ಗಂಡನಿಗೆ ಬೈ ಹೇಳಿ ತನ್ನ ಗೆಳತಿಯನ್ನು ಮದುವೆಯಾದ ಮಹಿಳೆ, ಗರ್ಭಿಣಿ ಗೆಳತಿಗೆ ತಿಲಕ ಹಚ್ಚಿ ಮದುವೆ, ಬೆಚ್ಚಿ ಬಿದ್ದ ಕುಟುಂಬಸ್ಥರು….!

Follow Us :

ಉತ್ತರಪ್ರದೇಶದ ಬದೌನ್ ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆಯಾಗಿದ್ದ ಮಹಿಳೆಯೊಬ್ಬರು ತನ್ನ ಪತಿಗೆ ಗುಡ್ ಬೈ ಹೇಳಿ ದೇವಸ್ಥಾನದಲ್ಲಿ ತನ್ನ ಗರ್ಭಿಣಿ ಮಹಿಳೆಯ ಹಣೆಗೆ ತಿಲಕ ಹಚ್ಚಿ ಮದುವೆಯಾಗಿ ಮುಂದೆ ನಾವಿಬ್ಬರೂ ಜೊತೆಯಾಗಿ ಬದುಕುವುದಾಗಿ ಹೇಳಿದ್ದಾರೆ. ಲೆಸ್ಬಿಯನ್ ವಿವಾಹವಾದ ಈ ಮಹಿಳೆಯರ ನಿರ್ಧಾರ ಕಂಡು ಅವರವರ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ.

ಉತ್ತರ ಪ್ರದೇಶದ ಈ ಇಬ್ಬರೂ ಬೇರೆ ಬೇರೆ ಗ್ರಾಮಗಳಲ್ಲಿ ವಾಸ ಮಾಡುತ್ತಿದ್ದರು. ಮದುವೆಯಾದ ಇಬ್ಬರೂ ಯುವತಿಯರೂ ದಗಂಜ್ ಪ್ರದೇಶದಲ್ಲಿನ ಜವಳಿ ಕಂಪನಿಯಲ್ಲಿ ಸೇಲ್ಸ್ ಗರ್ಲ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿದ್ದರಿಂದ ಅವರಿಬ್ಬರಿಗೂ ಒಂದೆ ಕೊಠಡಿಯನ್ನು ಸಹ ಕಂಪನಿಯವರು ನೀಡಿದ್ದರು. ಒಂದೇ ಕೊಠಡಿಯಲ್ಲಿ ಇದ್ದಿದ್ದರಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಈ ಮಹಿಳೆಯರಲ್ಲೊಬ್ಬರಿಗೆ ಕೆಲವು ದಿನಗಳ ಹಿಂದೆಯಷ್ಟೆ ಮದುವೆ ಸಹ ಆಗಿದೆ. ಮದುವೆಯ ಬಳಿಕವೂ ಸಹ ಇಬ್ಬರೂ ಮಹಿಳೆಯರು ಸಂಪರ್ಕದಲ್ಲೇ ಇದ್ದರು ಎನ್ನಲಾಗಿದೆ. ಇನ್ನೂ ಮದುವೆಯಾದ ಯುವತಿಗೆ ಗಂಡನಿಂದ ನಿತ್ಯ ಕಿರುಕುಳ ಇತ್ತಂತೆ. ಈ ಬಗ್ಗೆ ತನ್ನ ಗೆಳತಿಗೂ ಹೇಳಿಕೊಂಡಿದ್ದಳಂತೆ. ಈ ಕಾರಣದಿಂದ ಇಬ್ಬರೂ ಒಂದಾಗಿ ಜೀವನ ನಡೆಸಬೇಕೆಂದು ತೀರ್ಮಾನ ತೆಗೆದುಕೊಂಡರಂತೆ.

ಅವರಿಬ್ಬರ ತೀರ್ಮಾನದಂತೆ ಕಳೆದ ಸೆ.26 ರಂದು ಬೆಳಿಗ್ಗೆ ಮನೆಯಿಂದ ಹೊರಟು ಬರೇಲಿಗೆ ಬಂದು ಅಲ್ಲಿನ ದೇವಸ್ಥಾನದಲ್ಲಿ ಹಾರಗಳನ್ನು ಬದಲಿಸಿಕೊಂಡು ಹಣೆಗೆ ಕುಂಕುಮ ಇಟ್ಟು ಮದುವೆಯಾಗಿದ್ದಾರೆ. ಮದುವೆಯ ನಂತರ ಅವರಿಬ್ಬರು ತಮ್ಮ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಅವರಿಬ್ಬರ ವಿವಾಹದ ಸುದ್ದಿ ಎಲ್ಲರಿಗೂ ತಿಳಿದು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಓರ್ವ ಯುವತಿ ನಾನು ಗಂಡ ನೋಡಿಕೊಳ್ಳುವಂತೆ ಆಕೆಯನ್ನು ನೋಡಿಕೊಳ್ಳುತ್ತೇನೆ ಸಂತೋಷದಿಂದ ಜೀವನ ಸಾಗಿಸುತ್ತೇವೆ ಎಂದು ಹೇಳಿದ್ದಾರೆ. ಇನ್ನೂ ಗಂಡನಿಂದ ದೂರವಾದ ಗರ್ಭಿಣಿ ಮಹಿಳೆ ನನ್ನ ಗಂಡ ನನ್ನ ಮೇಲೆ ವಿನಾ ಕಾರಣ ಅಕ್ರಮ ಸಂಬಂಧವಿದೆ ಎಂದು ದೂರುತ್ತಿದ್ದ. ಆದ್ದರಿಂದ ನಾನು ನನ್ನ ಸ್ನೇಹಿತೆಯನ್ನೇ ಮದುವೆಯಾಗಿದ್ದೇನೆ. ನನಗೆ ಬೇರೆ ಯಾವ ಹುಡುಗನೊಂದಿಗೂ ಸಂಬಂಧವಿಲ್ಲ ಎಂದಿದ್ದಾರೆ. ಇನ್ನೂ ಮಹಿಳೆಯರಿಬ್ಬರ ಈ ಮದುವೆ ಎರಡೂ ಕುಟುಂಬಸ್ಥರನ್ನು ಶಾಕ್ ಆಗುವಂತೆ ಮಾಡಿದೆ.