Film News

ಮೊದಲ ಬಾರಿಗೆ ಜಾಹಿರಾತಿನಲ್ಲಿ ನಟಿಸಿದ ಬನ್ನಿ ವೈಫ್, ಯಾವುದೇ ಸ್ಟಾರ್ ನಟಿಗಿಂತ ಕಡಿಮೆಯಿಲ್ಲ ಎಂದ ಫ್ಯಾನ್ಸ್…….!

ಪ್ಯಾನ್ ಇಂಡಿಯಾ ಸ್ಟಾರ್‍ ಅಲ್ಲು ಅರ್ಜುನ್ ರವರ ಪತ್ನಿ ಸ್ನೇಹಾರೆಡ್ಡಿ ಸಹ ಭಾರಿ ಫಾಲೋಯಿಂಗ್ ಬೆಳೆಸಿಕೊಂಡಿದ್ದಾರೆ. ಸುಮಾರು ದಿನಗಳಿಂದ ಸ್ನೇಹಾರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸ್ಟಾರ್‍ ನಟಿಯರಂತೆ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರಿಗೂ ಶಾಕ್ ನೀಡುತ್ತಿದ್ದಾರೆ. ಸುಮಾರು ದಿನಗಳಿಂದ ಈಕೆ ಸಿನೆಮಾಗಳಲ್ಲಿ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿದ್ದು, ಇದೀಗ ಆಕೆ ಮೊದಲ ಬಾರಿಗೆ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿದ್ದು ಆಕೆಯನ್ನು ಕಂಡವರು ಸ್ಟಾರ್‍ ನಟಿಯರಿಗಿಂತ ಆಕೆ ಚೂರು ಕಡಿಮೆಯಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಟಾಲಿವುಡ್ ನ ಅಲ್ಲು ಕುಟುಂಬದ ಸೊಸೆ ಸ್ನೇಹಾ ರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ. ಸ್ಟಾರ್‍ ನಟಿಯರಿಗಿಂತಲೂ ತಾನು ಕಡಿಮೆಯಿಲ್ಲ ಎಂಬಂತೆ ಹಾಟ್ ಆಗಿ ಪೋಸ್ ಕೊಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಪೊಟೋಶೂಟ್ಸ್, ಕೆಲವೊಂದು ಪ್ರಮೋಷನ್ ಗಳು, ಹೆಲ್ತ್ ಟಿಪ್ಸ್ ನೀಡುತ್ತಾ ಆಕ್ಟೀವ್ ಆಗಿರುತ್ತಾರೆ.  ಅದರಲ್ಲೂ ಆಕೆ ಲೇಟೆಸ್ಟ್ ಔಟ್ ಫಿಟ್ ಗಳಲ್ಲಿ ಸ್ಟಾರ್‍ ನಟಿಯರನ್ನು ಮೀರಿಸುವಂತೆ ಬೋಲ್ಡ್ ಲುಕ್ಸ್ ಕೊಡುತ್ತಿರುತ್ತಾರೆ. ಅಲ್ಲು ಅರ್ಜುನ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದರೇ, ಸ್ನೇಹಾರೆಡ್ಡಿ ಕುಟುಂಬದ ನಿರ್ವಹಣೆಯನ್ನು ಮಾಡುತ್ತಾ, ಅಲ್ಲು ಅರ್ಜುನ್ ರವರ ಕೆಲವೊಂದು ಬ್ಯುಸಿನೆಸ್ ಗಳನ್ನು ಸಹ ನೋಡಿಕೊಳ್ಳುತ್ತಿರುತ್ತಾರೆ.

ಅಲ್ಲು ಸ್ನೇಹಾರೆಡ್ಡಿ ಹಂಚಿಕೊಳ್ಳುತ್ತಿದ್ದ ಪೊಟೋಶೂಟ್ಸ್ ಕಂಡು ಆಕೆ ಸಿನೆಮಾಗಳಲ್ಲಿ ನಟಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಸಹ ಕೇಳಿಬಂದವು. ಆದರೆ ಅದು ಸುಳ್ಳು ಎಂದು ತಿಳಿದುಬಂತು. ಇದೀಗ ಅಲ್ಲು ಸ್ನೇಹಾ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ. ಜಾಹಿರಾತೊಂದರಲ್ಲಿ ಆಕೆ ನಟಿಸಿದ್ದಾರೆ. ಈ ವಿಡಿಯೋ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಿಂಡರ್‍ ಎಸ್ ಚೋಕೋ ನೋನ್ ಕ್ರಿಸ್ಪಿ ಎಂಬ ಪ್ರಾಡಕ್ಟ್ ಪ್ರಮೋಟ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಈ ಜಾಹಿರಾತಿನಲ್ಲಿ ಸ್ನೇಹಾ ತುಂಬಾನೆ ನ್ಯಾಚುರಲ್ ಆಗಿ ಕಾಣಿಸಿಕೊಂಡಿದ್ದಾರೆ. ಆ  ಮೂಲಕ ಮೊದಲ ಬಾರಿಗೆ ಸ್ನೇಹಾ ಕ್ಯಾಮೆರಾ ಮುಂದೆ ನಟಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಈ ಜಾಹಿರಾತಿನಲ್ಲಿ ಸ್ನೇಹಾ ರನ್ನು ಕಂಡು ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ನಮ್ಮ ಅತ್ತಿಗೆ, ನಮ್ಮ ಅಕ್ಕ ಪಕ್ಕಾ ಹಿರೋಯಿನ್ ಮೇಟಿರಿಯಲ್ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಕ್ಯಾಮೆರಾ ಮುಂದೆ ತುಂಬಾ ಚೆನ್ನಾಗಿ ನಟಿಸಿದ್ದೀರಾ, ಜಾಹಿರಾತಿನಲ್ಲಿ ಸ್ನೇಹಾ ಜೊತೆಗೆ ಇನ್ನೊಂದು ಮಗು ನಟಿಸಿದ್ದು, ಆ ಮಗು ಬದಲಿಗೆ ಅಲ್ಲು ಅಯಾನ್ ನಟಿಸಿದ್ದರೇ ಚೆನ್ನಾಗಿರುತ್ತಿತ್ತು ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Most Popular

To Top