Film News

ವಿಚ್ಚೇದನದ ಬಗ್ಗೆ ಕ್ಲಾರಿಟಿ ಕೊಟ್ರಾ ಚೈತು? ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನಕ್ಕೆ ಫ್ಯಾಮಿಲಿ ಮ್ಯಾನ್-2 ಸಿರೀಸ್ ಕಾರಣವಾಯ್ತಾ?

ತೆಲುಗು ಸಿನಿರಂಗದಲ್ಲಿ ವಿಚ್ಚೇದನ ಪಡೆದುಕೊಂಡ ಸ್ಟಾರ್‍ ಜೋಡಿಯಲ್ಲಿ ಸಮಂತಾ ಹಾಗೂ ನಾಗಚೈತನ್ಯ ಜೋಡಿ ಸಹ ಒಂದಾಗಿದೆ. ವಿಚ್ಚೇದನ ಪಡೆದುಕೊಂಡು ತಿಂಗಳುಗಳು ಕಳೆದರೂ ಸಹ ಈ ಜೋಡಿ ವಿಚ್ಚೇದನ ಪಡೆದುಕೊಳ್ಳಲು ನಿಖರ ಕಾರಣ ಮಾತ್ರ ಹೊರಬಂದಿಲ್ಲ. ಇದೀಗ ನಾಗಚೈತನ್ಯ ಅಭಿನಯದ ಕಸ್ಟಡಿ ಸಿನೆಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ಅನೇಕ ವೈಯುಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಕೆಲವೊಂದು ಕಾಮೆಂಟ್ಸ್ ಮಾಡಿದ್ದು, ಅವು ವೈರಲ್ ಆಗುತ್ತಿವೆ.

ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನ ಪಡೆದುಕೊಂಡಾಗಿನಿಂದ ಅವರಿಬ್ಬರ ವಿಚ್ಚೇದನದ ಬಗ್ಗೆ ಅನೇಕ ಕಾಮೆಂಟ್ ಗಳು ಕೇಳಿಬರುತ್ತಲೇ ಇದೆ. ಆದರೆ ಅವುಗಳ ಬಗ್ಗೆ ಸಮಂತಾ ಆಗಲಿ ಅಥವಾ ಚೈತನ್ಯ ಆಗಲಿ ರಿಯಾಕ್ಟ್ ಆಗುತ್ತಿಲ್ಲ. ಆದರೆ ಎಲ್ಲಾದರೂ ಈ ಬಗ್ಗೆ ಪ್ರಶ್ನೆಗಳು ಎದುರಾದಾಗ ಮಾತ್ರ ನೇರವಾದ ಹೇಳಕೆಗಳನ್ನು ನೀಡದೇ ಪರೋಕ್ಷ ಉತ್ತರಗಳನ್ನು ನೀಡುತ್ತಿರುತ್ತಾರೆ. ಇನ್ನೂ ಸಮಂತಾ ಸಹ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೋಸ್ಟ್ ಗಳ ಮೂಲಕ ವಿಚ್ಚೇದನಕ್ಕೆ ಕಾರಣಗಳ ಬಗ್ಗೆ ಹಿಂಟ್ ನೀಡುತ್ತಿರುತ್ತಾರೆ. ಇದೀಗ ನಾಗಚೈತನ್ಯ ಕಸ್ಟಡಿ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಜೋರಾಗಿಯೇ ನಡೆಯುತ್ತಿವೆ. ಪ್ರಮೋಷನ್ ನಿಮಿತ್ತ ನಾಗಚೈತನ್ಯ ಕೆಲವೊಂದು ಸಂದರ್ಶನಗಳಲ್ಲಿ ಸಹ ಭಾಗಿಯಾಗುತ್ತಿದ್ದು, ಈ ವೇಳೆ ತನ್ನ ವೈಯುಕ್ತಿಕ ಜೀವನದ ಬಗ್ಗೆ ಮತಷ್ಟು ಓಪೆನ್ ಆಗುತ್ತಿದ್ದಾರೆ.

ಇನ್ನೂ ಕಸ್ಟಡಿ ಸಿನೆಮಾದ ಪ್ರಮೋಷನ್ ನಿಮಿತ್ತ ನಡೆದ ಸಂದರ್ಶನವೊಂದರಲ್ಲಿ ಸಮಂತಾ ಸಿನೆಮಾಗಳ ಬಗ್ಗೆ ಚೈತನ್ಯ ಇಂಟ್ರಸ್ಟಿಂಗ್ ಹೇಳಿಕೆಗಳನ್ನು ನೀಡಿದ್ದಾರೆ. ಸಮಂತಾ ಏನಾದರೂ ಅಂದುಕೊಂಡರೇ ಅದನ್ನು ಖಚಿತವಾಗಿ ಮಾಡಿಯೇ ತೀರುತ್ತಾಳೆ. ಆಕೆ ನಟಿಸಿದ ಓ ಬೇಬಿ, ಫ್ಯಾಮಿಲಿ ಮ್ಯಾನ್-2 ಸಿನೆಮಾಗಳು ಎಂದರೇ ನನಗೆ ತುಂಬಾ ಇಷ್ಟ. ಇತ್ತೀಚಿಗೆ ಯಶೋಧ ಸಿನೆಮಾ ಸಹ ನೋಡಿದ್ದೇನೆ. ಸಮಂತಾ ನಟಿಸುವಂತಹ ಎಲ್ಲಾ ಸಿನೆಮಾಗಳನ್ನು ನಾನು ನೋಡುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನ ಪಡೆದುಕೊಳ್ಳಲು ಫ್ಯಾಮಿಲಿಮ್ಯಾನ್-2 ಸಿರೀಸ್ ಕಾರಣ ಎಂದು ಹೇಳಲಾಗುತ್ತಿತ್ತು. ಆದರೆ ನಾಗಚೈತನ್ಯ ಇದೀಗ ನೀಡಿದ ಹೇಳಿಕೆಗಳಿಂದ ಅವರ ವಿಚ್ಚೇದನಕ್ಕೆ ಫ್ಯಾಮಿಲಿಮ್ಯಾನ್-2 ಸಿರೀಸ್ ಕಾರಣ ಅಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಇನ್ನೂ ಸಮಂತಾ ಹಾಗೂ ನಾಗಚೈತನ್ಯ 2017 ರಲ್ಲಿ ಮದುವೆಯಾಗಿ 2021 ರಲ್ಲಿ ವಿಚ್ಚೇದನ ಪಡೆದುಕೊಂಡರು. ಈ ಜೋಡಿ ವಿಚ್ಚೇದನ ಪಡೆದುಕೊಳ್ಳಲು ಅದೇ ಕಾರಣ ಇದೇ ಕಾರಣ ಎಂಬೆಲ್ಲಾ ರೂಮರ್‍ ಗಳು ತುಂಬಾನೆ ಕೇಳಿಬಂದವು.  ಆದರೆ ಅವರ ವಿಚ್ಚೇದನಕ್ಕೆ ನಿಖರ ಕಾರಣ ಮಾತ್ರ ಅವರಿಬ್ಬರಿಗೆ ಗೊತ್ತಿದೆ. ಇನ್ನೂ ಕಸ್ಟಡಿ ಸಿನೆಮಾದ ಮೇಲೆ ನಾಗಚೈತನ್ಯ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.

Most Popular

To Top