ಬಿಳಿ ಬಣ್ಣದ ಡ್ರೆಸ್ ನಲ್ಲಿ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದ ಸಂಯುಕ್ತಾ ಹೆಗ್ಡೆ, ಪ್ಯಾಂಟ್ ಹಾಕಮ್ಮ ಎಂದ ನೆಟ್ಟಿಗರು…..!

ಸ್ಯಾಂಡಲ್ ವುಡ್ ನಲ್ಲಿ ಕಿರಿಕ್ ಹುಡುಗಿ ಎಂದೇ ಕರೆಯಲಾಗುವ ಸಂಯುಕ್ತಾ ಹೆಗಡೆ ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಕಿರಿಕ್ ಪಾರ್ಟಿ ಎಂಬ ಸಿನೆಮಾ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡ ಈ ನಟಿ, ಬಳಿಕ ಸಿನೆಮಾಗಳಲ್ಲಿ ಅಷ್ಟು…

ಸ್ಯಾಂಡಲ್ ವುಡ್ ನಲ್ಲಿ ಕಿರಿಕ್ ಹುಡುಗಿ ಎಂದೇ ಕರೆಯಲಾಗುವ ಸಂಯುಕ್ತಾ ಹೆಗಡೆ ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಕಿರಿಕ್ ಪಾರ್ಟಿ ಎಂಬ ಸಿನೆಮಾ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡ ಈ ನಟಿ, ಬಳಿಕ ಸಿನೆಮಾಗಳಲ್ಲಿ ಅಷ್ಟು ಜನಪ್ರಿಯತೆ ಪಡೆದುಕೊಳ್ಳಲಿಲ್ಲ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದ ಸಂಯುಕ್ತ ರವರ ಲೇಟೆಸ್ಟ್ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಸಖತ್ ಟ್ರೋಳ್ ಮಾಡುತ್ತಿದ್ದಾರೆ. ಪ್ಯಾಂಟ್ ಹಾಕಮ್ಮ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಕನ್ನಡ ಸಿನಿರಂಗದ ಬೋಲ್ಡ್ ಬ್ಯೂಟಿ ಸಂಯುಕ್ತಾ ಹೆಗ್ಡೆ ಬಾಲಿವುಡ್ ನಟಿಯರನ್ನೂ ಮೀರಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಚಂದನವನದಲ್ಲಿ ಸಂಯುಕ್ತಾ ಹೆಗ್ಡೆ ನೇರವಾಗಿ ನಡೆದುಕೊಳ್ಳುವಂತಹ ನಟಿಯಾಗಿದ್ದಾರೆ. ಆಕೆ ಯಾರಿಗೂ ಸಹ ಭಯಪಡುವುದೇ ಇಲ್ಲ. ತಮ್ಮ ಇಷ್ಟದಂತೆ ಜೀವನ ಸಾಗಿಸುತ್ತಿದ್ದಾರೆ. ಸಂಯುಕ್ತಾ ಹೆಗ್ಡೆ ಏನೇ ವಿಚಾರ ಇದ್ದರೂ ಸಹ ನೇರವಾಗಿ ಮಾತನಾಡುವ ವ್ಯಕ್ತಿತ್ವ ಹೊಂದಿದ್ದಾರೆ. ಇನ್ನೂ ಆಕೆ ಹಂಚಿಕೊಳ್ಳುವ ಪೊಟೋಗಳು, ವಿಡಿಯೋಗಳ ಕಾರಣದಿಂದ ಟ್ರೋಲ್ ಸಹ ಮಾಡುತ್ತಿರುತ್ತಾರೆ. ಇದೀಗ ಆಕೆ ಕನ್ನಡದ ಜಂಗ್ಲಿ ಎಂಬ ಸಿನೆಮಾದಲ್ಲಿನ ನೀನೆಂದರೇ ನನ್ನೊಳಗೆ ಎಂಬ ಹಾಡಿಗೆ ಬಿಗ್ ಬಾಸ್ ಸ್ಪರ್ಧಿ ಕಿಶನ್ ಹಾಗೂ ಸಂಯುಕ್ತಾ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ.

ದುನಿಯಾ ವಿಜಯ್ ಹಾಗೂ ಐಂದ್ರಿತಾ ರೈ ಕಾಂಬಿನೇಷನ್ ನಲ್ಲಿ ತೆರೆಕಂಡ ಜಂಗ್ಲಿ ಸಿನೆಮಾದ ಸೂಪರ್‍ ಹಿಟ್ ಹಾಡು ನೀನೆಂದರೇ ನನ್ನೊಳಗೆ ಎಂಬ ಹಾಡಿಗೆ ಕಿಶನ್ ಹಾಗೂ ಸಂಯುಕ್ತಾ ಡ್ಯಾನ್ಸ್ ಮಾಡಿದ್ದಾರೆ. ಬಿಳಿ ಬಣ್ಣದ ಡ್ರೆಸ್ ನಲ್ಲಿ ಇಬ್ಬರೂ ರೊಮ್ಯಾಂಟಿಕ್ ಆಗಿ ನೃತ್ಯ ಮಾಡಿದ್ದಾರೆ. ಇಬ್ಬರೂ ತುಂಬಾನೆ ಬೋಲ್ಡ್ ಆಗಿ ನೃತ್ಯ ಮಾಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಶಾಖ್ ಆಗಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ. ಅನೇಕರು ಇದು ಯಾವ ರೀತಿಯ ಡ್ಯಾನ್ಸ್, ಒಳ್ಳೆಯ ಸ್ಪೆಪ್ ಗಳನ್ನು ಹಾಕಿದ್ದಿರಾ ಆದರೆ ಮೈ ತುಂಬಾ ಬಟ್ಟೆ ಹಾಕಮ್ಮ, ಪ್ಯಾಂಟ್ ಹಾಕಮ್ಮ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಈ ಹಿಂದೆ ಕಿಶನ್ ಬಿಳಗಲಿ ದೀಪಿಕಾದಾಸ್, ನಮ್ರತಾ ಗೌಡ ಸೇರಿದಂತೆ ಕೆಲವು ನಟಿಯರ ಜೊತೆಗೆ ಡ್ಯಾನ್ಸ್ ಮಾಡಿದ್ದರು.  ಕೆಲವು ದಿನಗಳ ಹಿಂದೆಯಷ್ಟೆ ಸಂಯುಕ್ತಾ ಹೆಗ್ಡೆ ಬಾಲಿವುಡ್ ಸ್ಟಾರ್‍ ನಟ ರಣಬೀರ್‍ ಕಪೂರ್‍ ರವರನ್ನು ಭೇಟಿಯಾಗಿದ್ದರು. ಈ ಪೊಟೋವನ್ನು ಸಹ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಸದ್ಯ ಸಂಯುಕ್ತಾ ಕ್ರೀಂ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನೆಮಾ ಬಿಡುಗಡೆಯಾಗಲಿದೆ.