Film News

ಡ್ರೋನ್ ಪ್ರತಾಪ್ ವಿರುದ್ದ ಮತ್ತೊಂದು ದೂರು, ಹಣ ಪಡೆದು ಡ್ರೋನ್ ಕೊಡದೇ ವಂಚನೆ ಮಾಡಿಡ್ರಾ ಬಿಗ್ ಬಾಸ್ ಸ್ಪರ್ಧಿ…..!

ಕನ್ನಡ ರಿಯಾಲಿಟಿ ಶೋ ಗಳಲ್ಲಿ ಅತ್ಯಧಿಕ ಟಿ.ಆರ್‍.ಪಿ ಹೊಂದಿರುವ ಬಿಗ್ ಬಾಸ್ ಸೀಸನ್ ಸೀಸನ್ – 10 ವಿವಿಧ ಕಾರಣಗಳಿಂದ ಸುದ್ದಿಯಾಗುತ್ತಿದೆ. ಅದರಲ್ಲೂ ಈ ಸೀಸನ್ ಸ್ಪರ್ಧಿಗಳು ಕಾನೂನಿನ ಸಮಸ್ಯೆಯನ್ನು ಸಹ ಎದುರಿಸುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಡ್ರೋನ್ ಪ್ರತಾಪ್ ವಿರುದ್ದ ಬಿಬಿಎಂಪಿ ಅಧಿಕಾರಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎನ್ನಲಾಗಿತ್ತು. ಇದೀಗ ಮತ್ತೋಂದು ದೂರು ಡ್ರೋನ್ ಪ್ರತಾಪ್ ವಿರುದ್ದ ಕೇಳಿಬಂದಿದೆ.

ಕನ್ನಡದ ಬಿಗ್ ಬಾಸ್ ಸೀಸನ್ 10 ರ ಪ್ರಮುಖ ಸ್ಪರ್ಧಿಯಾಗಿರುವ ಡ್ರೋನ್ ಪ್ರತಾಪ್ ವಿರುದ್ದ ಮೋಸ ಮಾಡಿರುವ ಬಗ್ಗೆ ದೂರು ಕೇಳಿಬಂದಿದೆ. ಡ್ರೋನ್ ಪ್ರತಾಪ್ ತನ್ನ ಬ್ಯುಸಿನೆಸ್ ಪಾರ್ಟನರ್‍ ಆಗಿರುವ ಸಾರಂಗ್ ಮಾನೆ ಎಂಬಾತನಿಗೆ ಮೋಸ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಕಳೆದ 8 ತಿಂಗಳ ಹಿಂದೆ ಸಾರಂಗ್ ಮಾನೆ ಎಂಬಾತ ಡ್ರೋನ್ ಪ್ರತಾಪ್ ಗೆ 35 ಲಕ್ಷದ 75 ಸಾವಿರ ನೀಡಿ 9 ಡ್ರೋನ್ ಕೊಡುವಂತೆ ಕೇಳಿದ್ದರು. ಡ್ರೋನ್ ಕಳುಹಿಸುವುದಾಗಿ ಅಡ್ವಾನ್ಸ್ ಪಡೆದ ಪ್ರತಾಪ್ ಎರಡು ತಿಂಗಳ ಬಳಿಕ 2 ಡ್ರೋನ್, ಬಳಿಕ ಕೆಲವು ದಿನಗಳು ಕಳೆದ ಬಳಿಕ 2 ಡ್ರೋನ್ ಗಳನ್ನು ಕಳುಹಿಸಲಾಗಿದೆ. ಆದರೆ ಆ ಡ್ರೋನ್ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಬ್ಯಾಟರಿಗಳ ಗುಣಮಟ್ಟ ಸಹ ಸರಿಯಿಲ್ಲ. ಒಂದು ಡ್ರೋನ್ ಹಾರುವಾಗಲೇ ಕೆಳಗೆ ಬಿದ್ದು ಹೋಯ್ತು ಎಂದು ಸಾರಂಗ್ ಆರೋಪ ಮಾಡಿದ್ದಾರೆ.

ಇನ್ನೂ ಸಾರಂಗ್ ಮಾನೆ ಡ್ರೋನ್ ಪ್ರತಾಪ್ ಗೆ ಸೇರಿದ ಡ್ರೋನಾರ್ಕ್ ಏರೋಸ್ಪೇಸ್ ಪ್ರೈವೆಟ್ ಲಿಮಿಟೆಡ್ ಜೊತೆ ಬ್ಯುಸಿನೆಸ್ ಪಾರ್ಟನರ್‍ ಆಗಿದ್ದರು ಎನ್ನಲಾಗಿದೆ. ಇದೀಗ ಸಾರಂಗ್ ಮಾನೆ ಈ ಮೇಲ್ ಮೂಲಕ ಎಚ್ಚರಿಕೆ ಸಂದೇಶ ಕಳುಹಿಸಿದ್ದಾರಂತೆ. ಲೋನ್ ಹಾಗೂ ರೈತರ ಬಳಿ ಹಣ ಪಡೆದುಕೊಂಡು ಪ್ರತಾಪ್ ಗೆ ಕೊಟ್ಟಿದ್ದೇನೆ. ಆದರೆ ಪ್ರತಾಪ್ ಇಲ್ಲಿಯವರೆಗೂ ಹಣ ನೀಡಿಲ್ಲ. ಸದ್ಯ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿದ್ದಾನೆ. ಈ ಕಾರಣದಿಂದ ನಾನು ಸುಮ್ಮನೆ ಇದ್ದೀನಿ. ಬಂದ ಬಳಿಕ ನಮ್ಮ ಹಣ ವಾಪಸ್ಸು ನೀಡುವಂತೆ ಕೇಳುತ್ತೇನೆ. ಸದ್ಯ ನಮ್ಮದು ಸ್ಟಾರ್ಟ್ ಅಪ್ ಕಂಪನಿಯಾಗಿದೆ, ತುಂಬಾ ನಷ್ಟದಲ್ಲಿದ್ದೇವೆ ಎಂದು ಪ್ರತಾಪ್ ವಿರುದ್ದ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

Most Popular

To Top