ಅದೇ ನಾನು ಮಾಡಿದ ದೊಡ್ಡ ತಪ್ಪು ಎಂದು ಲೇಡಿ ವಿಲನ್ ವರಲಕ್ಷ್ಮೀ ಶರತ್ ಕುಮಾರ್, ಆಕೆ ಹೇಳಿದ್ದಾದರೂ ಏಕೆ ಗೊತ್ತಾ?

Follow Us :

ಸದ್ಯ ಸೌತ್ ಸಿನಿರಂಗದಲ್ಲಿ ಲೇಡಿ ವಿಲನ್ ಪಾತ್ರ ಎಂದ ಕೂಡಲೇ ಹೆಚ್ಚಾಗಿ ಕೇಳಿಬರೋದು ನಟಿ ವರಲಕ್ಷ್ಮೀ ಶರತ್ ಕುಮಾರ್‍ ರವರ ಹೆಸರು. ಇತ್ತೀಚಿಗೆ ಆಕೆ ಸೌತ್ ನಲ್ಲಿ ವಿವಿಧ ಸಿನೆಮಾಗಳಲ್ಲಿ ವಿಭಿನ್ನವಾದ ಪಾತ್ರಗಳನ್ನು ಮಾಡುತ್ತಾ ಪುಲ್ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆಯ ನಿಶ್ಚಿತಾರ್ಥ ಸಹ ನಡೆದಿತ್ತು. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದೀಗ ಆಕೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಲೇಡಿ ವಿಲನ್ ವರಲಕ್ಷ್ಮೀ ಶರತ್ ಕುಮಾರ್‍ ಕಾಲಿವುಡ್ ಸ್ಟಾರ್‍ ನಟ ಶರತ್ ಕುಮಾರ್‍ ರವರ ಪುತ್ರಿ. ಆದರೆ ಎಂದು ಆಕೆ ತನ್ನ ತಂದೆಯ ಪ್ರಭಾವ ಬಳಸಿ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳಲಿಲ್ಲ. ಸ್ವಂತ ಪ್ರತಿಭೆಯಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಟಿಯಾಗಬೇಕೆಂಬ ಹಂಬಲದಿಂದ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರು. ಆದರೆ ಆಕೆಗೆ ಮಾತ್ರ ಲೇಡಿ ವಿಲನ್ ಆಗಿ ತುಂಬಾನೆ ಫೇಂ ಬಂತು ಎಂದೇ ಹೇಳಬಹುದು. ಕ್ರಾಕ್, ವೀರಸಿಂಹಾರೆಡ್ಡಿ, ಏಜೆಂಟ್, ಮೈಖಲ್ ಮೊದಲಾದ ಸಿನೆಮಾಗಳ ಮೂಲಕ ಇತ್ತೀಚಿಗೆ ಅಭಿಮಾನಿಗಳನ್ನು ರಂಜಿಸಿದರು. ಸದ್ಯ ಆಕೆ ಲೇಡಿ ವಿಲನ್ ಆಗಿ ಮೊದಲ ಆಯ್ಕೆಯಾಗಿದ್ದಾರೆ. ಕೊನೆಯದಾಗಿ ಆಕೆ ಹನುಮಾನ್ ಎಂಬ ಸಿನೆಮಾದ ಮೂಲಕ ಭಾರಿ ಸಕ್ಸಸ್ ಕಂಡುಕೊಂಡರು.

ಇನ್ನೂ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ವರಲಕ್ಷ್ಮೀ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಅವು ವೈರಲ್ ಆಗುತ್ತಿವೆ. ಸದ್ಯ ವರಲಕ್ಷ್ಮೀ ವಯಸ್ಸು 38 ಆಗಿದ್ದು, ಆಕೆ ಪೋಡಾಪೋಡಿ ಎಂಬ ಸಿನೆಮಾದಲ್ಲಿ ನಟಿಸುವಾಗ 22 ವರ್ಷ ಆಗಿತ್ತು. 28 ವರ್ಷಗಳೊಳಗೆ ಸ್ಟಾರ್‍ ಸ್ಟೇಟಸ್ ಪಡೆದುಕೊಳ್ಳಬೇಕೆಂದು ಭಾವಿಸಿದ್ದೆ. 32 ವರ್ಷದ ಸಮಯದಲ್ಲಿ ಮದುವೆಯಾಗಿ, 34 ವರ್ಷದೊಳಗೆ ಮಕ್ಕಳನ್ನು ಪಡೆಯಬೇಕೆಂದು ಪ್ಲಾನ್ ಮಾಡಿಕೊಂಡಿದ್ದೆ. ಆದರೆ ನನ್ನ ಪ್ಲಾನ್ ವರ್ಕೌಟ್ ಆಗಲಿಲ್ಲ. ಪೋಡಾಪೋಡಿ ಸಿನೆಮಾದ ಬಳಿಕ ವೈಯುಕ್ತಿಕ ಜೀವನದ ಮೇಲೆ ಹೆಚ್ಚು ಪೋಕಸ್ ಇಟ್ಟಿದ್ದೆ. ನಾನು ಮಾಡಿದ ದೊಡ್ಡ ಅದು ಒಂದೇ. ಆ ಸಮಯದಲ್ಲಿ ನಾನು ಸಿನೆಮಾಗಳ ಮೇಲೆ ದೃಷ್ಟಿ ಇಡಬೇಕಿತ್ತು ಎಂದು ವರಲಕ್ಷ್ಮೀ ಕಾಮೆಂಟ್ ಮಾಡಿದ್ದಾರೆ. ಆಕೆಯ ಈ ಕಾಮೆಂಟ್ ಗಳು ವೈರಲ್ ಆಗುತ್ತಿದೆ.

ಇನ್ನೂ ವರಲಕ್ಷ್ಮೀ ರವರ ಸೋಲುಗಳು ಆಕೆಯನ್ನು ಮತಷ್ಟು ಬಲಿಷ್ಟ ಮಾಡಿದೆ ಎನ್ನಬಹುದಾಗಿದೆ. ವರಲಕ್ಷ್ಮೀಯನ್ನು ಅಭಿಮಾನಿಸುವ ಅಭಿಮಾನಿಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಆಕೆ ಮತಷ್ಟು ಸಕ್ಸಸ್ ಗಳು ಖಾತೆಗೆ ಹಾಕಿಕೊಳ್ಳಬೇಕೆಂದು ಅಭಿಮಾನಿಗಳು ಕಾಮೆಂಟ್ ಗಳ ಮೂಲಕ ಶುಭ ಹಾರೈಸುತ್ತಿದ್ದಾರೆ.