News

ಪ್ರಿಯಕರನನ್ನು ವರಿಸಲು ತನ್ನ ಇಬ್ಬರು ಮಕ್ಕಳನ್ನು ಹೊಡೆದು ಕೊಂಡ ಪಾಪಿ ತಾಯಿ….!

ನಾಗರೀಕ ಸಮಾಜದಲ್ಲಿ ಅಕ್ರಮ ಸಂಬಂಧಗಳ ಹಿನ್ನೆಲೆಯಲ್ಲಿ ಗಲಾಟೆಗಳು, ಕೊಲೆಗಳು ನಡೆಯುತ್ತಿರುತ್ತವೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಕ್ರೂರಿ ತಾಯಿಯೊಬ್ಬಳು ತನ್ನ ಪ್ರಿಯಕರನ್ನು ಮದುವೆಯಾಗಲು ಹೆತ್ತ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಕರುಣಾಜನಕ ಘಟನೆಯೊಂದು ನಡೆದಿದೆ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಮಹಾರಾಷ್ಟ್ರದ ರಾಯಘಡ ಜಿಲ್ಲೆಯಲ್ಲಿ ಈ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ. ಆರೋಪಿ ಮಹಿಳೆ ತನ್ನ 5 ವರ್ಷ ಬಾಲಕಿ ಹಾಗೂ 3 ವರ್ಷದ ಬಾಲಕನನ್ನು ಕೊಲೆ ಮಾಡಿದ್ದಾರೆ. ಮುಗ್ದ ಮಕ್ಕಳನ್ನು ಹೆತ್ತ ಕರುಣೆ ಇಲ್ಲದೇ ಕೊಲೆ ಮಾಡಿದ ಪಾಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ತನ್ನ ಪ್ರಿಯಕರನ್ನು ಮದುವೆಯಾಗಲು ಮಕ್ಕಳು ಅಡ್ಡಿಯಾಗಿದ್ದಾರೆ ಎಂದು ಕೊಲೆ ಮಾಡಿದ್ದಾಗಿ ಆರೋಪಿ ಮಹಿಳೆ ಒಲೀಸರ ವಿಚಾರಣೆಯ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ. ಕಳೆದ ತಿಂಗಳು 5 ವರ್ಷದ ಬಾಲಕಿ ಹಾಗೂ 3 ವರ್ಷದ ಬಾಲಕನ ಅನುಮಾನಾಸ್ಪದ ಸಾವಿನ ತನಿಖೆಯನ್ನು ಸ್ಥಳೀಯ ಅಪರಾಧ ವಿಭಾಗವು ಕೈಗೆತ್ತಿಕೊಂಡಿತ್ತು. ಕಳೆದ ಮಾರ್ಚ್31 ರಂದು ರಾಯಘಡ ವ್ಯಾಪ್ತಿಯ ಕಿಹಿಮ್ ಎಂಬ ಗ್ರಾಮದಲ್ಲಿ ಮಕ್ಕಳಿಬ್ಬರು ಪ್ರಜ್ಞಾಹೀನ ಸ್ಥೀತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಅಲಿಭಾಗ್ ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು, ಬಳಿಕ ಮಕ್ಕಳು ಮೃತಪಟ್ಟಿರುವುದಾಗಿ ತಿಳಿದುಬಂದಿತ್ತು.

ಇನ್ನೂ ಮೃತಪಟ್ಟ ಮಕ್ಕಳಿಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮುಂಬೈನ ಜೆಜೆ ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ವೇಳೆ ಮಕ್ಕಳನ್ನು ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಬಳಿಕ ಮಕ್ಕಳ ಕೊಲೆಯ ಹಿಂದೆ ಆರೋಪಿಯ ತಾಯಿ ಶೀತಲ್ ಪೋಲ್ ಪಾತ್ರವಿದೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿತ್ತು. ಆರೋಪಿ ಶೀತಲ್ ಮದುವೆಗೂ ಮುಂಚೆ ಬೇರೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ಕಾರಣದಿಂದ ಶೀತಲ್ ತನ್ನ ಪತಿಯೊಂದಿಗೆ ಜಗಳ ಸಹ ಆಗುತ್ತಿದ್ದಳಂತೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಐಪಿಸಿ ಸೆಕ್ಷನ್ 302ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Most Popular

To Top