ಜಪಾನ್ ನಲ್ಲೂ ತಗ್ಗೇದೇ ಲೇ ಎಂದ ಸಾಯಿ ಪಲ್ಲವಿ, ಮಾಸ್ ಡ್ಯಾನ್ಸ್ ಮೂಲಕ ಎಲ್ಲರನ್ನೂ ಶಾಕ್ ಮಾಡಿದ ನ್ಯಾಚುರಲ್ ನಟಿ…..!

Follow Us :

ಸೌತ್ ಸಿನಿರಂಗದ ಲೇಡಿ ಸೂಪರ್‍ ಸ್ಟಾರ್‍ ಎಂದೇ ಕರೆಯಲಾಗುವ ಸಾಯಿ ಪಲ್ಲವಿ ಅಭಿನಯದ ಜೊತೆಗೆ ಮೈಂಡ್ ಬ್ಲಾಕ್ ಆಗುವಂತಹ ಡ್ಯಾನ್ಸ್ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಸೌತ್ ಸಿನಿರಂಗದಲ್ಲಿ ಬಹುಬೇಡಿಕೆಯುಳ್ಳ ನಟಿಯಾಗಿದ್ದ ಸಾಯಿಪಲ್ಲವಿ ಬಾಲಿವುಡ್ ಗೂ ಎಂಟ್ರಿ ಕೊಡಲಿದ್ದಾರೆ. ಏಕ್ ದಿನ್ ಎಂಬ ಸಿನೆಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ.  ಈ ಸಿನೆಮಾದಲ್ಲಿ ನಾಯಕನಾಗಿ ಅಮೀರ್‍ ಖಾನ್ ಮಗ ಜುನೈದ್ ಖಾನ್ ಹಿರೋ ಆಗಿ ನಟಿಸುತ್ತಿದ್ದಾರೆ. ಈ ಸಿನೆಮಾ ಅಮೀರ್‍ ಖಾನ್ ರವರ ಸ್ವಂತ ಬ್ಯಾನರ್‍ ನಡಿ ನಿರ್ಮಾಣವಾಗುತ್ತಿದೆ.

ಬಾಲಿವುಡ್ ಸ್ಟಾರ್‍ ನಟಿ ಅಮೀರ್‍ ಖಾನ್ ರವರ ಪುತ್ರ ಏಕ್ ದಿನ್ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ. ಇದೇ ಸಿನೆಮಾದ ಮೂಲಕ ಸಾಯಿ ಪಲ್ಲವಿ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಸುಮಾರು ದಿನಗಳಿಂದ ಈ ಸಿನೆಮಾ ಜಪಾನ್ ನಲ್ಲಿ ಶೂಟಿಂಗ್ ನಡೆಸುತ್ತಿದೆ. ಇದೀಗ ಜಪಾನ್ ನಲ್ಲಿನ ಶೆಡ್ಯೂಲ್ಡ್ ಪೂರ್ಣಗೊಳಿಸಿದ್ದು, ಈ ಟೀಂ ಇದನ್ನು ಸಂಭ್ರಮಿಸಿದ್ದಾರೆ. ಈ ವೇಳೆ ನಟಿ ಸಾಯಿಪಲ್ಲವಿ ಎನೆರ್ಜಿಟಿಕ್ ಹಾಗೂ ಮಾಸ್ ಆಗಿ ನೃತ್ಯ ಮಾಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಸಾಯಿ ಪಲ್ಲವಿ ಎನರ್ಜಿ ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ ಎನ್ನಲಾಗುತ್ತಿದೆ.

ನಟಿ ಸಾಯಿಪಲ್ಲವಿ ಶಾರುಖ್ ಖಾನ್ ರವರ ಚೆಯ್ಯ ಚೆಯ್ಯ ಎಂಬ ಹಾಡಿಗೆ ಮಾಸ್ ಸ್ಟೆಪ್ಸ್ ಹಾಕಿದ್ದಾರೆ. ಇಡೀ ಟೀಂ ನಲ್ಲಿ ಸಾಯಿ ಪಲ್ಲವಿ ಒಬ್ಬರೇ ಮಹಿಳೆ ಇದಿದ್ದು, ಆದರೂ ಸಹ ಆಕೆ ಮಾಸ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಅನ್ನು ಟೀಂ ನಲ್ಲಿರುವ ಒಬ್ಬರು ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಸೇರಿದಂತೆ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಸಾಯಿ ಪಲ್ಲವಿ ಸೆಲೆಕ್ಟೀವ್ ಸಿನೆಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ. ಕಟೆಂಟ್ ಚೆನ್ನಾಗಿರುವಂತಹ ಸಿನೆಮಾಗಳನ್ನು ಅದರಲ್ಲೂ ಆಕೆಯ ಪಾತ್ರಕ್ಕೆ ಪ್ರಾಮುಖ್ಯತೆ ಇರುವಂತಹ ಸಿನೆಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ. ಸದ್ಯ ಆಕೆ ಅಕ್ಕಿನೇನಿ ನಾಗಚೈತನ್ಯ ಜೊತೆಗೆ ತಂಡೆಲ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಲವ್ ಸ್ಟೋರಿ ಎಂಬ ಸಿನೆಮಾದ ಬಳಿಕ ಈ ಜೋಡಿಯ ಎರಡನೇ ಸಿನೆಮಾ ಇದಾಗಿದೆ.