Film News

ಕ್ಲೈಮ್ಯಾಕ್ಸ್ ಹಂತಕ್ಕೆ ಬಂದ ಧನುಷ್-ಐಶ್ವರ್ಯ ವಿಚ್ಚೇದನ, ಮಕ್ಕಳು ನನಗೆ ಬೇಕು ಎಂದ ಐಶ್ವರ್ಯ….!

ಸೌತ್ ಸಿನಿರಂಗದ ಖ್ಯಾತ ನಟ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಪುತ್ರಿ ಐಶ್ವರ್ಯ ಹಾಗೂ ಸ್ಟಾರ್‍ ನಟ ಧನುಷ್ ರವರು ಮದುವೆಯಾಗಿ ಸುಮಾರು 18 ವರ್ಷಗಳ ಕಾಲ ಅನ್ಯೋನ್ಯತೆಯಿಂದ ಜೀವನ ಸಾಗಿಸಿದ್ದರು. ಅಷ್ಟು ವರ್ಷಗಳ ಕಾಲ ಅನ್ಯೋನ್ಯತೆಯಿಂದ ಜೀವನ ಸಾಗಿಸಿದ್ದ ಈ ಜೋಡಿ ಸಡನ್ ಆಗಿ ಅಭಿಮಾನಿಗಳಿಗೆ ವಿಚ್ಚೇದನ ಪಡೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಇದೀಗ ಅವರ ವಿಚ್ಚೇದನ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ಈ ನಡುವೆ ಐಶ್ವರ್ಯ ಮಕ್ಕಳು ನನಗೆ ಬೇಕು ಎಂದು ಧನುಷ್ ಗೆ ಶಾಕ್ ಕೊಟ್ಟಿದ್ದಾರೆ ಎನ್ನಲಾಗಿದೆ.

ಕೆಲವು ತಿಂಗಳುಗಳ ಹಿಂದೆ ಧನುಷ್ ಹಾಗೂ ಐಶ್ವರ್ಯ ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂಬ ಶಾಕಿಂಗ್ ಸುದ್ದಿಯೊಂದು ಹೊರಬಂತು. ಇದಾದ ಬಳಿಕ ಕಳೆದ ವರ್ಷದ ಅಕ್ಟೋಬರ್‍ ಮಾಹೆಯಲ್ಲಿ ಅವರಿಬ್ಬರೂ ತಮ್ಮ ವಿಚ್ಚೇದನದ ನಿರ್ಧಾರದಿಂದ ಹೊರಬಂದಿದ್ದಾರೆ. ರಜನಿಕಾಂತ್ ಅಳಿಯ ಹಾಗೂ ಮಗಳ ನಡುವೆ ರಾಜಿ ಸಂದಾನ ಮಾಡಿದ್ದು, ಅವರು ವಿಚ್ಚೇದನದ ನಿರ್ಧಾರದಿಂದ ಹೊರಬಂದಿದ್ದಾರೆ. ಶೀಘ್ರದಲ್ಲೇ ಒಂದಾಗಿ ಬಾಳಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬಂದವು. ಇದೀಗ ಅವರು ವಿಚ್ಚೇದನ ಪಡೆದುಕೊಳ್ಳುವುದು ಬಹುತೇಕ ಫಿಕ್ಸ್ ಎಂದೇ ಹೇಳಲಾಗುತ್ತಿದೆ. ಎಲ್ಲಾ ಪ್ರಕ್ರಿಯೆಗಳು ಮುಗಿಯುತ್ತಿದ್ದು, ಶೀಘ್ರದಲ್ಲೇ ಈ ಜೋಡಿ ಅಧಿಕೃತವಾಗಿ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಸುಮಾರು 18 ವರ್ಷಗಳ ದಾಂಪತ್ಯಕ್ಕೆ ಐಶ್ವರ್ಯ ರಜನಿಕಾಂತ್ ಹಾಗೂ ನಟ ಧನುಷ್ ಅಂತ್ಯ ಹಾಡಲಿದ್ದಾರೆ. ಅವರು ವಿಚ್ಚೇದನ ಪಡೆದುಕೊಳ್ಳುವ ಬಗ್ಗೆ ಘೋಷಣೆ ಮಾಡಿದ ಬಳಿಕ ಅವರವರ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಐಶ್ವರ್ಯ ತಮ್ಮ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.  ಮಕ್ಕಳ ಪೋಷಣೆಯ ಜವಾಬ್ದಾರಿಯನ್ನು ನನಗೆ ನೀಡಬೇಕೆಂದು ಒತ್ತಾಯ ಮಾಡಿದ್ದಾರಂತೆ. ಇದಕ್ಕೆ ಧನುಷ್ ಸಹ ಯಾವುದೇ ಅಭ್ಯಂತರ ಹೇಳಿಲ್ಲವಂತೆ. ಸದ್ಯ ತಮಿಳು ಸಿನಿರಂಗದಲ್ಲಿ ಧನುಷ್ ಹಾಗೂ ಐಶ್ವರ್ಯ ವಿಚ್ಚೇದನದ ಶುದ್ದಿ ಭಾರಿ ಸದ್ದು ಮಾಡುತ್ತಿದೆ. ಇನ್ನೂ ಧನುಷ್ ಹಾಗೂ ಐಶ್ವರ್ಯ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಮೊದಲ ಮಗ ಯಾತ್ರ ಗೆ 18 ವರ್ಷ ಹಾಗೂ ಲಿಂಗ ಗೆ 14 ವರ್ಷ ವಯಸ್ಸು. ಧನುಷ್ ಹಾಗೂ ಐಶ್ವರ್ಯ ಪ್ರೀತಿಸಿ ಮದುವೆಯಾಗಿದ್ದಾರೆ. ಇದೀಗ ಅವರು ವಿಚ್ಚೇದನ ಪಡೆದುಕೊಳ್ಳಲು ನಿಖರ ಕಾರಣ ಏನು ಎಂಬುದು ಮಾತ್ರ ತಿಳಿದುಬಂದಿಲ್ಲ.

Most Popular

To Top