ತೆಲುಗು ಸೀನಿಯರ್ ಸ್ಟಾರ್ ನಟನ ಸಿನೆಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ ಕೆಜಿಎಫ್ ಬ್ಯೂಟಿ ಶ್ರೀನಿಧಿ ಶೆಟ್ಟಿ…!

Follow Us :

ಕೆಜಿಎಫ್ ಸಿನೆಮಾದ ಮೂಲಕ ಸಿನಿಲೋಕಕ್ಕೆ ಎಂಟ್ರಿಕೊಟ್ಟ ನಟಿ ಶ್ರೀನಿಧಿ ಕೆಜಿಎಫ್ ಸಿನೆಮಾ ಬಳಿಕ ಶ್ರೀನಿಧಿ ಸಹ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿಕೊಂಡಿದ್ದಾರೆ. ಈಕೆಗೆ ಮೊದಲ ಸಿನೆಮಾ ಮೂಲಕವೇ ಹೆಚ್ಚು ಸಕ್ಸಸ್ ಆದ ನಟಿ ಎಂಬ ಹೆಗ್ಗಳಿಕೆಗೆ ಸಹ ಪಾತ್ರರಾಗಿದ್ದಾರೆ. ಕೆಜಿಎಫ್ ಸಿನೆಮಾದಲ್ಲಿ ಆಕೆಯ ಪಾತ್ರ ಕಡಿಮೆಯಿದ್ದರೂ ಸಹ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡರು. ಆಕೆಗೆ ಸಿಕ್ಕ ದೃಶ್ಯಗಳ ಮೂಲಕವೇ ಅಭಿಮಾನಿಗಳನ್ನು ಆಕರ್ಷಣೆ ಮಾಡುವತ್ತ ಪರಿಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಇದೀಗ ಆಕೆ ತೆಲುಗಿನಲ್ಲಿ ಸ್ಟಾರ್‍ ನಟನ ಸಿನೆಮಾದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಸ್ಯಾಂಡಲ್ ವುಡ್ ಯಂಗ್ ಬ್ಯೂಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕ್ರೇಜ್ ಪಡೆದುಕೊಂಡರು. ಇದೀಗ ಆಕೆ ತೆಲುಗಿನ ಸ್ಟಾರ್‍ ನಟನ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಆತ ಬೇರೆ ಯಾರೂ ಅಲ್ಲ ವಿಕ್ಟರಿ ವೆಂಕಟೇಶ್. ಹೌದು ವಿಕ್ಟರಿ ವೆಂಕಟೇಶ್ ಅಭಿನಯಿಸಲಿರುವ ಸೈಂದವ್ ಎಂಬ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ಶ್ರೀನಿಧಿ ನಟಿಸಲಿದ್ದಾರಂತೆ. ಸದ್ಯ ಈ ಸುದ್ದಿ ತೆಲುಗು ಸಿನಿವಲಯದಲ್ಲಿ ಜೋರಾಗಿಯೇ ಹರಿದಾಡುತ್ತಿದೆ. ಇನ್ನೂ ಈ ಸುದ್ದಿ ನಿಜವೇ ಆದರೆ ಶ್ರೀನಿಧಿಗೆ ಒಳ್ಳೆಯ ಚಾನ್ಸ್ ದೊರಕಿದೆ ಎಂದು ಹೇಳಬಹುದಾಗಿದೆ. ನಟಿ ಶ್ರೀನಿಧಿ ಕೇವಲ ಮೂರು ಸಿನೆಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಕೆಜಿಎಫ್, ಕೆಜಿಎಫ್-2 ಹಾಗೂ ತಮಿಳಿನ ಕೋಬ್ರಾ ಸಿನೆಮಾದಲ್ಲಿ ಮಾತ್ರ ನಟಿಸಿದ್ದರು.

ಶ್ರೀನಿಧಿಗೆ ಕೆಜಿಎಫ್ ಸೀರಿಸ್ ಒಳ್ಳೆಯ ಸಕ್ಸಸ್ ತಂದು ಕೊಟ್ಟಿದೆ. ಆದರೆ ತಮಿಳು ಸ್ಟಾರ್‍ ನಟ ವಿಕ್ರಮ್ ಚಿಯಾನ್ ಜೊತೆಗೆ ಕೋಬ್ರಾ ಸಿನೆಮಾದಲ್ಲಿ ನಟಿಸಿದ್ದು ಈ ಸಿನೆಮಾ ಆಕೆಗೆ ಅಷ್ಟೊಂದು ಸಕ್ಸಸ್ ತಂದುಕೊಟ್ಟಿಲ್ಲ ಎನ್ನಬಹುದಾಗಿದೆ. ಬಳಿಕ ಆಕೆಗೆ ಯಾವುದೇ ಆಫರ್‍ ಗಳು ಸಹ ಬರಲಿಲ್ಲ. ಇದೀಗ ಆಕೆಗೆ ವಿಕ್ಟರಿ ವೆಂಕಟೇಶ್ ರವರ ಸೈಂಧವ್ ಎಂಬ ಸಿನೆಮಾ ಇತ್ತೀಚಿಗಷ್ಟೆ ಘೋಷಣೆ ಆಗಿದೆ. ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಈ ಸಿನೆಮಾದಲ್ಲಿ ಶ್ರೀನಿಧಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ ಈ ಸುದ್ದಿ ಇದೀಗ ತೆಲುಗು ಸಿನಿವಲಯದಲ್ಲಿ ಹರಿದಾಡುತ್ತಿದೆ.

ಇನ್ನೂ ನಟ ವೆಂಕಟೇಶ್ ಹಾಗೂ ನಿರ್ದೇಶಕ ಶೈಲೇಷ್ ಕಾಂಬಿನೇಷನ್ ನಲ್ಲಿ ಸೈಂಧವ್ ಎಂಬ ಪ್ಯಾನ್ ಇಂಡಿಯಾ ಸಿನೆಮಾ ಸೆಟ್ಟೇರಲಿದೆ. ಈ ಸಿನೆಮಾ ವೆಂಕಟೇಶ್ ಕೆರಿಯರ್‍ ನ ಮೊದಲ ಪ್ಯಾನ್ ಇಂಡಿಯಾ ಸಿನೆಮಾ ಆಗಲಿದೆ. ಈ ಹಾದಿಯಲ್ಲೇ ಪ್ಯಾನ್ ಇಂಡಿಯಾ ಫೇಂ ನ ನಟಿ ಶ್ರೀನಿಧಿ ಯನ್ನು ಆಯ್ಕೆ ಮಾಡಿದ್ದಾಗಿ ಸುದ್ದಿ ಕೇಳಿಬರುತ್ತಿದೆ. ಸುಮಾರು ದಿನಗಳ ಬಳಿಕ ವೆಂಕಟೇಶ್ ಅಭಿನಯಿಸಲಿರುವ ಆಕ್ಷನ್ ಸಿನೆಮಾ ಇದಾಗಿದೆ.