Film News

ಪವನ್ ಕಲ್ಯಾಣ್ ಮಗಳ ಪಾತ್ರದಲ್ಲಿ ನಟಿಸಲಿದ್ದಾರೆ ಅಲ್ಲು ಅರ್ಹಾ…..!

ಸ್ಟೈಲಿಷ್ ಸ್ಟಾರ್‍ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಈಗಾಗಲೇ ತುಂಬಾನೆ ಖ್ಯಾತಿ ಪಡೆದುಕೊಂಡಿದ್ದಾರೆ. ಜೊತೆಗೆ ಬಣ್ಣದ ಲೋಕಕ್ಕೂ ಸಹ ಎಂಟ್ರಿ ಕೊಟ್ಟಿದ್ದಾರೆ. ಸಮಂತಾ ಅಭಿನಯದ ಪ್ಯಾನ್ ಇಂಡಿಯಾ ಸಿನೆಮಾ ಶಾಕುಂತಲಂ ಸಿನೆಮಾದಲ್ಲಿ ಬಾಲ ನಟಿಯಾಗಿ ನಟಿಸುತ್ತಿದ್ದಾರೆ ಅಲ್ಲು ಅರ್ಹಾ. ಇನ್ನೂ ಈ ಸಿನೆಮಾ ಇದೇ ಫೆಬ್ರವರಿ 17 ರಂದು ಬಿಡುಗಡೆಯಾಗಲಿದೆ. ಇದೀಗ ಅಲ್ಲು ಅರ್ಹಾ ಮತ್ತೊಂದು ಸಿನೆಮಾದಲ್ಲಿ ನಟಿಸಲಿದ್ದಾರೆ. ಅಲ್ಲು ಅರ್ಹಾ ಪವನ್ ಕಲ್ಯಾಣ್ ಅಭಿನಯಿಸಲಿರುವ ಸಿನೆಮಾದಲ್ಲಿ ಪವನ್ ಕಲ್ಯಾಣ್ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಸುದ್ದಿ ಸಖತ್ ವೈರಲ್ ಆಗುತ್ತಿದೆ.

ನಟ ಪವನ್ ಕಲ್ಯಾಣ್ ಹರೀಶ್ ಶಂಕರ್‍ ನಿರ್ದೇಶನದಲ್ಲಿ ಮೂಡಿಬರಲಿರುವ ಉಸ್ತಾದ್ ಭಗತ್ ಸಿಂಗ್ ಸಿನೆಮಾ ಒಂದಾಗಿದೆ. ಈ ಸಿನೆಮಾದಲ್ಲಿ ನಾಯಕಿಯಾಗಿ ಸ್ಟಾರ್‍ ನಟಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ. ಇನ್ನೂ ಇತ್ತಿಚಿಗಷ್ಟೆ ಈ ಸಿನೆಮಾ ಭರ್ಜರಿಯಾಗಿ ಪ್ರಾರಂಭೋತ್ಸವನ್ನು ಸಹ ಮಾಡಿದ್ದರು. ಇನ್ನೂ ರೆಗ್ಯೂಲರ್‍ ಶೂಟಿಂಗ್ ಸಹ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಇನ್ನೂ ಈ ಸಿನೆಮಾ ತಮಿಳಿನ ವಿಜಯ್ ಅಭಿನಯದ ತೆರಿ ಎಂಬ ಸಿನೆಮಾದ ರಿಮೇಕ್ ಆಗಿದೆ. ಇನ್ನೂ ಈ ಸಿನೆಮಾದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಸೆಂಟಿಮೆಂಟ್ ಗಳನ್ನು ಆಧರಿಸಿ ತೆರೆಗೆ ತರಲಿದ್ದಾರೆ ಎನ್ನಲಾಗುತ್ತಿದೆ. ತಮಿಳಿನಲ್ಲಿ ವಿಜಯ್ ಹಾಗೂ ಸಮಂತಾ ಜೋಡಿಯಾಗಿ ನಟಿಸಿದ್ದು, ಸೀನಿಯರ್‍ ನಟಿ ಮೀನಾ ಮಗಳು ಅವರ ಮಗಳಾಗಿ ನಟಿಸಿದ್ದಾರೆ.

ಇದೀಗ ಉಸ್ತಾದ್ ಭಗತ್ ಸಿಂಗ್ ಸಿನೆಮಾದಲ್ಲಿ ಪವನ್ ಕಲ್ಯಾಣ್ ಹಾಗೂ ಪೂಜಾ ಹೆಗ್ಡೆ ರವರ ಪುತ್ರಿಯಾಗಿ ಅಲ್ಲು ಅರ್ಜುನ್ ಪುತ್ರಿ ಅರ್ಹಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿಯಂತೆ ಅಲ್ಲು ಅರ್ಹಾ ಈ ಸಿನೆಮಾದಲ್ಲಿ ನಟಿಸುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಸಂಬಂಧ ಚರ್ಚೆಗಳೂ ಸಹ ನಡೆದಿದ್ದು, ಅಲ್ಲು ಅರ್ಜುನ್ ಸಹ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಅಧಿಕೃತವಾದರೇ ಅಲ್ಲು ಅರ್ಹಾ ಫೇಂ ಮತಷ್ಟು ಏರಲಿದೆ ಎನ್ನಬಹುದಾಗಿದೆ. ಈ ಸಿನೆಮಾದ ಬಳಿಕ ಅರ್ಹಾ ಸ್ಟಾರ್‍ ಇಮೇಜ್ ಸಹ ಗಳಿಸಿಕೊಳ್ಳಬಹುದು ಎನ್ನಲಾಗುತ್ತಿದೆ.

ಇನ್ನೂ ಈ ಸುದ್ದಿಯ ಬಗ್ಗೆ ಇನ್ನೂ ಅಧಿಕೃತವಾದ ಮಾಹಿತಿ ಸಿಕ್ಕಿಲ್ಲ. ಆದರೆ ಸುದ್ದಿ ಮಾತ್ರ ಹಾಟ್ ಟಾಪಿಕ್ ಆಗಿ ವೈರಲ್ ಆಗುತ್ತಿದೆ. ಇನ್ನೂ ಅಲ್ಲು ಅರ್ಹಾ ಪವನ್ ಕಲ್ಯಾಣ್ ರವರಿಗೆ ಮೊಮ್ಮಗಳಾಗುತ್ತಾಳೆ. ಸದ್ಯ ಪವನ್ ಕಲ್ಯಾನ್ ಹರಿ ಹರ ವೀರಮಲ್ಲು ಎಂಬ ಪ್ಯಾನ್ ಇಂಡಿಯಾ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನೆಮಾದ ಮೇಲೆ ಈಗಾಗಲೇ ಭಾರಿ ನಿರೀಕ್ಷೆ ಹುಟ್ಟಿದೆ. ಸಿನೆಮಾದ ಪೋಸ್ಟರ್‍, ಫಸ್ಟ್ ಗ್ಲಿಂಪ್ಸ್ ಸಖತ್ ಸದ್ದು ಮಾಡಿತ್ತು.

Most Popular

To Top