Film News

ಯಶ್ ರವರ ಟಾಕ್ಸಿಕ್ ಸಿನೆಮಾದಲ್ಲಿ ಆ ಸ್ಟಾರ್ ನಟಿಯಂತೆ, ಬಹುತೇಕ ಫೈನಲ್ ಎಂಬ ಸುದ್ದಿ ಸಖತ್ ವೈರಲ್…..!

ಕೆಜಿಎಫ್ ಸ್ಟಾರ್‍ ಯಶ್ ರವರ ಟಾಕ್ಸಿಕ್ ಸಿನೆಮಾ ಸದ್ಯ ಭಾರಿ ಸದ್ದು ಮಾಡುತ್ತಿದೆ. ಕೆಜಿಎಫ್ ಸಿನೆಮಾದ ಬಳಿಕ ಯಶ್ ರವರ ಮುಂದಿನ ಸಿನೆಮಾದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿತ್ತು. ಕೆಲವು ದಿನಗಳ ಹಿಂದೆಯಷ್ಟೆ ಯಶ್ ರವರ ಟಾಕ್ಸಿಕ್ ಸಿನೆಮಾ ಘೋಷಣೆ ಆಗಿದೆ. ಕಳೆದ ಡಿಸೆಂಬರ್‍ ಮಾಹೆಯಲ್ಲಿ ಟಾಕ್ಸಿಕ್ ಸಿನೆಮಾದ ಟೈಟಲ್ ಟೀಸರ್‍ ಬಿಡುಗಡೆಯಾಗಿದ್ದು, ಭಾರಿ ನಿರೀಕ್ಷೆ ಮೂಡಿಸಿತ್ತು. ಇದೀಗ ಈಸಿನೆಮಾದಲ್ಲಿ ಯಶ್ ಗೆ ಜೋಡಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಮೂಡಿದ್ದು, ಇದೀಗ ಸೌತ್ ಸಿನಿರಂಗದ ಸ್ಟಾರ್‍ ನಟಿಯೇ ಯಶ್ ಗೆ ಜೋಡಿಯಾಗಲಿದ್ದಾರೆ ಎಂಬ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ.

ಸದ್ಯ ಸೌತ್ ನಲ್ಲಿ ಟಾಕ್ಸಿಕ್ ಸಿನೆಮಾ ಭಾರಿ ಸದ್ದು ಮಾಡುತ್ತಿದೆ. ಈ ಸಿನೆಮಾವನ್ನು ಮಲಯಾಳಂ ಮೂಲದ ನಟಿ ಕಂ ನಿರ್ದೇಶಕಿ ಗೀತು ಮೋಹನ್ ದಾಸ್ ರವರು ನಿರ್ದೇಶಕ ಮಾಡುತ್ತಿದ್ದಾರೆ. ಇದೀಗ ಈ ಸಿನೆಮಾದ ನಾಯಕಿ ಯಾರು ಎಂಬ ವಿಚಾರ ಭಾರಿ ಚರ್ಚೆ ಆಗುತ್ತಿದೆ. ಈ ಹಿಂದೆ ಟಾಕ್ಸಿಕ್ ಸಿನೆಮಾದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ, ಸೀತಾರಾಮಂ ಬ್ಯೂಟಿ ಮೃಣಾಲ್ ಠಾಕೂರ್‍ ಸೇರಿದಂತೆ ಕೆಲವು ನಟಿಯರ ಹೆಸರು ಮುನ್ನೆಲೆಗೆ ಬಂದಿತ್ತು. ಯಶ್ ರಗಡ್ ಲುಕ್ಸ್ ಗೆ ಈ ನಟಿಯರು ಮ್ಯಾಚ್ ಆಗುತ್ತಾರೆ ಎನ್ನಲಾಗಿತ್ತು. ಜೊತೆಗೆ ಮಲಯಾಳಂ ಮೂಲದ ನಟಿ ಸಂಯುಕ್ತಾ ಮೆನನ್ ಸಹ ಯಶ್ ಸಿನೆಮಾದಲ್ಲಿ ನಾಯಕಿಯಾಗಲಿದ್ದಾರೆ ಎಂದು ಸಹ ಹೇಳಲಾಗಿತ್ತು. ಇದೀಗ ಮತ್ತೋರ್ವ ನಟಿಯ ಹೆಸರು ಕೇಳಿಬರುತ್ತಿದೆ.

ಯಶ್ ರವರ ಟಾಕ್ಸಿಕ್ ಸಿನೆಮಾದಲ್ಲಿ ಕಾಲಿವುಡ್ ಸ್ಟಾರ್‍ ನಟಿ ಶ್ರುತಿ ಹಾಸನ್ ಬಣ್ಣ ಹಚ್ಚಲಿದ್ದಾರಂತೆ. ಈಗಾಗಲೇ ಶ್ರುತಿ ಹಾಸನ್ ಗೋಲ್ಡನ್ ಲೆಗ್ ಆಗಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಸಾಲು ಸಾಲು ಹಿಟ್ ಗಳನ್ನು ಪಡೆದುಕೊಂಡಂತಹ ಶ್ರುತಿ ಹಾಸನ್ ಯಶ್ ರವರಿಗೆ ಜೋಡಿಯಾಗಲಿದ್ದಾರೆ ಎಂಬ ಸುದ್ದಿ ಬಲವಾಗಿಯೇ ಕೇಳಿಬರುತ್ತಿದೆ. ಅದರಲ್ಲೂ ಶ್ರುತಿ ಹಾಸನ್ ಸಲಾರ್‍ ಸಿನೆಮಾದ ಮೂಲಕ ಮತಷ್ಟು ಫೇಂ ಪಡೆದುಕೊಂಡ ಹಿನ್ನೆಲೆಯಲ್ಲಿ ಶ್ರುತಿ ಹಾಸನ್ ಟಾಕ್ಸಿಕ್ ಸಿನೆಮಾದ ಹಿರೋಯಿನ್ ಆಗುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ. ಈ ಬಗ್ಗೆ ಶೀಘ್ರ ಅಪ್ಡೇಟ್ ಸಿಗಬಹುದು ಎಂದೂ ಸಹ ಹೇಳಲಾಗುತ್ತಿದೆ.

ಇನ್ನೂ ಕೆಲವು ದಿನಗಳಿಂದ ಯಶ್ ಟಾಕ್ಸಿಕ್ ಸಿನೆಮಾದಲ್ಲಿ ಬಾಲಿವುಡ್ ಹಾಟ್ ಬ್ಯೂಟಿ ಕರಿನಾ ಕಪೂರ್‍ ಸಹ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕರೀನಾ ಹಿರೋಯಿನ್ ಆಗಿ ಕಾಣಿಸಿಕೊಳ್ಳುವುದಿಲ್ಲವಂತೆ ಬದಲಿಗೆ ಆಕೆ ಪವರ್‍ ಪುಲ್ ಲೇಡಿ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ದಿನೇ ದಿನೇ ಯಶ್ ರವರ ಟಾಕ್ಸಿಕ್ ಸಿನೆಮಾ ಅಂತೂ ಭಾರಿ ನಿರೀಕ್ಷೆ ಮೂಡಿಸುತ್ತಿದೆ.

Most Popular

To Top