Film News

ಯುವಕನೊಂದಿಗೆ ಕಾಣಿಸಿಕೊಂಡ ಕಂಗನಾ, ಆತ ಯಾರು ಎಂಬುದನ್ನು ರಿವೀಲ್ ಮಾಡಿದ ಫೈರ್ ಬ್ರಾಂಡ್…..!

ಬಾಲಿವುಡ್ ಬ್ಯೂಟಿ ಕಂಗನಾ ರಾಣಾವತ್ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ಸಿನೆಮಾ ಸ್ಟಾರ್‍ ಗಳಿಂದ ಹಿಡಿದು ರಾಜಕೀಯ ವ್ಯಕ್ತಿಗಳ ವರೆಗೂ ಯಾರನ್ನೂ ಬಿಡದೇ ಅವರು ಬಗ್ಗೆ ವಿವಾದಾತ್ಮಕ ಕಾಮೆಂಟ್ ಗಳನ್ನು ಹರಿಬಿಡುತ್ತಾ ಸುದ್ದಿಯಾಗುತ್ತಿರುತ್ತಾರೆ. ಜೊತೆಗೆ ಆಗಾಗ ವೈಯುಕ್ತಿಕ ವಿಚಾರಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಕಂಗನಾ ಯುವಕನೊಂದಿಗೆ ಕಾಣಿಸಿಕೊಂಡಿದ್ದು, ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿತ್ತು. ಆತನೇ ಕಂಗನಾ ಮದುವೆಯಾಗಲಿರುವ ವ್ಯಕ್ತಿ ಎಂಬೆಲ್ಲಾ ಸುದ್ದಿ ಕೇಳಿಬಂದಿತ್ತು. ಇದೀಗ ಆತ ಯಾರು ಎಂಬ ವಿಚಾರವನ್ನು ಆಕೆಯೇ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಆತ ಯಾರು ಎಂಬ ವಿಚಾರಕ್ಕೆ ಬಂದರೇ,

ಬಾಲಿವುಡ್ ಸ್ಟಾರ್‍ ನಟಿ ಕಂಗನಾ ರಾನೌತ್ ಆಗಾಗ ದೊಡ್ಡ ದೊಡ್ಡ ಸೆಲೆಬ್ರೆಟಿಗಳ ಮೇಲೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಜೊತೆಗೆ ರಾಜಕೀಯ ನಾಯಕರನ್ನೂ ಸಹ ಆಕೆ ವಿಮರ್ಶೆ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆಯನ್ನು ಕಾಂಟ್ರವರ್ಸಿ ಕ್ವೀನ್ ಎಂತಲೂ ಕರೆಯುತ್ತಾರೆ. ವಿವಾದಗಳಿಗೆ ಕೇರ್‍ ಆಫ್ ಅಡ್ರೆಸ್ ಎಂದರೇ ಕಂಗನಾ ರಾನೌತ್ ಎಂದು ಹೇಳಬಹುದು. ದೊಡ್ಡ ಸ್ಟಾರ್‍ ಗಳಾಗಲಿ, ಅಥವಾ ದೊಡ್ಡ ರಾಜಕಾರಣಿಗಳಾಗಲಿ ನೇರವಾಗಿ ಅವರ ಮೇಲೆ ಆರೋಪಗಳನ್ನು ಮಾಡಿಬಿಡುತ್ತಾರೆ. ಕೊನೆಯದಾಗಿ ಆಕೆ ಚಂದ್ರಮುಖಿ-2 ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

ಕಳೆದೆರಡು ದಿನಗಳ ಹಿಂದೆ ಕಂಗನಾ ಓರ್ವ ಮಿಸ್ಟರಿ ಮ್ಯಾನ್ ಜೊತೆಗೆ ಕಾಣಿಸಿಕೊಂಡಿದ್ದರು. ಆ ಯುವಕನ ಕೈ ಹಿಡಿದುಕೊಂಡು ಬರುತ್ತಿರುವುದು ಕಾಣಿಸಿದೆ. ಈ ಸಂಬಂಧ ಕೆಲವೊಂದು ಪೊಟೋಗಳು ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿತ್ತು. ಅನೇಕರು ಕಂಗನಾ ಮದುವೆಯಾಗಲಿರುವುದು ಆತನೊಂದಿಗೆ ಎಂಬ ರೂಮರ್‍ ಜೋರಾಗಿಯೆ ಹರಿದಾಡಿತ್ತು. ಈ ಸುದ್ದಿ ವೈರಲ್ ಆಗುತ್ತಾ ಕಂಗನಾವರೆಗೂ ತಲುಪಿದ್ದು, ಈ ಬಗ್ಗೆ ಆಕೆ ರಿಯಾಕ್ಟ್ ಆಗಿದ್ದಾರೆ. ಆತ ಬೇರೆ ಯಾರೂ ಅಲ್ಲ, ನನ್ನೊಂದಿಗೆ ಬಂದಂತಹ ವ್ಯಕ್ತಿ ನನ್ನ ಹೇರ್‍ ಸ್ಟೈಲಿಷ್ಟ್, ಸುಮಾರು ದಿನಗಳಿಂದ ಆತನಿಗೆ ನಾನು ಫ್ರೆಂಡ್ಲಿ ಕಸ್ಟಮರ್‍, ಓರ್ವ ಹುಡುಗಿ ಹುಡುಗನೊಂದಿಗೆ ಕಾಣಿಸಿಕೊಂಡರೇ ಪ್ರೇಮಿಕರು ಎನ್ನುವುದೇ, ಅಣ್ಣ ತಂಗಿಯರು ಆಗಿರಬಹುದು ಅಲ್ಲವೇ ಎಂದು ಆಕೆ ಹೇಳಿದ್ದಾರೆ. ಆ ಮೂಲಕ ಆ ಮಿಸ್ಟರಿ ಮ್ಯಾನ್ ಯಾರು ಎಂಬುದಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ.

ಇನ್ನೂ ಕಂಗನಾ ಶೀಘ್ರದಲ್ಲೇ ಎಮರ್ಜೆನ್ಸಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್‍ ಸೇರಿದಂತೆ ಕೆಲವೊಂದು ಅಪ್ಡೇಟ್ ಗಳು ಸಿನೆಮಾದ ಮೇಲೆ ತುಂಬಾನೆ ಇಂಟ್ರಸ್ಟ್ ಕ್ರಿಯೇಟ್ ಮಾಡಿದೆ. ಈ ಸಿನೆಮಾದಲ್ಲಿ ಕಂಗನಾ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾವನ್ನು ಕಂಗನಾ ರವರೇ ನಿರ್ದೇಶನ ಮಾಡಿ, ನಟಿಸಿದ್ದಾರೆ.

Most Popular

To Top