Film News

ಪುಷ್ಪಾ-2 ಸಿನೆಮಾದ ಮತ್ತೊಂದು ರೂಮರ್, ಪುಷ್ಪಾ-2 ನಲ್ಲಿ ಪವನ್ ಕಲ್ಯಾಣ್, ರೇಕಾರ್ಡ್ ಗಳು ಬ್ರೇಕ್ ಆಗೋದು ಪಕ್ಕಾ?

ದೇಶದ ಸಿನಿರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವಂತಹ ಪುಷ್ಪಾ-2 ಸಿನೆಮಗಾಗಿ ಕೋಟ್ಯಂತರ ಸಿನೆಮಾ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಸ್ಟಾರ್‍ ಡೈರೆಕ್ಟರ್‍ ಸುಕುಮಾರ್‍ ಹಾಗೂ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್  ಕಾಂಬಿನೇಷನ್ ನಲ್ಲಿ ಸೆಟ್ಟಿರಿದ ಪುಷ್ಪಾ ಸಿನೆಮಾ ನಿರೀಕ್ಷೆಗೂ ಮೀರಿ ಸಕ್ಸಸ್ ಕಂಡುಕೊಂಡಿತ್ತು. ಇದೀಗ ಪುಷ್ಪಾ-2 ಮತಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ. ಪುಷ್ಪಾ-2 ಸಿನೆಮಾದ ಶೂಟಿಂಗ್ ಆರಂಭವಾದಾಗಿನಿಂದ ಅನೇಕ ರೂಮರ್‍ ಗಳು, ಸುದ್ದಿಗಳು ಕೇಳಿಬಂದವು. ಇದೀಗ ಮತ್ತೊಂದು ಸುದ್ದಿ ಕೇಳಿಬರುತ್ತಿದ್ದು, ಅದು ನಿಜವಾದರೇ ರೆಕಾರ್ಡ್ ಬ್ರೇಕ್ ಆಗೋದು ಪಕ್ಕಾ ಎಂದು ಹೇಳಲಾಗುತ್ತಿದೆ.

ಪುಷ್ಪಾ-2 ಸಿನೆಮಾದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೋಡಕ್ಷನ್ ಕೆಲಸಗಳೂ ಸಹ ಶೀಘ್ರದಲ್ಲೇ ಶುರುವಾಗಲಿದೆ. ಈ ಸಿನೆಮಾ ಇದೇ ಆ.15 ರಂದು ತೆರೆಗೆ ತರಲು ಚಿತ್ರತಂಡ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಕಳೆದ ಏ.8 ರಂದು ಅಲ್ಲು ಅರ್ಜುನ್ ರವರ ಹುಟ್ಟುಹಬ್ಬದ ನಿಮಿತ್ತ ಸಿನೆಮಾದ ಟೀಸರ್‍ ಸಹ ಬಿಡುಗಡೆ ಮಾಡಲಾಗಿತ್ತು. ಈ ಟೀಸರ್‍ ನಲ್ಲಿ ಯಾವುದೇ ಡೈಲಾಗ್ ಗಳಿಲ್ಲ, ಬದಲಿಗೆ ದೇವಿಶ್ರೀ ಪ್ರಸಾದ್ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡಿದೆ. ಈ ಟೀಸರ್‍ ಮೂಲಕ ಸಿನೆಮಾದ ಮೇಲೆ ಮತಷ್ಟು ಹೈಪ್ ಕ್ರೀಯೆಟ್ ಮಾಡಿದೆ ಎನ್ನಲಾಗಿದೆ. ಜೊತೆಗೆ ಸಿನೆಮಾ ದೊಡ್ಡಪರದೆಯ ಮೇಲೆ ಯಾವಾಗ ನೋಡ್ತೀವಿ ಅಂತಾ ಪುಷ್ಪಾ ಸಿನೆಮಾದ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇನ್ನೂ ಪುಷ್ಪಾ-2 ಸಿನೆಮಾ ಶೂಟಿಂಗ್ ಆರಂಭವಾದಾಗಿನಿಂದ ಒಂದಲ್ಲ ಒಂದು ಸುದ್ದಿ ಕೇಳಿಬರುತ್ತಲೇ ಇದೆ. ಆ ಸುದ್ದಿ ಕೇಳಿದಾಗಲೆಲ್ಲಾ ಮತಷ್ಟು ಹೈಪ್ ಕ್ರಿಯೇಟ್ ಆಗುತ್ತಿತ್ತು. ಇದೀಗ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಪವರ್‍ ಸ್ಟಾರ್‍ ಪವನ್ ಕಲ್ಯಾನ್ ಪುಷ್ಪಾ -2 ಸಿನೆಮಾದಲ್ಲಿ ಮಿಂಚಲಿದ್ದಾರೆ. ಆದರೆ ಅವರು ಈ ಸಿನೆಮಾದಲ್ಲಿ ನಟಿಸಿಲ್ಲ. ಆದರೆ ಪವನ್ ಕಲ್ಯಾಣ್ ವಾಯ್ಸ್ ಓವರ್‍ ನೀಡಲಿದ್ದಾರಂತೆ. ಅಲ್ಲು ಅರ್ಜುನ್ ಇಂಟ್ರಡಕ್ಷನ್ ಗೆ ಸಂಬಂಧಿಸಿದಂತೆ ಪವನ್ ಕಲ್ಯಾಣ್ ವಾಯ್ಸ್ ಓವರ್‍ ನೀಡಲಿದ್ದಾರೆಂತೆ, ಈಗಾಗಲೇ ಪವನ್ ಕಲ್ಯಾಣ್ ತಮ್ಮ ಡಬ್ಬಿಂಗ್ ಸಹ ಪೂರ್ಣಗೊಳಿಸಿದ್ದಾರಂತೆ. ಸದ್ಯ ಈ  ಸುದ್ದಿ ಸೋಷಿಯಲ್ ಮಿಡಿಯಾವನ್ನು ಶೇಕ್ ಮಾಡುತ್ತಿದೆ.

ಅಂದರೇ ಪವನ್ ಕಲ್ಯಾಣ್ ಪುಷ್ಪಾ ಬಗ್ಗೆ ಇಂಟ್ರಡಕ್ಷನ್ ಕೊಡಲಿದ್ದಾರೆ ಎನ್ನಲಾಗಿದೆ. ಆದರೆ ಈ ಸುದ್ದಿಯನ್ನು ಪುಷ್ಪಾ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಸುದ್ದಿ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಒಂದು ವೇಳೆ ಈ ಸುದ್ದಿ ನಿಜವೇ ಆದರೇ ರೆಕಾರ್ಡ್‌ಗಳು ಬ್ರೇಕ್ ಮಾಡೋದು ಪಕ್ಕಾ ಎಂದು ಹೇಳಲಾಗುತ್ತಿದೆ.

Most Popular

To Top