ಕಾಲ್ನಡಿಗೆ ಮೂಲಕ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸುರೇಖಾವಾಣಿ, ತಿಮ್ಮಪ್ಪನಿಗೆ ತಲೆಕೂದಲು ಸಮರ್ಪಿಸಿದ ಸುರೇಖಾವಾಣಿ…!

Follow Us :

ತೆಲುಗು ಸಿನಿರಂಗದಲ್ಲಿ ಅನೇಕ ಮಹಿಳಾ ಕಲಾವಿದರು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸಣ್ಣ ಪುಟ್ಟ ಕಲಾವಿದರೂ ಸಹ ದೊಡ್ಡದಾಗಿಯೇ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಸೀನಿಯರ್‍ ನಟಿ ಸುರೇಖಾವಾಣಿ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಹಾಟ್ ವಿಡಿಯೋ, ರೀಲ್ಸ್, ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಸೆಳೆಯುತ್ತಿರುತ್ತಾರೆ. ಇದೀಗ ಆಕೆ ಕಾಲ್ನಡಿಗೆಯ ಮೂಲಕ ತಿರುಮಲಕ್ಕೆ ಹೋಗಿ ಅಲ್ಲಿ ದೇವರಿಗೆ ತಲೆ ಕೂದಲು ಸಮರ್ಪಿಸಿದ್ದಾರೆ.

ಜ.7 ರಂದು ಸೀನಿಯರ್‍ ನಟಿ ಸುರೇಖಾವಾಣಿ ತಿರುಮಲದಲ್ಲಿ ನೆಲೆಸಿರುವ ವೆಂಕಟೇಶ್ವರನ ದರ್ಶನ ಪಡೆದುಕೊಂಡಿದ್ದಾರೆ. ತನ್ನ ಮಗಳೊಂದಿಗೆ ಆಕೆ ಕಾಲ್ನಡಿಗೆಯ ಮೂಲಕ ತಿರುಮಲಕ್ಕೆ ಹೋಗಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ತನ್ನ ತಲೆಕೂದಲನ್ನು ಸಮರ್ಪಿಸಿದ್ದಾರೆ. ಬಳಿಕ ದೇವರ ದರ್ಶನ ಪಡೆದಿದ್ದಾರೆ. ಈ ಸಂಬಂಧ ಸುರೇಖಾವಾಣಿ ಪೊಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋ ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಇಲ್ಲಿಯವರೆಗೂ ಗ್ಲಾಮರಸ್ ಆಗಿ ಕಾಣಿಸಿಕೊಂಡ ಸುರೇಖಾವಾಣಿ ಇದೀಗ ತಲೆ ಕೂದಲು ಇಲ್ಲದೇ ಕಾಣಿಸಿಕೊಂಡಿದ್ದು, ಆಕೆಯ ಲೇಟೆಸ್ಟ್ ಲುಕ್ಸ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಕ್ಯಾರೆಕ್ಟರ್‍ ಆರ್ಟಿಸ್ಟ್ ಸುರೇಖಾ ವಾಣಿ ಬಗ್ಗೆ ಅಷ್ಟೊಂದು ಪರಿಚಯದ ಅಗತ್ಯವಿಲ್ಲ. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಆಕೆ ಹಾಗೂ ತನ್ನ ಪುತ್ರಿ ಸುಪ್ರೀತಾ ಜೊತೆಗೆ ಸೇರಿ ಸೋಷಿಯಲ್ ಮಿಡಿಯಾದಲ್ಲಿ ಹಂಗಾಮ ಸೃಷ್ಟಿಸುತ್ತಿರುತ್ತಾರೆ. ವೇಕೇಷನ್, ಶಾಪಿಂಗ್ ಸೇರಿದಂತೆ ಅನೇಕ ಕಡೆ ಇಬ್ಬರೂ ಜೊತೆಗೆ ಹೋಗಿ ಡ್ಯಾನ್ಸ್ ಮಾಡುತ್ತಾ, ಗ್ಲಾಮರಸ್ ಪೊಟೋಗಳನ್ನು, ರೀಲ್ಸ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ತಾಯಿ ಮಗಳು ಪೈಪೋಟಿಗೆ ಬಿದ್ದಂತೆ ಗ್ಲಾಮರ್‍ ಶೋ ಮಾಡುತ್ತಿರುತ್ತಾರೆ. ಜೊತೆಗೆ ಅವರ ಪೋಸ್ಟ್ ಗಳ ಕಾರಣದಿಂದ ಇಬ್ಬರೂ ಟ್ರೋಲಿಂಗ್ ಗೆ ಸಹ ಗುರಿಯಾಗುತ್ತಿರುತ್ತಾರೆ. ಆದರೆ ಟ್ರೋಲ್ ಗಳು ಮಿತಿಮೀರಿದರೇ ಸ್ಟ್ರಾಂಗ್ ಆಗಿಯೇ ಕೌಂಟರ್‍ ಸಹ ನೀಡುತ್ತಿರುತ್ತಾರೆ.