ಆಂಧ್ರದ ಚುನಾವಣೆ ಸಮಯದಲ್ಲಿ ರೇಣು ದೇಸಾಯಿ ಕೈ ಮೇಲೆ ಅಂತಹ ಟ್ಯಾಟೂ, ಪರೋಕ್ಷವಾಗಿ ಪವನ್ ಕಲ್ಯಾಣ್ ಗೆ ಬೆಂಬಲವೇ?

Follow Us :

ನಟಿ ರೇಣು ದೇಸಾಯಿ ಇತ್ತೀಚಿಗೆ ತೆರೆಕಂಡ ಟೈಗರ್‍ ನಾಗೇಶ್ವರ್‍ ರಾವ್ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ಆಕೆ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿದ್ದಾರೆ. ಸದಾ ಒಂದಲ್ಲ ಒಂದು ಪೋಸ್ಟ್ ಗಳ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ. ಇತ್ತೀಚಿಗೆ ಆಕೆ ಅಕಿರಾ ಹುಟ್ಟುಹಬ್ಬದ ನಿಮಿತ್ತ ಮಾಡಿದ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಮತ್ತೊಂದು ಪೋಸ್ಟ್ ಹಾಕಿದ್ದು, ಅದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ತೆಲುಗು ನಟ ಪವನ್ ಕಲ್ಯಾಣ್ ರವರ ಮಾಜಿ ಪತ್ನಿ ರೇಣು ದೇಸಾಯಿ ವಿಚ್ಚೇದನ ಪಡೆದುಕೊಂಡು ವರ್ಷಗಳೇ ಕಳೆದಿದೆ. ವಿಚ್ಚೇದನ ಬಳಿಕ ರೇಣು ತನ್ನ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ವಿಚ್ಚೇದನದ ಬಳಿಕ ಅನೇಕ ಬಾರಿ ರೇಣು ಪವನ್ ಕಲ್ಯಾಣ್ ರವರ ಬಗ್ಗೆ ಅನೇಕ ವಿಮರ್ಶೆಗಳನ್ನು ಮಾಡಿದರು. ಸೋಷಿಯಲ್ ಮಿಡಿಯಾದ ಮೂಲಕ ಆಕೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ಇತ್ತಿಚಿಗೆ ಪವನ್ ರೇಣು ವಿಚ್ಚೇದನದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಸಹ ನಡೆಯುತ್ತಿರುತ್ತದೆ. ಆಕೆಯ ವಿರುದ್ದ ಎದುರಾದಂತಹ ಟ್ರೋಲರ್‍ ಗಳಿಗೆ ಸರಿಯಾದ ರೀತಿಯಲ್ಲೆ ಕೌಂಟರ್‍ ಕೊಡುತ್ತಿರುತ್ತಾರೆ. ಅದರಲ್ಲೂ ಆಕೆ ಹಂಚಿಕೊಳ್ಳುವ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತದೆ. ಇದೀಗ ಆಕೆ ಹಂಚಿಕೊಂಡ ಪೋಸ್ಟ್ ಒಂದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ನಟಿ ರೇಣು ದೇಸಾಯಿ ತನ್ನ ಕೈಗೆ ಹಾಕಿಕೊಂಡ ಟ್ಯಾಟೂ ತೋರಿಸುತ್ತಾ ಪೋಸ್ಟ್ ಒಂದನ್ನು ಮಾಡಿದ್ದರು. ಆಕೆಯ ಕೈ ಮೇಲೆ ಮೌನಂ ಪರಂ ಶಿಲಂ ಎಂದು ತೆಲುಗಿನಲ್ಲಿ ಕೊಟೇಷನ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಜೊತೆಗೆ ಕಮಲದ ಹೂ ಸಹ ಟ್ಯಾಟೂ ಆಗಿ ಹಾಕಿಸಿಕೊಂಡಿದ್ದಾರೆ. ಈ ಪೋಸ್ಟ್ ಗೆ ರೇಣು ದೇಸಾಯಿ ಕೆಲವೊಮ್ಮೆ ಮಾತುಗಳಿಗಿಂತ ಇಂತಹ ಪೊಟೋಗಳೇ ಜೋರಾಗಿ ಕೇಳಿಸುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಈ ಪೋಸ್ಟ್ ಗೆ #election2024 ಎಂಬ ಹ್ಯಾಷ್ ಟ್ಯಾಗ್ ಸಹ ಜೋಡಿಸಿದ್ದಾರೆ. ಇದರಿಂದ ರೇಣು ದೇಸಾಯಿ ಪರೋಕ್ಷವಾಗಿ ಚುನಾವನೆಯಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಅಭಿಪ್ರಾಯಗಳು ಕೇಳಿಬರುತ್ತಿವೆ. ಜನಸೇನಾ, ಟಿಡಿಪಿ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜನಸೇನಾ ಪಕ್ಷಕ್ಕೂ ಆಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಅಭಿಪ್ರಾಯಗಳು ಕೇಳಿಬರುತ್ತಿವೆ. ಈ ಹಿಂದೆ ಸಹ ರೇಣು ದೇಸಾಯಿ ಪವನ್ ಕಲ್ಯಾಣ್ ಪ್ರಜೆಗಳ ಪರ, ಅವರು ಸಿಎಂ ಆಗಬೇಕು ಎಂದೂ ಸಹ ಹೇಳಿದ್ದರು.