ಇನ್ನೂ ಮುಗಿಯಲಿಲ್ಲ ರಾಖಿ ಸಾವಂತ್ ಗೋಳು, ನನ್ನ ಪತಿ ಬೇರೆ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಗೋಳು….!

Follow Us :

ಸದಾ ಒಂದಲ್ಲ ಒಂದು ವಿಚಾರಕ್ಕಾಗಿ ಸುದ್ದಿಯಲ್ಲಿರುವ ಬಾಲಿವುಡ್ ನಟಿಯರಲ್ಲಿ ರಾಖಿ ಸಾವಂತ್ ಸಹ ಒಬ್ಬರು ಎಂದರೇ ತಪ್ಪಾಗಲಾರದು. ಇತ್ತಿಚಿಗಷ್ಟೆ ಆಕೆ ಮೈಸೂರು ಮೂಲದ ಉದ್ಯಮಿ ಆದಿಲ್ ಎಂಬಾತನನ್ನು ಮದುವೆಯಾಗಿದ್ದು, ಈ ವಿಚಾರ ಸಹ ಸಾಕಷ್ಟು ಸುದ್ದಿಯಾಗಿತ್ತು. ನಾವು ಮದುವೆಯಾದ ವಿಚಾರ ಬಹಿರಂಗ ಪಡಿಸಬಾರದು ಎಂದು ಆದಿಲ್ ಹೇಳಿದ್ದ ಎಂದು ರಾದ್ದಾಂತ ಆಗಿದ್ದು ತಿಳಿದೇ ಇದೆ. ರಾಖಿ ಸಾವಂತ್ ಗೆ ಸಂಬಂಧಿಸಿದ ಗೋಳು ಮತ್ತೊಂದು ಕೇಳಿಬರುತ್ತಿದೆ. ಆಕೆಯ ಪತಿ ಬೇರೆ ಯುವತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಪಬ್ಲಿಕ್ ನಲ್ಲೇ ಗೋಳಾಡಿದ್ದಾರೆ.

ನಟಿ ರಾಖಿ ಸಾವಂತ್ ತನ್ನ ಪತಿ ಆದಿಲ್ ಖಾನ್ ಕುರಿತು ಕೆಲವೊಂದು ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ಮಿಡಿಯಾದೊಂದಿಗೆ ಮಾತನಾಡಿದ ರಾಖಿ ಕಣ್ಣೀರು ಹಾಕಿದ್ದಾರೆ. ತನ್ನ ಪತಿಯ ಬಗ್ಗೆ ಅಳುತ್ತಲೇ ಮಾತನಾಡಿದ್ದಾರೆ. ಆದಿಲ್ ಬೇರೆ ಯುವತಿಯೊಂದಿಗೆ ತಿರುಗಾಡುತ್ತಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಜಿಮ್ ಸೆಂಟರ್‍ ನಿಂದ ಹೊರಬರುತ್ತಿದ್ದ ರಾಖಿ ಸಾವಂತ್ ರವರನ್ನು ಮೀಡಿಯಾಗಳು ಮಾತನಾಡಿಸಲು ಹೋದಾಗ ಆಕೆ ಪುಲ್ ಫೈರ್‍ ಆಗಿದ್ದಾರೆ. ನೀವು ಆದಿಲ್ ಖಾನ್ ನನ್ನು ಸಂದರ್ಶನ ಮಾಡಬೇಡಿ. ಪ್ರತಿನಿತ್ಯ ಆತ ಜಿಮ್ ಗೆ ಬರುವುದು ಜಿಮ್ ಮಾಡಲು ಅಲ್ಲ. ಮಿಡಿಯಾ ಕಣ್ಣಿಗೆ ಬೀಳಲು. ನಾನು ಸಹ ಆತನ ಬಗ್ಗೆ ಮಾತನಾಡುವುದಿಲ್ಲ. ಆತನನ್ನು ಫೇಮಸ್ ಮಾಡುವುದಿಲ್ಲ. ನಿಮ್ಮ ಕಾಲು ಹಿಡಿದು ಬೇಡಿಕೊಳ್ಳುತ್ತೇನೆ ಯಾರೂ ಆತನನ್ನು ಸಂದರ್ಶನ ಮಾಡಬೇಡಿ ಎಂದು ಗೋಳಾಡಿದ್ದಾರೆ.

ಅಷ್ಟೇಅಲ್ಲದೇ ಆತ ಬೇರೆ ಯುವತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ. ಆಕೆಯನ್ನು ಬಿಟ್ಟು ಬಿಡುತ್ತೇನೆ ಎಂದು ನನ್ನ ಮೇಲೆ ಆಣೆ ಮಾಡಿದ್ದಾನೆ. ಆದರೂ ಸಹ ಆತ ಆ ಯುವತಿಯನ್ನು ಬಿಡದೇ ಆಕೆಯೊಂದಿಗೆ ಅಫೈರ್‍ ನಡೆಸುತ್ತಿದ್ದಾನೆ. ಇದೀಗ ಆಕೆ ಆತನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ. ಆಕೆಯ ಬಳಿ ಆದಿಲ್ ಖಾನ್ ನ ಪರ್ಸನಲ್ ವಿಡಿಯೋ, ಆಡಿಯೋಗಳು ಇದೆ. ಆದಿಲ್ ಖಾನ್ ದೊಡ್ಡ ಸುಳ್ಳುಗಾರ ಎಂದು ಸೀರಿಯಸ್ ಆರೋಪಗಳನ್ನು ಮಾಡಿದ್ದಾರೆ. ಸದ್ಯ ಈ ಸಂಬಂಧ ವಿಡಿಯೋ ವೈರಲ್ ಆಗುತ್ತಿದೆ. ಇನ್ನೂ ಸಿನೆಮಾ ಕಥೆಯಂತೆ ದಿನಕ್ಕೊಂದು ತಿರುವು, ದಿನಕ್ಕೊಂದು ಗೋಳು ಕೇಳಿಬರುತ್ತಿದೆ.

ಇನ್ನೂ ರಾಖಿ ಸಾವಂತ್ ಆರೋಪಗಳಿಗೆ ಆದಿಲ್ ಖಾನ್ ಯಾವ ರೀತಿಯಲ್ಲಿ ರಿಯಾಕ್ಟ್ ಆಗಲಿದ್ದಾರೆ ಎಂಬುದನ್ನು ಕಾದು ನೊಡಬೇಕಿದೆ. ಕಳೆದ ಜನವರಿ 28 ರಾಖಿ ತನ್ನ ತಾಯಿಯನ್ನು ಕಳೆದು ಕೊಂಡರು. ಈ ವಿಷಯವನ್ನು ರಾಖಿ ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದರು. ಸದಾ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಾಗುತ್ತಿದ್ದಾರೆ.