ಆ ಕಾರಣದಿಂದಲೇ ನಾನು ಗ್ಲಾಮರಸ್ ಪಾತ್ರಗಳಲ್ಲಿ ನಟಿಸೊಲ್ಲ ಎಂದ ನಟಿ ವರಲಕ್ಷ್ಮೀ ಶರತ್ ಕುಮಾರ್…!

ದಕ್ಷಿಣದ ಸಿನೆಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ ಗಳಿಸಿಕೊಂಡ ನಟಿಯರಲ್ಲಿ ಹಿರಿಯ ನಟ ಶರತ್ ಕುಮಾರ್‍ ಪುತ್ರ ವರಲಕ್ಷ್ಮೀ ಸಹ ಒಬ್ಬರಾಗಿದ್ದಾರೆ. ಆಕೆ ಬಹುತೇಕ ಸಿನೆಮಾಗಳಲ್ಲಿ ನೆಗಟೀವ್ ರೋಲ್ ಪ್ಲೇ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಆಕೆ ಅಭಿನಯದ ಅನೇಕ ಸಿನೆಮಾಗಳು ಬ್ಲಾಕ್ ಬ್ಲಸ್ಟರ್‍ ಹಿಟ್ ಆಗಿದೆ. ಆ ಸಿನೆಮಾಗಳಲ್ಲಿ ಆಕೆಯ ಪಾತ್ರ ಹೈಲೈಟ್ ಆಗಿದೆ ಎನ್ನಬಹುದಾಗಿದೆ. ಇದೀಗ ವರಲಕ್ಷ್ಮೀ ಸಿನೆಮಾಗಳಲ್ಲಿ ಹಿರೋಯಿನ್ ಆಗಿ ಗ್ಲಾಮರಸ್ ಪಾತ್ರಗಳಲ್ಲಿ ನಟಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ.

ನಟಿ ವರಲಕ್ಷ್ಮೀ ಸ್ಟಾರ್‍ ಕಿಡ್ ಆಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ಆಕೆ ತನ್ನದೇ ಆದ ಪ್ರತಿಭೆಯ ಮೂಲಕ ಸಿನೆಮಾಗಳಲ್ಲಿ ಸಕ್ಸಸ್ ಕಂಡುಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ನಟಿಯರು ಹಿರೋಯಿನ್ ಆಗಿ ಗ್ಲಾಮರಸ್ ಪಾತ್ರಗಳನ್ನು ಪೋಷಣೆ ಮಾಡಲು ಇಂಟ್ರಸ್ಟ್ ತೋರಿಸುತ್ತಿರುತ್ತಾರೆ. ಆದರೆ ವರಲಕ್ಷ್ಮೀ ಮಾತ್ರ ವಿಲನ್ಸ್ ಹಾಗೂ ವಿಭಿನ್ನವಾದ ಪಾತ್ರಗಳಲ್ಲೇ ಹೆಚ್ಚು ಇಂಟ್ರಸ್ಟ್ ತೋರಿಸುತ್ತಿದ್ದಾರೆ. ತಮಿಳು ನಟ ವಿಜಯ್ ಅಭಿನಯದ ಸರ್ಕಾರ್‍, ಮಾಸ್ ಮಹಾರಾಜ ರವಿತೇಜ ಅಭಿನಯದ ಕ್ರಾಕ್, ಸಮಂತಾ ಅಭಿನಯದ ಯಶೋಧ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ಆಕೆ ವಿಲನ್ ಪಾತ್ರ ಪೋಷಣೆ ಮಾಡಿದ್ದಾರೆ. ಇದೀಗ ಆಕೆ ಗ್ಲಾಮರಸ್ ಪಾತ್ರಗಳಲ್ಲಿ ಏಕೆ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂಬ ವಿಚಾರವನ್ನು ತಿಳಿಸಿದ್ದಾರೆ.

ಇತ್ತೀಚಿಗೆ ಈ ಬಗ್ಗೆ ವರಲಕ್ಷ್ಮೀ ತಾನು ಗ್ಲಾಮರ್‍ ಪಾತ್ರಗಳಿಂದ ಏಕೆ ದೂರವಾಗಿರುತ್ತಾರೆ ಎಂಬ ವಿಚಾರವನ್ನು ಹೊರಹಾಕಿದ್ದಾರೆ. ಗ್ಲಾಮರಸ್ ಪಾತ್ರಗಳು ನನಗೆ ವರ್ಕೌಟ್ ಆಗುವುದಿಲ್ಲ. ಗ್ಲಾಮರ್‍ ಪಾತ್ರಗಳನ್ನು ಮಾಡಲು ಸಿನಿರಂಗದಲ್ಲಿ ಅನೇಕರು ಇದ್ದಾರೆ. ಆದರೆ ನಾನು ಮಾಡುವಂತಹ ಕೆಲವು ಪಾತ್ರಗಳನ್ನು ನಾನು ಮಾತ್ರ ಮಾಡಬಲ್ಲೇ. ನೆಗೆಟೀವ್ ರೋಲ್ಸ್ ಮಾಡುವುದರಿಂದ ನಾನು ಸಂತೋಷವಾಗಿಯೇ ಇದ್ದೀನಿ. ಮುಂದಿನ ದಿನಗಳಲ್ಲೂ ಸಹ ನನ್ನ ಆದ್ಯತೆ ಅದೇ ರೀತಿಯ ಪಾತ್ರಗಳ ಮೇಲೆ ಇರುತ್ತದೆ ಎಂದಿದ್ದಾರೆ. ಈ ಹಿಂದೆ ಸಹ ವರಲಕ್ಷ್ಮೀ ಕಾಮಿಡಿ ರೊಲ್ಸ್ ನಲ್ಲೂ ಸಹ ನಟಿಸುವ ಬಗ್ಗೆ ತಮ್ಮ ಇಚ್ಚೆಯನ್ನು ಹೊರಹಾಕಿದ್ದರು.

ಇನ್ನೂ ನಟಿ ವರಲಕ್ಷ್ಮೀ ಸಮಂತಾ ಅಭಿನಯದ ಯಶೋಧ ಸಿನೆಮಾದಲ್ಲಿ ತುಂಬಾನೆ ಅದ್ಬುತವಾಗಿ ನಟಿಸಿದ್ದರು. ಈ ಸಿನೆಮಾದಲ್ಲಿ ಆಕೆಯ ಪಾತ್ರ ಸಹ ಹೈಲೈಟ್ ಎನ್ನಬಹುದು. ಇದೀಗ ಆಕೆ ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾ ರೆಡ್ಡಿ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲೂ ಸಹ ಆಕೆ ಪವರ್‍ ಪುಲ್ ನೆಗೆಟೀವ್ ಪಾತ್ರದಲ್ಲಿ ರಂಜಿಸಲಿದ್ದಾರೆ.

Previous articleಶ್ವೇತವರ್ಣದ ಬಟ್ಟೆ, ಕೈಯಲ್ಲಿ ಜಪಮಾಲೆ, ಆಧ್ಯಾತ್ಮಿಕತೆ ಮೊರೆ ಹೋದ್ರಾ ಸಮಂತಾ?
Next articleಬಿಕಿನಿಯಲ್ಲಿ ಟಾಪ್ ಆಂಗಲ್ ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟ ಬೋಲ್ಡ್ ಬ್ಯೂಟಿ ಭೂಮಿ ಪಡ್ನೇಕರ್, ಟ್ರೋಲ್ ಆದ ಬ್ಯೂಟಿ..!