ಡಾಲಿ ಧನಂಜಯ್ ತುಂಭಾ ಪೋಲಿ ಎಂದ ಸ್ಯಾಂಡಲ್ ವುಡ್ ಸ್ಟಾರ್ ನಟಿ ಸಪ್ತಮಿ ಗೌಡ…..!

ಕನ್ನಡ ಸಿನಿರಂಗದಲ್ಲಿ ಅನೇಕ ಹಿಟ್ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ನಟರಲ್ಲಿ ಡಾಲಿ ಧನಂಜಯ್ ಸಹ ಒಬ್ಬರಾಗಿದ್ದಾರೆ. ಕನ್ನಡ ಕಿರುತೆರೆಯ ಭಾರಿ ಮನ್ನಣೆ ಪಡೆದುಕೊಂಡ ಶೋ ಗಳಲ್ಲಿ ಒಂದಾದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್ ಭಾಗವಹಿಸಿದ್ದಾರೆ. ಈ ವೇಳೆ ಧನಂಜಯ್ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿನಿರಂಗದಲ್ಲಿ ತಾನು ಸ್ಟಾರ್‍ ಆಗಲು ಪಟ್ಟಂತಹ ಕಷ್ಟ, ಅನೇಕ ಕಷ್ಟಗಳನ್ನು ಎದುರಿಸಿ ಸ್ಟಾರ್‍ ಆಗಿದ್ದ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಹಾದಿಯಲ್ಲೇ ಕಾಂತಾರ ಬ್ಯೂಟಿ ಸಪ್ತಮಿ ಗೌಡ ಡಾಲಿ ಧನಂಜಯ್ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ.

ಸ್ಯಾಂಡಲ್ ವುಡ್ ನಟ ಧನಂಜಯ್ ಹಾಗೂ ನಟಿ ಸಪ್ತಮಿ ಗೌಡ ಪಾಪ್ ಕಾರ್ನ್ ಮಂಕಿ ಟೈಗರ್‍ ಎಂಬ ಸಿನೆಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಈ ಸಿನೆಮಾದ ಮೂಲಕವೇ ಸಪ್ತಮಿ ಗೌಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾಗಿಂತಲೂ ಮುಂಚೆಯಿಂದಲೇ ಇಬ್ಬರ ನಡುವೆ ಸ್ನೇಹಬಾಂದವ್ಯ ಇತ್ತು. ಇದೀಗ ಸಪ್ತಮಿ ಗೌಡ ಡಾಲಿ ಧನಂಜಯ್ ರವರ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ಹೇಳಿಕೆಗಳನ್ನು ನೀಡಿದ್ದಾರೆ. ಎಲ್ಲರೂ ತಿಳಿದಂತೆ ಧನಂಜಯ್ ಮುಗ್ದ ಅಲ್ಲ ತುಂಬಾ ಪೋಲಿ ಹುಡುಗ ಎಂದಿದ್ದಾರೆ. ಜೊತೆಗೆ ಅವರ ಒಳ್ಳೆಯ ಮನಸ್ಸಿನ ಬಗ್ಗೆ ಸಹ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ಡಾಲಿ ಜೊತೆಗೆ ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಬಂದರು, ಆಗ ಧನಂಜಯ್ ಸಪ್ತಮಿ ಸಹ ಇದ್ದಾರೆ ಪೊಟೋ ತೆಗೆದುಕೊಳ್ಳಿ ಎಂದಿದ್ದರು. ಆಗ ನಾನು ನಂದು ಯಾಕೆ ಎಂದೇ, ಅದಕ್ಕೆ ಎಲ್ಲಾ ನಮ್ಮ ಕುಟುಂಬದವರೇ ಎಂದು ಡಾಲಿ ಹೇಳಿದ್ದರು. ಧನಂಜಯ್ ರವರಲ್ಲಿ ತುಂಬಾ ಒಳ್ಳೆಯ ಮನಸ್ಸಿದೆ ಎಂದು ಸಪ್ತಮಿ ಡಾಲಿ ಧನಂಜಯ್ ರವರನ್ನು ಗುಣಗಾನ ಮಾಡಿದ್ದಾರೆ.

ಬಳಿಕ ಧನಂಜಯ್ ಸಹ ಸಪ್ತಮಿ ಗೌಡ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಪ್ತಮಿ ಕಾಂತಾರ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದೀರಾ, ಇಡೀ ಭಾರತ ಇದೀಗ ನಿಮ್ಮನ್ನು ಗುರ್ತಿಸುತ್ತಿದೆ.  ಈ ಕಾರ್ಯಕ್ರಮಕ್ಕೆ ಸಪ್ತಮಿ ಬರುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ಆಕೆ ಬಂದಿದ್ದು ನನಗೆ ಸರ್ಪೈಸ್ ಎಂದು ಹೇಳಿದ್ದಾರೆ. ಇದೇ ವೇಳೆ ಡಾಲಿ ಹೆಸರನ್ನು ಸಪ್ತಮಿ ತಮ್ಮ ಪೋನಿನಲ್ಲಿ ಏನಂತ ಸೇವ್ ಮಾಡಿಕೊಂಡಿದ್ದಾರೆ ಎಂಬುದು ಸಹ ಬಹಿರಂಗವಾಗಿದೆ.  ಡಾಲಿ ಧನಂಜಯ್ ಹೆಸರನ್ನು ಸಪ್ತಮಿ ತನ್ನ ಪೋನಿನಲ್ಲಿ ದಕ್ಷಿಣ ಪತೇಶ್ವರ ಎಂದು ಸೇವ್ ಮಾಡಿಕೊಂಡಿದ್ದಾರಂತೆ. ಅದಕ್ಕೆ ಸಪ್ತಮಿ ಈಗ ಬದಲಿಸುತ್ತೇನೆ ಎಂದರೇ ಬೇಡ ಹೀಗೆ ಇರಲಿ ಎಂದು ಹೇಳಿದ್ದರು. ಆ ಕಾರಣದಿಂದ ಅದೇ ರೀತಿಯಲ್ಲೇ ಅವರ ನಂಬರ್‍ ಇದೆ ಎಂದಿದ್ದಾರೆ.

ಇನ್ನೂ ಸಪ್ತಮಿ ಗೌಡ ಮೊದಲನೇ ಸಿನೆಮಾದ ಮೂಲಕವೇ ಭಾರಿ ಕ್ರೇಜ್ ಪಡೆದುಕೊಂಡರು. ಈ ಸಿನೆಮಾದ ಬಳಿಕ ಆಕೆಗೆ ಬಿಗ್ ಬ್ರೇಕ್ ನೀಡಿದ್ದು ಮಾತ್ರ ಕಾಂತಾರ ಸಿನೆಮಾ ಎನ್ನಬಹುದಾಗಿದೆ. ಈ ಸಿನೆಮಾದ ಬಳಿಕ ಆಕೆಗೆ ಭಾರಿ ಆಫರ್‍ ಗಳು ಹರಿದು ಬರುತ್ತಿವೆ. ಈ ಹಾದಿಯಲ್ಲೇ ಆಕೆ ದಿ ವ್ಯಾಕ್ಸಿನ್ ವಾರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಡಾಲಿ ಧನಂಜಯ್ ಸಹ ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ.