Film News

ಮೈಮೇಲಿನ ಟ್ಯಾಟು ಸಂಪೂರ್ಣವಾಗಿ ಅಳಿಸಿದ ಸಮಂತಾ, ರೂಮರ್ ಗಳಿಗೆ ಕೌಂಟರ್ ಕೊಟ್ಟ ಸ್ಯಾಮ್….!

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಹಾಗೂ ತೆಲುಗು ನಟ ನಾಗಚೈತನ್ಯ ಸುಮಾರು ವರ್ಷಗಳ ಪ್ರೀತಿಸಿ ಮದುವೆಯಾದರು. ಆದರೆ ಮದುವೆಯಾದ ಕೆಲವೇ ವರ್ಷಗಳಲ್ಲೇ ಅವರು ವಿಬೇದಗಳ ಕಾರಣದಿಂದ ವಿಚ್ಚೇದನ ಪಡೆದುಕೊಂಡು ದೂರವಾದರು. ಅಲ್ಲಿಂದ ಅವರ ವಿಚ್ಚೇದನದ ಬಗ್ಗೆ ಅನೇಕ ರೂಮರ್‍ ಗಳು ಇಂದಿಗೂ ಸಹ ಕೇಳಿಬರುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೆ ಸಮಂತಾ ಹಾಗೂ ನಾಗಚೈತನ್ಯ ಮತ್ತೆ ಒಂದಾಗಲಿದ್ದಾರೆ ಎಂಬ ರೂಮರ್‍ ಗಳು ಕೇಳಿಬಂತು. ಇದೀಗ ಆಕೆ ತನ್ನ ಮೈಮೇಲಿರುವ ಚೈತು ಟ್ಯಾಟೂ ಸಂಪೂರ್ಣವಾಗಿ ಅಳಿಸುವ ಮೂಲಕ ರೂಮರ್‍ ಗಳಿಗೆ ಕೌಟರ್‍ ಕೊಟ್ಟಿದ್ದಾರೆ.

ತೆಲುಗು ಸಿನಿರಂಗದಲ್ಲಿ ಕ್ಯೂಟ್ ಜೋಡಿಯೆಂದೇ ಸಮಂತಾ ಹಾಗೂ ನಾಗಚೈತನ್ಯ ಜೋಡಿಯನ್ನು ಕರೆಯಲಾಗುತ್ತಿತ್ತು. ಸುಮಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಈ ಜೋಡಿ ವಿಚ್ಚೇದನ ಪಡೆದುಕೊಂಡು ಎಲ್ಲರೂ ಶಾಕ್ ಆಗುವಂತೆ ಮಾಡಿದ್ದರು. ವಿಚ್ಚೇದನ ಪಡೆದುಕೊಂಡಾಗಿನಿಂದ ಸಮಂತಾ ರವರನ್ನು ಕೆಲವು ಮಂದಿ ಸಪೋರ್ಟ್ ಮಾಡಿದ್ರೆ, ನಾಘಚೈತನ್ಯರವರನ್ನು ಮತ್ತೆ ಕೆಲವರು ಸಪೋರ್ಟ್ ಮಾಡಿದರು. ಇನ್ನೂ ಸಮಂತಾ ತನ್ನ ಮೈ ಮೇಲೆ ಮೂರು ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದರು. ಚೈತನ್ಯ ಜೊತೆಗೆ ನಟಿಸಿದ ಮೊದಲನೇ ಸಿನೆಮಾ ಏ ಮಾಯ ಚೆಸಾವೇ ಎಂಬ ಸಿನೆಮಾದ ನೆನಪಿನಲ್ಲಿ YMC ಎಂಬ ಒಂದು ಟ್ಯಾಟು. ಮತ್ತೊಂಡು ಮಣಿಕಟ್ಟು ಮೇಲೆ ಬಾಣದಂತಹ ಗುರುತು ಇರೋ ರೋಮನ್ ಸಿಂಬಲ್ ಇದೆ. ಅದನ್ನು ಡಿಕೋಡ್ ಮಾಡಿದ್ರೆ ಅವರ ಮ್ಯಾರೇಜ್ ಡೇಟ್ ಬರುತ್ತಂತೆ. ಇದರ ಜೊತೆಗೆ ಸಮಂತಾ ರಿಬ್ಸ್ ಮೇಲೆ ಚೈ ಎಂಬ ಅಕ್ಷರದ ಟ್ಯಾಟೂ ಇದೆ.

ಇನ್ನೂ ಕೆಲವು ದಿನಗಳಿಂದ ಸಮಂತಾ ಹಾಗೂ ನಾಗಚೈತನ್ಯ ಮತ್ತೆ ಒಂದಾಗಲಿದ್ದಾರೆ ಎಂಬ ರೂಮರ್‍ ಗಳು ಕೇಳಿಬರುತ್ತಿತ್ತು. ಈ ನಡುವೆ ಸಮಂತಾ ತನ್ನ ಲೇಟೆಸ್ಟ್ ಪೊಟೋಗಳ ಮೂಲಕ ಆ ರೂಮರ್‍ ಗಳಿಗೆ ಕೌಂಟರ್‍ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇತ್ತಿಚಿಗೆ ಆಕೆ ಹಂಚಿಕೊಂಡ ಪೊಟೋಗಳಲ್ಲಿ ನೆಟ್ಟಿಗರು ಸಮಂತಾ ಮೈಮೇಲಿರುವ ಚೈತನ್ಯ ಟ್ಯಾಟೂ ಅನ್ನು ಅಳಿಸಿಹಾಕಿರುವುದನ್ನು ಗಮನಿಸಿದ್ದಾರೆ. ಸಮಂತಾ ಜೀವನದಲ್ಲಿ ಯಾರೂ ಇಲ್ಲ. ಅವರಿಬ್ಬರ ನಡುವೆ ಯಾವುದೇ ಬಂಧವಿಲ್ಲ ಎಂದು ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ. ಸದ್ಯ ಸಮಂತಾ ತನ್ನ ಜೀವನದಲ್ಲಿ ಸಂಪೂರ್ಣವಾಗಿ ಚೈತನ್ಯರವರನ್ನು ಅಳಿಸಿ ಹಾಕಿದ್ದಾರೆ ಎಂದು, ಆ ಕಾರಣದಿಂದಲೇ ಆಕೆ ಟ್ಯಾಟೂ ಸಹ ಅಳಿಸಿಬಿಟ್ಟಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡುತ್ತಿದ್ದಾರೆ.

ಇನ್ನೂ ವಿಚ್ಚೇದನ ಪಡೆದುಕೊಂಡ ಬಳಿಕ ಸಮಂತಾ ಆ ನೋವಿನಿಂದ ಹೊರಬರಲು ಸಿನೆಮಾಗಳ ಮೇಲೆ ಹೆಚ್ಚು ಪೋಕಸ್ ಇಟ್ಟರು ಎನ್ನಲಾಗಿದೆ. ಇದರ ಜೊತೆಗೆ ಆಕೆ ಮಯೋಸೈಟೀಸ್ ಎಂಬ ವ್ಯಾದಿಗೂ ಸಹ ಗುರಿಯಾಗಿ ತುಂಬಾನೆ ಸಮಸ್ಯೆ ಎದುರಿಸಿದ್ದರು. ಕೊನೆಯದಾಗಿ ಆಕೆ ಖುಷಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದು, ಸಿನೆಮಾ ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ.

Most Popular

To Top