ಬಾಲಿವುಡ್ ಹಾಟ್ ಬ್ಯೂಟಿ ಊರ್ವಶಿ ರೌಟೆಲಾ ಸ್ಪೇಷಲ್ ರೋಲ್ ಗಳನ್ನು ಮಾಡುವ ಮೂಲಕ ಭಾರಿ ಫೇಂ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಸೌತ್ ಸಿನಿಮಾಗಳಲ್ಲಿ ಸಾಲು ಸಾಲಾಗಿ ನಟಿಸುತ್ತಾ ಮತಷ್ಟು ಫೇಂ ಪಡೆದುಕೊಂಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ವಾಲ್ತೇರು ವೀರಯ್ಯ ಎಂಬ ಸಿನೆಮಾದಲ್ಲೂ ಸಹ ಸ್ಪೇಷಲ್ ಸಾಂಗ್ ಮೂಲಕ ರಂಜಿಸಿದ್ದರು. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಾಲು ಸಾಲು ಪೊಟೋಶೂಟ್ಸ್ ಮೂಲಕ ಭಾರಿ ಫೇಂ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ.
ನಟಿ ಊರ್ವಶಿ ರೌಟೆಲಾ ಸೌತ್ ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿಯವರ ವಾಲ್ತೇರು ವೀರಯ್ಯ, ಅಖಿಲ್ ಜೊತೆಗೆ ಏಜೆಂಟ್, ಪವನ್ ಕಲ್ಯಾಣ್ ರವರ ಬ್ರೋ ಸಿನೆಮಾದಲ್ಲಿ ಸ್ಪೇಷಲ್ ಹಾಡುಗಳ ಮೂಲಕ ಕಾಣಿಸಿಕೊಂಡರು. ಗ್ಲಾಮರಸ್ ಸ್ಟೆಪ್ಸ್ ಹಾಕುವ ಮೂಲಕ ಯುವಕರ ಕನಸಿನ ರಾಣಿಯಾದರು. ಈ ಹಾಡುಗಳು ಭಾರಿ ಸಕ್ಸಸ್ ಕಂಡ ಹಿನ್ನೆಲೆಯಲ್ಲಿ ಆಕೆಗೆ ಸೌತ್ ನಲ್ಲಿ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಈ ಹಿನ್ನೆಲೆಯಲ್ಲಿ ಆಕೆ ಭಾರಿ ಡಿಮ್ಯಾಂಡ್ ಸಹ ಮಾಡುತ್ತಿದ್ದಾರಂತೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಸಹ ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಸದಾ ಮಾಡ್ರನ್ ಡ್ರೆಸ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಊರ್ವಶಿ ರೌಟೆಲಾ ಇದೀಗ ಟ್ರೆಡಿಷನಲ್ ಆಗಿ ಯುವರಾಣಿಯಂತೆ ಕಾಣಿಸಿಕೊಂಡಿದ್ದಾರೆ.
ಇನ್ನೂ ನಟಿ ಊರ್ವಶಿ ರೌಟೆಲಾ Hum Toh Deewane ಎಂಬ ಪ್ರವೈಟ್ ಆಲ್ಬಂ ನಲ್ಲಿ ನಟಿಸಿದ್ದು, ಸೆ.1 ರಂದು ಬಿಡುಗಡೆಯಾಗಿದೆ. ಇನ್ನೂ ಈ ಆಲ್ಬಂ ಪ್ರಮೋಷನ್ ನಿಮಿತ್ತ ಆಕೆ ಟ್ರೆಡಿಷನಲ್ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ಟೈಟ್ ಫಿಟ್, ಮಾಡ್ರನ್ ಡ್ರೆಸ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದ ಊರ್ವಶಿ ಇದೀಗ ಲೆಹಂಗಾದಲ್ಲಿ ಯುವರಾಣಿಯಂತೆ ಕಾಣಿಸಿಕೊಂಡಿದ್ದಾರೆ. ಯುವರಾಣಿಯಂತೆ ಕಾಣಿಸಿಕೊಂಡು ತನ್ನ ಸೌಂದರ್ಯದ ಮೂಲಕ ಎಲ್ಲರನ್ನೂ ಮಂತ್ರಮುಗ್ದರನ್ನಾಗಿ ಮಾಡಿದ್ದಾರೆ. ಇನ್ನೂ ಆಕೆಯ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಕ್ರೇಜಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.
ಇನ್ನೂ ಊರ್ವಶಿ ರೌಟೆಲಾ ಕೊನೆಯದಾಗಿ ಸ್ಕಂಧ ಎಂಬ ಸಿನೆಮಾದಲ್ಲಿ ಕಲ್ಟ್ ಮಾಮಾ ಎಂಬ ಸ್ಪೇಷಲ್ ಸಾಂಗ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಹಾಡು ಯೂಟ್ಯೂಬ್ ನಲ್ಲಿ ಭಾರಿ ಸಂಚಲನ ಕ್ರಿಯೇಟ್ ಮಾಡಿತ್ತು. ಸದ್ಯ ಆಕೆ ದಿಲ್ ಗೈ ಗೆರೆ ಎಂಬ ಹಿಂದಿ ಸಿನೆಮಾದಲ್ಲಿ ಹಾಗೂ ಬ್ಲಾಕ್ ರೋಜ್ ಎಂಬ ತೆಲುಗು ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ.
