News

ಪಾಕ್ ಭಯೋತ್ಪಾದಕರ ಧಾಳಿ ಸಂಚು, ಅಯೋಧ್ಯೆಯಲ್ಲಿ ಭದ್ರತೆ ಹೆಚ್ಚಳ…..!

ಕೋಟ್ಯಂತರ ಹಿಂದೂಗಳ ಬಹುದಿನಗಳ ಕನಸಾಗಿರುವ ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ರಾಮಮಂದಿರ ಉದ್ಘಾಟನೆಗೂ ಸಹ ಕ್ಷಣ ಗಣನೆ ಆರಂಭವಾಗಿದೆ. ಅಂತಿಮ ಹಂತ ಕಾಮಗಾರಿಗಳು ಜೋರಾಗಿ ನಡೆಯುತ್ತಿದೆ. ಜನವರಿ ಆರಂಭದಿಂದಲೇ ಪೂಜಾ ಕಾರ್ಯಕ್ರಮಗಳು ನೆರವೇರಲಿದ್ದು, ಜ.22 ರಂದು ಪ್ರಧಾನಿ ನರೇಂದ್ರ ಮೋದಿಯವರು ಶ್ರೀರಾಮ ಮಂದಿರ ಉದ್ಘಾಟಿಸಲಿದ್ದಾರೆ. ರಾಮಮಂದಿರ ಉದ್ಟಾಟನಾ ಸಮಯ ಹತ್ತಿರವಾಗುತ್ತಿದ್ದಂತೆ ಆಘಾತಕಾರಿ ಸುದ್ದಿಯೊಂದು ಹೊರಬಂದಿದೆ. ಪಾಕ್ ಭಯೋತ್ಪಾದಕರು ಅಯೋಧ್ಯೆಯಲ್ಲಿ ಧಾಳಿ ಮಾಡಲು ಸಂಚು ರೂಪಿಸಲಾಗಿದೆ ಎಂಬ ಸುದ್ದಿ ಬಹಿರಂಗವಾಗಿದೆ.

ಇನ್ನೇನು ಕೆಲವೇ ದಿನಗಳಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ. ಕೋಟ್ಯಂತರ ಹಿಂದೂಗಳ ಈ ಮಹತ್ತರ ದೈವಿಕ ಕಾರ್ಯಕ್ರಮಕ್ಕಾಗಿ ಕಾದು ಕುಳಿತಿದ್ದಾರೆ. ಈ ನಡುವೆ ಪಾಕಿಸ್ತಾನದ ಅಲ್ ಖೈದಾ ಹಾಗೂ ಲಷ್ಕರ್‍ ಇ ತೋಯ್ಬಾ ಉಗ್ರ ಸಂಘಟನೆಗಳು ಶ್ರೀರಾಮ ಮಂದಿರದ ಮೇಲೆ ದಾಳಿ ಮಾಡಲು ಸಂಚು ರೂಪಿಸಿದೆ ಎಂದು ತಿಳಿದುಬಂದಿದೆ. ರಾಮಮಂದಿರದ ಮೇಲೆ ದಾಳಿ ಮಾಡಿ, ಕಾಶ್ಮೀರದಂತೆ ಅಯೋಧ್ಯೆಯನ್ನು ಸಹ ವಿವಾದಿತ ಭೂಮಿಯನ್ನಾಗಿ ಪರಿವರ್ತಿಸುವುದು, ಅಯೋಧ್ಯೆಯಲ್ಲಿ ರಾಮಮಂದಿರ ತಲೆ ಎತ್ತಿ ನಿಲ್ಲದಂತೆ ಮಾಡುವ ದೊಡ್ಡ ಹುನ್ನಾರ ನಡೆದಿದ್ದು, ಈಗಾಗಲೇ ದಾಳಿಗಾಗಿ ಈ ಉಗ್ರ ಸಂಘಟನೆಗಳು ಮಹತ್ವದ ಚರ್ಚೆ ಸಹ ನಡೆಸಿ, ದಾಳಿ ಮಾಡಲು ಸಜ್ಜು ಮಾಡಿಕೊಂಡಿದೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ಬಹಿರಂಗಗೊಳಿಸಿದೆ.

ಈ ಉಗ್ರ ಸಂಘಟನೆ ಸಂಚು ತಿಳಿಯುತ್ತಿದ್ದಂತೆ ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯಲ್ಲಿ ಹೆಚ್ಚುವರಿ ಭದ್ರತಾ ಪಡೆಯನ್ನು ನಿಯೋಜನೆ ಮಾಡಿದೆ. ಉತ್ತರ ಪ್ರದೇಶಕ್ಕೆ ಬರುವಂತಹ ಎಲ್ಲಾ ವಾಹನಗಳನ್ನು, ಹೋಟೆಲ್ ಸೇರಿದಂತೆ ಎಲ್ಲಾ ಕಡೆ ತಪಾಸಣೆ ಮಾಡಲಾಗುತ್ತಿದೆ. ಜೊತೆಗೆ ಕೇಂದ್ರ ಸರ್ಕಾರ ಸಹ ಉತ್ತರ ಪ್ರದೇಶ ಸರ್ಕಾರದ ಜೊತೆ ಮಾತುಕತೆ ನಡೆಸಿ, ಉತ್ತರ ಪ್ರದೇಶದಲ್ಲಿ ಭದ್ರತೆ ಸಹ ಹೆಚ್ಚಿಸಲು ಸರ್ಕಾರ ನಿರ್ಧಾರ ಮಾಡಿದೆ. ದೇಶದ ಗಡಿಯಲ್ಲೂ ಸಹ ಹೆಚ್ಚಿನ ನಿಗಾ ವಹಿಸಿದೆ. ಎಲ್ಲಾ ರೀತಿಯಲ್ಲೂ ಉಗ್ರರ ಸಂಚು ಸಫಲವಾಗದಂತೆ ಸಜ್ಜಾಗಿದೆ.

Most Popular

To Top