ಮುಸ್ಮೀಂ ಯುವಕರಿಗೆ ಒವೈಸಿ ಕರೆ, ರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ವಿವಾದಿತ ಹೇಳಿಕೆ ನೀಡಿದ ಒವೈಸಿ….!

Follow Us :

ಮುಸ್ಲೀಂ ಯುವಕರೇ ನಾವು ನಮ್ಮ ಕಣ್ಣ ಮುಂದೆ ಮಸೀದಿಯನ್ನು ಕಳೆದುಕೊಂಡಿದ್ದೇವೆ, ಇದು ನಿಮಗೆ ನೋವು ತರುತ್ತಿಲ್ಲವೇ, ಸದ್ಯ ಕೆಲ ಮಸೀದಿಗಳನ್ನು ಟಾರ್ಗೆಟ್ ಮಾಡಲಾಗಿದೆ. ಮಸೀದಿಗಳನ್ನು ಉಳಿಸಿಕೊಳ್ಳಬೇಕಾದ ದೊಡ್ಡ ಜವಾಬ್ದಾರಿ ಮುಸ್ಲೀಂ ಯುವ ಸಮೂಹಕ್ಕಿದೆ ಎಲ್ಲರೂ ಎಚ್ಚೆತ್ತುಕೊಳ್ಳಿ, ನಾವೆಲ್ಲ ಒಗ್ಗಾಟ್ಟಾಗಿದ್ದರೇ ಅದು ಸಾಧ್ಯ ಎಂದು ಎಐಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಒವೈಸಿ ಕರೆ ನೀಡಿದ್ದಾರೆ.

ಉತ್ತರ ಪ್ರದೇಶದ ಅಯೋದ್ಯೆಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ರಾಮ ಮಂದಿರ ಉದ್ಘಾಟನೆಯಾಗಲಿದೆ. ಈ ನಡುವೆ ಎಐಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಒವೈಸಿ ಮುಸ್ಲೀಂ ಸಮುದಾಯಕ್ಕೆ ಕರೆ ನೀಡಿದ್ದಾರೆ. ನಮ್ಮಿಂದ ಬಾಬ್ರಿ ಮಸೀದಿಯನ್ನು ಕಿತ್ತುಕೊಳ್ಳಲಾಗಿದೆ. ಸುಮಾರು 500 ವರ್ಷಗಳಿಂದ ಬಾಬ್ರಿ ಮಸೀದಿ ಅಂದರೇ ಇದೀಗ ರಾಮ ಮಂದಿರ ನಿರ್ಮಾಣ ಆಗಿರುವ ಸ್ಥಳದಲ್ಲಿ ಖುರಾಣ್ ಪಠಣ ಮಾಡಲಾಗುತ್ತಿತ್ತು. 500 ವರ್ಷಗಳ ಕಾಲ ಖುರಾನ್ ಪಠಣ ಮಾಡುತ್ತಿದ್ದ ಮಸೀದಿ ಇದೀಗ ನಮ್ಮ ಬಳಿಯಿಲ್ಲ. ಮುಸ್ಲೀಂ ಯುವಕರೇ ನಮ್ಮ ಜಾಗದಲ್ಲಿ ಏನು ನಿರ್ಮಾಣವಾಗಿದೆ ಎಂಬುದು ನಿಮಗೆಲ್ಲಾ ಗೊತ್ತಿದೆ. ಇದನ್ನು ತಿಳಿದ ನಿಮಗೆ ನೋವಾಗುತ್ತಿಲ್ಲವೇ ಎಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಒವೈಸಿ ಹೇಳಿದ್ದಾರೆ ಎನ್ನಲಾಗಿದೆ.

ಹೈದರಾಬಾದ್ ನ ಭವಾನಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒವೈಸಿ ಮಾತನಾಡಿದ್ದಾರೆ. ಕೇವಲ ರಾಮಮಂದಿರ ನಿರ್ಮಾಣ ಮಾತ್ರವಲ್ಲ, ಕೆಲವೊಂದು ಕಡೆ ಮಸೀದಿಗಳನ್ನು ಟಾರ್ಗೆಟ್ ಮಾಡಲಾಗಿದೆ. ನಾವು ಒಗ್ಗಟ್ಟಿನಿಂದ ಇರದೇ ಇದ್ದರೇ ನಮಗೆ ಯಾವುದೂ ಉಳಿಯುವುದಿಲ್ಲ. ಮುಸ್ಲೀಂ ಯುವಕರೇ ನೀವು ಒಗ್ಗಟ್ಟಾಗಿ, ಸಂಘಟಿತರಾಗಿ ಎಂದು ಕರೆ ಕೊಟ್ಟಿದ್ದಾರೆ. ಇತ್ತೀಚಿಗಷ್ಟೆ ಮಥುರಾ ಶ್ರೀಕೃಷ್ಣ ಮಂದಿರದ ಆವರಣದಲ್ಲಿನ ಈದ್ಗಾ ಮಸೀದಿಯ ಸರ್ವೆ ಕಾರ್ಯಕ್ಕೆ ಕೋರ್ಟ್ ಅನುಮತಿ ನೀಡಿತ್ತು. ಈ ಬಗ್ಗೆ ಸಹ ಓವೈಸಿ ಅಪಸ್ವರ ಎತ್ತಿದ್ದರು. ಬಿಜೆಪಿ ಸರ್ಕಾರ ಮುಸ್ಲೀಂರ ವಿರುದ್ದವಾಗಿದೆ ಎಂದು ಆಕ್ರೋಷ ಹೊರಹಾಕಿದ್ದರು. ಜೊತೆಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಿಜಾಬ್ ನಿಷೇಧ ಹಿಂಪಡೆಯುವ ಕುರಿತು ಯಾವುದೇ ನಿರ್ಧಾರವಾಗಿಲ್ಲ ಎಂದು ಹೇಳಿದ್ದರು. ಇದಕ್ಕೂ ಸಹ ಒವೈಸಿ ಪ್ರಶ್ನೆ ಮಾಡಿದ್ದರು. ಹಿಜಾಬ್ ನಿಷೇಧ ಹಿಂಪಡೆಯಲು ಹಿಂಜರಿಯುವ ಅಗತ್ಯವಿಲ್ಲ ಎಂದು ಒವೈಸಿ ಹೇಳಿದ್ದರು. ಇದೀಗ ಅವರು ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಮುಸ್ಲೀಂ ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ.