ಶಾಕಿಂಗ್ ಗೆಟಪ್ ನಲ್ಲಿ ಕಾಣಿಸಿಕೊಂಡ ಅನಸೂಯ, ಪ್ರಭುದೇವಾ ವೂಲ್ಫ್ ಟೀಸರ್ ನಲ್ಲಿ ಮಾಟಗಾತಿ ಗೆಟಪ್?

ಕಿರುತೆರೆಯ ಮೂಲಕ ಫೇಂ ಪಡೆದುಕೊಂಡು ಸಕ್ಸಸ್ ಕಂಡುಕೊಂಡ ನಟಿಯರ ಸಾಲಿಗೆ ಸ್ಟಾರ್‍ ಬ್ಯೂಟಿ ಅನಸೂಯ ಸಹ ಸೇರುತ್ತಾರೆ. ಕಿರುತೆರೆಯಿಂದ ದೂರವಾದ ಅನಸೂಯ ಸದ್ಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ಸ್ಟಾರ್‍ ನಟರ ಸಿನೆಮಾಗಳಲ್ಲಿ ಸ್ಪೇಷಲ್ ರೋಲ್ ಗಳಲ್ಲಿ ಕಾಣಿಕೊಳ್ಳುತ್ತಾ ತನ್ನ ಇಮೇಜ್ ಬೆಳೆಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಪ್ರಭುದೇವ ರವರ ವೂಲ್ಫ್ ಸಿನೆಮಾದಲ್ಲಿ ಸ್ಪೇಷಲ್ ಕ್ಯಾರೆಕ್ಟರ್‍ ಪೋಷಣೆ ಮಾಡುತ್ತಿದ್ದು, ಆಕೆಯ ಲುಕ್ಸ್ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ ಎನ್ನಲಾಗುತ್ತಿದೆ.

ಸ್ಟಾರ್‍ ಬ್ಯೂಟಿ ಅನಸೂಯ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಕಡಿಮೆ ಸಮಯದಲ್ಲೇ ಭಾರಿ ಸಕ್ಸಸ್ ಕಂಡುಕೊಂಡರು. ಕೆಲವೇ ದಿನಗಳಲ್ಲಿ ಗ್ಲಾಮರ್‍ ಸೆನ್ಷೇಷನ್ ಕ್ರಿಯೇಟ್ ಮಾಡಿದರು. ಗ್ಲಾಮರ್‍ ಮೂಲಕ ಆಕೆ ಸಿನೆಮಾಗಳಲ್ಲಿ ಒಳ್ಳೆಯ ಅವಕಾಶಗಳನ್ನು ಪಡೆದುಕೊಂಡರು. ರಂಗಸ್ಥಲಂ, ಕ್ಷಣಂ, ಪುಷ್ಪಾ ಸೇರಿದಂತೆ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರು. ಈ ಸಿನೆಮಾಗಳ ಮೂಲಕ ಆಕೆ ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನು ಸಹ ಪಡೆದುಕೊಂಡರು. ಇನ್ನೂ ಅನಸೂಯ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ. ಜೊತೆಗೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕವೂ ಸಹ ಆಕೆ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ನಟನೆಗೆ ಪ್ರಾಧಾನ್ಯತೆ ಇದ್ದರೇ ಎಂತಹ ಪಾತ್ರಗಳಲ್ಲಾದರೂ ನಟಿಸಲು ಸಿದ್ದರಾಗಿರುತ್ತಾರೆ ನಟಿ ಅನಸೂಯ. ಇದೀಗ ಆಕೆ ಪ್ರಭುದೇವ ಹಿರೋ ಆಗಿ ನಟಿಸುತ್ತಿರುವ ವೂಲ್ಫ್ ಎಂಬ ಸಿನೆಮಾದಲ್ಲಿ ಅನಸೂಯ ಸಹ ಸ್ಪೇಷಲ್ ರೋಲ್ ಪ್ಲೇ ಮಾಡಲಿದ್ದಾರಂತೆ. ಈ ಸಿನೆಮಾದ ಟೀಸರ್‍ ಸಹ ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಟೀಸರ್‍ ನೋಡುತ್ತಿದ್ದರೇ ಇದೊಂದು ಹಾರರ್‍ ಮಾದರಿಯ ಸಿನೆಮಾ ಎಂಬಂತೆ ಕಾಣಿಸುತ್ತಿದೆ. ಇನ್ನೂ ಟೀಸರ್‍ ನಲ್ಲಿ ಅನಸೂಯ ಸಹ ಕಾಣಿಸಿಕೊಂಡಿದ್ದು, ಆಕೆಯ ಗೆಟಪ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಮಾಟಗಾತಿಯಂತೆ ಅನಸೂಯ ಕಾಣಿಸಿಕೊಂಡಿದ್ದಾರೆ. ಆಕೆಯ ಬಾಡಿ ಲಾಂಗ್ವೇಜ್ ನೋಡುತ್ತಿದ್ದರೇ ಅನಸೂಯ ಭಾರಿ ಭಯಂಕರವಾಗಿ ಅಭಿನಯಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಆಕೆಯ ಈ ಲುಕ್ಸ್ ಕಂಡ ಅಭಿಮಾನಿಗಳು ಹಾಗೂ ನೆಟ್ಟಿಗರೂ ಶಾಕ್ ಆಗಿದ್ದಾರೆ. ಜೊತೆಗೆ ಟ್ರೋಲ್ ಸಹ ಮಾಡುತ್ತಿದ್ದಾರೆ. ಟೀಸರ್‍ ನಲ್ಲೇ ಈ ಮಾದರಿಯಾದರೇ ಇನ್ನೂ ಸಿನೆಮಾದಲ್ಲಿ ಆಕೆಯ ಅಭಿನಯ ಹೇಗಿರುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನೂ ಈ ಸಿನೆಮಾದಲ್ಲಿ ಪ್ರಭುದೇವ ಹಿರೋ ಆಗಿ ಅನಸೂಯ, ರಾಯ್ ಲಕ್ಷ್ಮೀ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅನಸೂಯ ಕೊನೆಯದಾಗಿ ವಿಮಾನಂ ಎಂಬ ಸಿನೆಮಾದಲ್ಲಿ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಪುಷ್ಪ-2 ಸಿನೆಮಾದಲ್ಲೂ ಸಹ ಅನಸೂಯ ಬ್ಯುಸಿಯಾಗಿದ್ದು, ಈ ಸಿನೆಮಾದ ಬಳಿಕ ಆಕೆಯ ಕ್ರೇಜ್ ಮತಷ್ಟು ಏರಬಹುದು ಎಂದು ಹೇಳಲಾಗುತ್ತಿದೆ.