ಸತ್ತ ಮೇಲೂ ಸವತಿ ಕಾಟ, ಆತ್ಮದ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಮಹಿಳೆ…..!

Follow Us :

ಜೀವನದಲ್ಲಿ ಕೆಲವೊಂದು ವಿಚಿತ್ರವಾದ ಸನ್ನಿವೇಶಗಳು ನಡೆಯುತ್ತಿರುತ್ತಿವೆ. ನಂಬಲು ಕಷ್ಟಕರವಾದರೂ ಸಹ ಕೆಲವು ಘಟನೆಗಳು ನಡೆದು ಹೋಗುತ್ತವೆ. ಇಂದಿನ ತಂತ್ರಜ್ಞಾನ ಯುಗದಲ್ಲೂ ಸಹ ಆತ್ಮಗಳು, ದೆವ್ವಗಳ ಬಗ್ಗೆ ಸುದ್ದಿಗಳನ್ನು ನಾವು ಕೇಳುತ್ತಲೆ ಇರುತ್ತೇವೆ. ಆತ್ಮ-ದೆವ್ವಗಳ ಬಗ್ಗೆ ಪರ-ವಿರೋಧ ಚರ್ಚೆಗಳು ಇಂದಿಗೂ ಸಹ ನಡೆಯುತ್ತಲೇ ಇರುತ್ತವೆ. ಇದೀಗ ಮತ್ತೊಂದು ಘಟನೆ ನಡೆದಿದ್ದು, ಸತ್ತ ಮೇಲೂ ಸವತಿ ಕಾಟದಿಂದ ನಲವತ್ತು ವರ್ಷದ ಮಹಿಳೆ ಆತ್ಮದ ಕಾಟದಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜ್ ಕೋಟ್ ಎಂಬ ಪ್ರದೇಶದಲ್ಲಿ ನಡೆದಿದೆ.

ಹೌದು ಆತ್ಮದ ಕಾಟದಿಂದ ಮಹಿಳೆಯೊಬ್ಬರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಮಹಿಳೆಯನ್ನು ಜಲ್ಪಾ ಬಗ್ತಾರಿಯಾ ಎಂದು ಗುರ್ತಿಸಲಾಗಿದೆ. ಆಕೆ ಲಕ್ಷ್ಮಣ್ ಕೋಲಿ ಎಂಬಾತನನ್ನು ಎರಡನೇ ವಿವಾಹವಾಗಿದ್ದರು. ಜಲ್ಬಾ ಸಹ ಮೊದಲ ಪತಿಯಿಂದ ವಿಚ್ಚೇದನ ಪಡೆದುಕೊಂಡು ಲಕ್ಷ್ಮಣ್ ಕೋಲಿಯನ್ನು ಮದುವೆಯಾದರು. ಜಲ್ಬಾಗೂ ಇಬ್ಬರು ಗಂಡು ಮಕ್ಕಳಿದ್ದರು, ಲಕ್ಷ್ಮಣ್ ಕೋಲಿಗೂ ಇಬ್ಬರು ಗಂಡು ಮಕ್ಕಳಿದ್ದರು. ಕಳೆದ ಆರು ತಿಂಗಳ ಹಿಂದೆ ಅವರು ಮದುವೆಯಾದರು ಆಕೆ ತನ್ನ ಪತಿ ಹಾಗೂ ಇಬ್ಬರು ಪುತ್ರರೊಂದಿಗೆ ವಾಸ ಮಾಡುತ್ತಿದ್ದರು. ಆದರೆ ಜಲ್ಬಾ ಪುತ್ರರು ಮಾತ್ರ ಹೆತ್ತವರೊಂದಿಗೆ ವಾಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಜಲ್ಬಾ ಎರಡು ತಿಂಗಳ ಹಿಂದೆ ಆಕೆಯ ತಂದೆ ಭಗವಾನ್ ಗೆ ಕರೆ ಮಾಡಿ ತನ್ನ ಪತಿಯ ಮೃತ ಹೆಂಡತಿಯ ಪೊಟೋ ಮನೆಯಲ್ಲಿಟ್ಟುಕೊಂಡು ಅವಳನ್ನು ಪೂಜೆ ಮಾಡುತ್ತಾನೆ. ಬಳಿಕ ಆತನ ಮೈಮೇಲೆ ಆಕೆ ಬರುತ್ತಾಳೆ. ದುಷ್ಟ ಶಕ್ತಿಯ ಪ್ರಭಾವದಿಂದ ನನಗೆ ಹಿಂಸೆ ಮಾಡುತ್ತಿದ್ದ. ಜೊತೆಗೆ ನನ್ನ ಮೇಲೆ ಕೋಪಗೊಂಡು ಪತಿಯ ದೇಹದಲ್ಲಿದ್ದ ಆತನ ಮೊದಲ ಹೆಂಡತಿ ನನ್ನ ಮೇಲೆ ದೈಹಿಕ ಹಲ್ಲೆ ಮಾಡುತ್ತಿದ್ದಳು ಎಂದು ಹೇಳಿದ್ದರಂತೆ. ಬಳಿಕ ಜಲ್ಜಾ ಪೋಷಕರೂ ಸಹ ಮಧ್ಯೆ ಪ್ರವೇಶಿಸಿ ಅನೇಕ ಸಂಬಂಧ ಸರಿಮಾಡಲು ತುಂಬಾ ಪ್ರಯತ್ನಗಳನ್ನು ಸಹ ಮಾಡಿದ್ದೇವು ಎಂದು ಮೃತಳ ತಂದೆ ಭಗವಾನ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಮೃತಳು ಮದುವೆಯಾದ ಆರು ತಿಂಗಳಲ್ಲೇ ಹಲವು ಬಾರಿ ತನ್ನ ಪೋಷಕರ ಮನೆಗೆ ವಾಪಸ್ಸು ಬಂದಿದ್ದಳಂತೆ. ಆದರೆ ಆಕೆಯ ಪೋಷಕರು ಮನವೊಲಿಸಿ ಬಳಿಕ ಗಂಡನ ಮನೆಗೆ ಕಳುಹಿಸುತ್ತಿದ್ದರಂತೆ. ಆದರೆ ಈ ಹಿಂಸಾತ್ಮಕ ಕೃತ್ಯದಿಂದ ಬೇಸತ್ತ ಮಹಿಳೆ ಕಳೆದ ಜು.28 ರಂದು ತನ್ನ ಸಹೋದರಿಗೆ ಕರೆ ಮಾಡಿ ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.