರಿಯಾಗಿಯೇ ಕೌಂಟರ್‍ ಕೊಟ್ಟಿದ್ದಾರೆ. ನಾನು ಏನಾದರೂ ನಿಮ್ಮ ಹಣ ಕಸಿದಿದ್ದೀನಾ, ಕುಟುಂಬ ಜವಾಬ್ದಾರಿ ಮರೆತು ತಂದೆ ತಾಯಿಯವರನ್ನು ರಸ್ತೆಗೆ ಬಿಟ್ಟಿದ್ದೀನಾ, ಟ್ಯಾಕ್ಸ್ ಕಟ್ಟುತ್ತಿಲ್ಲವೇ, ಕಾನೂನಿಗೆ ವಿರುದ್ದವಾದ ಕೆಲಸ ಮಾಡುತ್ತೀದ್ದೀನಾ, ನಿಮ್ಮ ದೃಷ್ಟಿಯಲ್ಲಿ ಅಸಭ್ಯಕರವಾದ ಕೆಲಸಗಳು ಅಂದರೇ ಏನು? ಈ ಮಧ್ಯೆ ಹೆಚ್ಚಾಗಿ ಇಂತಹದೇ ಮಾತುಗಳನ್ನು ಕೇಳುತ್ತಿದ್ದೇನೆ. ನನ್ನವರೆಗೂ ಆ ದೇವರು ಸರ್ವಾಂತರ್ಯಾಮಿ. ಸನಾತನ ಧರ್ಮದಲ್ಲಿ ಒಳ್ಳೆಯ ವಿಚಾರ ಅದೇ ಎಂದು ಆ ನೆಟ್ಟಿಗನಿಗೆ ಸರಿಯಾಗಿ ಕೌಂಟರ್‍ ಕೊಟ್ಟಿದ್ದಾರೆ. ಇನ್ನೂ ರಶ್ಮಿ ನೀಡಿದ ಕೌಂಟರ್‍ ಗೆ ಆಕೆಯ ಫ್ಯಾನ್ಸ್ ಬೆಂಬಲ ಸೂಚಿಸುತ್ತಿದ್ದಾರೆ.