ಮದುವೆ ರೂಮರ್ ಬಗ್ಗೆ ಪಕ್ಕಾ ಕ್ಲಾರಿಟಿ ಕೊಟ್ಟ ಲೇಡಿ ವಿಲನ್ ವರಲಕ್ಷ್ಮೀ, ಮದುವೆ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ ನಟಿ…..!

Follow Us :

ಬಣ್ಣದ ಲೋಕದಲ್ಲಿ ಹಿರೋಯಿನ್ ಆಗಿ ಎಂಟ್ರಿ ಕೊಟ್ಟ ವರಲಕ್ಷ್ಮೀ ಶರತ್ ಕುಮಾರ್‍ ಅನೇಕ ಸಿನೆಮಾಗಳಲ್ಲಿ ನೆಗೆಟೀವ್ ರೋಲ್ ಪ್ಲೇ ಮಾಡಿದ್ದಾರೆ. ಲೇಡಿ ವಿಲನ್ ಆಗಿ ಒಳ್ಳೆಯ ಕ್ರೇಜ್ ಪಡೆದುಕೊಂಡ ವರಲಕ್ಷ್ಮೀ, ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಸಿನಿಜರ್ನಿ ಸಾಗಿಸುತ್ತಿದ್ದಾರೆ. ಆ ಮೂಲಕ ಸಿನಿರಂಗದಲ್ಲಿ ತಮ್ಮದೇ ಆದ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.  ಸದ್ಯ ಸೌತ್ ಸಿನಿರಂಗದಲ್ಲಿ ಲೇಡಿ ವಿಲನ್ ಆಗಿ ಭಾರಿ ಫೇಂ ಪಡೆದುಕೊಂಡಿದ್ದಾರೆ. ಇದೀಗ ಆಕೆ ಮದುವೆ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಲೇಡಿ ವಿಲನ್ ವರಲಕ್ಷ್ಮೀ ಶರತ್ ಕುಮಾರ್‍ ಕಾಲಿವುಡ್ ಸ್ಟಾರ್‍ ನಟ ಶರತ್ ಕುಮಾರ್‍ ರವರ ಪುತ್ರಿ. ಆದರೆ ಎಂದು ಆಕೆ ತನ್ನ ತಂದೆಯ ಪ್ರಭಾವ ಬಳಸಿ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳಲಿಲ್ಲ. ಸ್ವಂತ ಪ್ರತಿಭೆಯಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಟಿಯಾಗಬೇಕೆಂಬ ಹಂಬಲದಿಂದ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರು. ಆದರೆ ಆಕೆಗೆ ಮಾತ್ರ ಲೇಡಿ ವಿಲನ್ ಆಗಿ ತುಂಬಾನೆ ಫೇಂ ಬಂತು ಎಂದೇ ಹೇಳಬಹುದು. ಕ್ರಾಕ್, ವೀರಸಿಂಹಾರೆಡ್ಡಿ, ಏಜೆಂಟ್, ಮೈಖಲ್ ಮೊದಲಾದ ಸಿನೆಮಾಗಳ ಮೂಲಕ ಇತ್ತೀಚಿಗೆ ಅಭಿಮಾನಿಗಳನ್ನು ರಂಜಿಸಿದರು. ನೆಗೆಟೀವ್ ರೋಲ್ ಗಳ ಜೊತೆಗೆ ಆಗಾಗ ಕೆಲವೊಂದು ಪ್ರಮುಖ ಪಾತ್ರಗಳನ್ನು ಪೋಷಣೆ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಇತ್ತೀಚಿಗೆ ತೆರೆಕಂಡ ಹನುಮಾನ್ ಸಿನೆಮಾದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ನಟಿಸಿ ಸೂಪರ್‍ ಹಿಟ್ ತನ್ನ ತೆಕ್ಕೆಗೆ ಹಾಕಿಕೊಂಡಿದ್ದಾರೆ.

ಇನ್ನೂ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳಿಂದಲೂ ಸಹ ವರಲಕ್ಷ್ಮೀ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಲವ್ ಹಾಗೂ ಮದುವೆ ರೂಮರ್‍ ಗಳ ಬಗ್ಗೆ ಆಗಾಗ ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟಿ ವರಲಕ್ಷ್ಮೀ ಮದುವೆ ರೂಮರ್‍ ಬಗ್ಗೆ ಹಾಗೂ ಮದುವೆಯ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಮದುವೆ ವಯಸ್ಸು ದಾಟಿದರೂ ಸಹ ಆಕೆ ಇನ್ನೂ ಮದುವೆಯಾಗಿಲ್ಲ. ಈ ಸಂದರ್ಶನದಲ್ಲಿ ಆಕೆ ಮದುವೆ ಬಗ್ಗೆ ಮಡಿಕೆ ಒಡೆದಂತೆ ಕಾಮೆಂಟ್ ಮಾಡಿದ್ದಾರೆ. ನನ್ನ ಜೀವನದಲ್ಲಿ ಮದುವೆ ಯಾವಾಗ ನಡೆಯಬೇಕು ಆಗ ನಡೆಯುತ್ತದೆ. ಜೀವನದಲ್ಲಿ ಮದುವೆ ಎಂಬುದು ಒಂದು ಭಾಗವಷ್ಟೆ, ಗುರಿಯಲ್ಲ. ಮದುವೆಗೆ ನಾನು ವಿರೋಧಿಯಲ್ಲ. ನನ್ನ ಮನೆಯಲ್ಲಿ ಮದುವೆ ಬಗ್ಗೆ ಮಾತನಾಡುವುದನ್ನು ಬಿಟ್ಟು 18 ವರ್ಷಗಳಾಗಿದೆ. ನನ್ನ ದೃಷ್ಟಿಯಲ್ಲಿ ಮದುವೆ ಮುಖ್ಯವಲ್ಲ. ಮದುವೆ ಮಾಡಿಕೊಂಡರೂ ಸರಿ, ಮಾಡಿಕೊಳ್ಳದೇ ಇದ್ದರೂ ಸರಿ. ಇನ್ನೂ ಇಂದಿಗೂ ಸಹ ಅನೇಕರು ಮದುವೆಯಾಗದೆ ಇದ್ದಾರೆ. ನನ್ನ ಸ್ನೇಹಿತೆ ತ್ರಿಷಾ ಸಹ ಮದುವೆಯಾಗದೆ ಇದ್ದಾರೆ ಎಂದು ಹೇಳಿದ್ದಾರೆ.

ಇನ್ನೂ ಬಾಲಿವುಡ್ ಎಂಟ್ರಿ ಬಗ್ಗೆ ಸಹ ವರಲಕ್ಷ್ಮೀ ಮಾತನಾಡಿದ್ದಾರೆ. ಈಗಾಗಲೇ ನನಗೆ ಕೆಲವೊಂದು ಆಫರ್‍ ಗಳು ಬಾಲಿವುಡ್ ನಿಂದ ಬಂದಿತ್ತು. ಆದರೆ ಆ ಆಫರ್‍ ಗಳಲ್ಲಿ ಉತ್ಸಾಹ ಇರಲಿಲ್ಲ. ಸದ್ಯ ನನಗೆ ಬಾಲಿವುಡ್ ನಲ್ಲಿ ಹೆಜ್ಜೆ ಇಡುವ ಉದ್ದೇಶ ಸಹ ಇಲ್ಲ. ತೆಲುಗಿನಲ್ಲಿ ಇನ್ನೂ ಒಳ್ಳೆಯ ಅವಕಾಶಗಳು ಬಂದರೇ ಮಾಡುತ್ತೇನೆ ಎಂದು ಆಕೆ ಹೇಳಿದ್ದಾರೆ. ಸದ್ಯ ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ.