Film News

ವಿಚ್ಚೇದನಕ್ಕೆ ಮುಂದಾದ ಮತ್ತೋರ್ವ ತೆಲುಗು ನಟಿ, ಪತಿಯೊಂದಿಗೆ ವಿಬೇಧ ವಿಚ್ಚೇದನ ಆಲೋಚನೆಯಲ್ಲಿ ನಟಿ ಕಲರ್ಸ್ ಸ್ವಾತಿ….!

ಸಿನಿಮಾ ಸೆಲೆಬ್ರೆಟಿಗಳಿಗೆ ಲವ್-ಬ್ರೇಕಪ್, ಮದುವೆ-ವಿಚ್ಚೇದನ ಎಲ್ಲವೂ ಸಾಮಾನ್ಯ ಎಂದು ಹೇಳಬಹುದಾಗಿದೆ. ಅವರು ಎಷ್ಟು ಬೇಗ ಪ್ರೀತಿಗೆ ಬೀಳುತ್ತಾರೋ ಅದೇ ಸ್ಪೀಡ್ ನಲ್ಲಿ ಬ್ರೇಕಪ್ ಸಹ ಮಾಡಿಕೊಳ್ಳುತ್ತಾರೆ. ಈಗಾಗಲೇ ಅನೇಕ ನಟಿಯರು ಪ್ರೀತಿಸಿ ಮದುವೆಯಾಗಿ ವಿಚ್ಚೇದನದ ಹಾದಿಯಲ್ಲಿ ಸಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಮೆಗಾ ಕುಟುಂಬದ ನಿಹಾರಿಕ ವಿಚ್ಚೇದನ ಪಡೆದುಕೊಂಡಿದ್ದು ನಾವು ಕೇಳಿದ್ದೇವೆ. ಇದೀಗ ತೆಲುಗಿನ ಮತ್ತೋರ್ವ ನಟಿ ತನ್ನ ಪತಿಯೊಂದಿಗೆ ವಿಬೇದಗಳ ಕಾರಣದಿಂದ ವಿಚ್ಚೇದನದ ಆಲೋಚನೆಯಲ್ಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.

ತೆಲುಗಿನ ಅನೇಕ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡಂತಹ ಕಲರ್ಸ್ ಸ್ವಾತಿ ತನ್ನದೇ ಆದ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಇದೀಗ ಆಕೆ ತನ್ನ ಪತಿಯೊಂದಿಗೆ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇತ್ತೀಚಿಗೆ ಪ್ರತಿಯೊಬ್ಬರ ವೈಯುಕ್ತಿಕ ಜೀವನದ ಬಗ್ಗೆ ಸೋಷಿಯಲ್ ಮಿಡಿಯಾ ಹೊರಹಾಕುತ್ತಿದೆ ಎಂದು ಹೇಳಬಹುದು. ಅನೇಕರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸೋಷಿಯಲ್ ಮಿಡಿಯಾವನ್ನು ಬಳಸಿಕೊಳ್ಳುತ್ತಿದ್ದಾರೆ. ಇದೀಗ ವಿಚ್ಚೇದನದ ಪಡೆದುಕೊಳ್ಳುವ ಬಗ್ಗೆ ಸಹ ಸೋಷಿಯಲ್ ಮಿಡಿಯಾ ಮೂಲಕ ಹಿಂಟ್ ನೀಡುತ್ತಿರುತ್ತಾರೆ. ಸ್ಟಾರ್‍ ನಟಿ ಸಮಂತಾ, ನಿಹಾರಿಕಾ, ಶ್ರೀಜಾ ರವರು ಇದಕ್ಕೆ ಒಳ್ಳೆಯ ಉದಾಹರಣೆ ಎಂದೇ ಹೇಳಬಹುದಾಗಿದೆ. ಸಮಂತಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಿಂದ ಅಕ್ಕಿನೇನಿ ಎಂಬ ಹೆಸರನ್ನು ತೆಗೆದು ಹಾಕಿದ್ದು, ನಿಹಾರಿಕಾ ವಿಚ್ಚೇದನದಲ್ಲೂ ಸಹ ಇದೇ ರೀತಿಯಲ್ಲಿ ಪೊಟೊಗಳನ್ನು ಡಿಲೀಟ್ ಮಾಡುವ ಮೂಲಕ ಹಿಂಟ್ ನೀಡಲಾಗಿತ್ತು. ಅದೇ ಮಾದರಿಯಲ್ಲಿ ಚಿರಂಜೀವಿ ಪುತ್ರಿ ಶ್ರೀಜಾ ಸಹ ತನ್ನ ಸೋಷಿಯಲ್ ಮಿಡಿಯಾ ಖಾತೆಯಿಂದ ತನ್ನ ಪತಿಯ ಹೆಸರನ್ನು ತೆಗೆದು ಹಾಕಿದರು.

ಇದೀಗ ತೆಲುಗು ನಟಿ ಕಲರ್ಸ್ ಸ್ವಾತಿ ಸಹ ಇದೇ ಮಾದರಿಯಲ್ಲಿ ಹಿಂಟ್ ಕೊಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಸ್ವಾತಿ ತನ್ನ ಇನ್ಸ್ಟಾ ಖಾತೆಯಿಂದ ಮದುವೆ ಪೊಟೋಗಳನ್ನು ಡಿಲೀಟ್ ಮಾಡಿದ್ದಾರೆ. ಈ ಕಾರಣದಿಂದ ಸ್ವಾತಿ ತನ್ನ ಪತಿಯೊಂದಿಗೆ ಬೇರೆಯಾಗಲಿದ್ದಾರೆ ಎಂಬ ಸುದ್ದಿಗಳು ವೈರಲ್ ಆಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ ಸಹ ಸೋಷಿಯಲ್ ಮಿಡಿಯಾ ಸೇರಿದಂತೆ ಸಿನಿವಲಯದಲ್ಲಿ ಸಖತ್ ವೈರಲ್ ಆಗಿದೆ. ಕಳೆದ 2018 ರಲ್ಲಿ ಸ್ವಾತಿ ತನ್ನ ಪ್ರಿಯಕರ ವಿಕಾಸ್ ವಾಸು ಎಂಬಾತನನ್ನು ವಿವಾಹವಾದರು. ಮದುವೆಯ ಬಳಿಕ ಆಕೆ ವಿದೇಶಗಳಲ್ಲಿ ಸೆಟಲ್ ಆದರು. ಮೂಲತಃ ವಿಕಾಸ್  ಪೈಲಟ್ ಆದ ಹಿನ್ನೆಲೆಯಲ್ಲಿ ಅವರು ವಿದೇಶದಲ್ಲಿ ಸೆಟಲ್ ಆಗಿದ್ದರು.

ಇನ್ನೂ ಕಳೆದ ವರ್ಷ ಸ್ವಾತಿ ಪಂಚತಂತ್ರ ಎಂಬ ಸಿನೆಮಾದ ಮೂಲಕ ಕಮ್ ಬ್ಯಾಕ್ ಮಾಡಿದರು. ಸದ್ಯ ಆಕೆ ಮತ್ತೆ ಸಿನೆಮಾಗಳಲ್ಲಿ ಆಕ್ಟಿವ್ ಆಗಿದ್ದಾರೆ. ಆಕೆಯ ಕೈಯಲ್ಲಿ ಎರಡು ಸಿನೆಮಾಗಳಿವೆ. ತೆಲುಗು, ತಮಿಳು ಹಾಗೂ ಮಲಯಾಳಂ ನಲ್ಲಿ ಕೆಲವು ಸಿನೆಮಾಗಳನ್ನು ಮಾಡಿದ್ದಾರೆ. ಸದ್ಯ ಆಕೆ ಕೆರಿಯರ್‍ ಮೇಲೆ ಪೋಕಸ್ ಇಟ್ಟು ಇಂಡಿಯಾದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top