Film News

ವಯಸ್ಸಿನ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ಪ್ರಿಯಮಣಿ, ನಾನು ಇನ್ನೂ ಸೆಕ್ಸಿ ಫಿಗರ್ ಎಂದ ನಟಿ…..!

ಸಿನಿರಂಗದಲ್ಲಿ ಅನೇಕ ನಟಿಯರು ಸಿನೆಮಾಗಳಲ್ಲಿ ಜೋರು ಸದ್ದು ಮಾಡಿ, ವಯಸ್ಸಾದ ಬಳಿಕ ಸಿನಿರಂಗದಿಂದ ದೂರವುಳಿಯುತ್ತಾರೆ. ಆದರೆ ಕೆಲವು ನಟಿಯರು ಮಾತ್ರ ವಯಸ್ಸಾದರೂ ಸಹ ಅನೇಕ ಸಿನೆಮಾಗಳ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಾರೆ. ಈ ಸಾಲಿಗೆ ನಟಿ ಪ್ರಿಯಮಣಿ ಸಹ ಸೇರುತ್ತಾರೆ. ಆಕೆಗೆ ನಲವತ್ತರ ವಯಸ್ಸಾದರೂ ಸಹ ಯಂಗ್ ನಟಿಯಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ತೆರೆಕಂಡ ಬ್ಲಾಕ್ ಬ್ಲಸ್ಟರ್‍ ಜವಾನ್ ಸಿನೆಮಾದಲ್ಲಿ ಸಹ ಪ್ರಿಯಮಣಿ ನಟಿಸಿದ್ದರು. ಇದೀಗ ಆಕೆ ಸಂದರ್ಶನವೊಂದರಲ್ಲಿ ನೀಡಿದ ಕಾಮೆಂಟ್ ಗಳು ಸಖತ್ ವೈರಲ್ ಆಗುತ್ತಿವೆ.

ಸೀನಿಯರ್‍ ನಟಿ ಪ್ರಿಯಮಣಿ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಕೆ ಟ್ರೋಲರ್‍ ಗಳ ಬಗ್ಗೆ ಬಾಡಿ ಶೇಮಿಂಗ್ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಕೆಲವರು ನಟಿಯರ ವಯಸ್ಸಿನ ಬಗ್ಗೆ ಬೇಕೆಂತಲೇ ಟ್ರೋಲ್ ಮಾಡುತ್ತಿರುತ್ತಾರೆ. ಹಿರೋಗಳಿಗೆ ಎಷ್ಟೇ ವಯಸ್ಸಾದರೂ ಸಹ ಅವರ ವಯಸ್ಸಿನ ಬಗ್ಗೆ ಯಾರೂ ಸಹ ಪ್ರಸ್ತಾಪ ಮಾಡೊಲ್ಲ. ಆದರೆ ಸದಾ ಹಿರೋಯಿನ್ ಗಳ ವಯಸ್ಸಿನ ಬಗ್ಗೆ ಮಾತನಾಡುತ್ತಾರೆ. ಪುರುಷ ನಟರಿಗೆ 50 ವರ್ಷ ದಾಟಿದರೂ ಯಾರೂ ಮಾತಾಡೊಲ್ಲಾ. ಆದರೆ ಮಹಿಳೆಯರಿಗೆ 30 ವರ್ಷ ಆದರೇ ಸಾಕು ಆಂಟಿ ಎಂದು ಕರೆಯುತ್ತಾರೆ. ಆ ರೀತಿ ಕರೆಯುವವರಿಗೂ ಸಹ ಆ ವಯಸ್ಸು ಬರುತ್ತದೆ ಎಂದು ಗ್ರಹಿಸುವುದಿಲ್ಲ. ಆದರೆ ನಾನು ಅಂತಹ ಕಾಮೆಂಟ್ ಗಳನ್ನು ಕಿವಿಗೆ ಹಾಕಿಕೊಳ್ಳುವುದೇ ಇಲ್ಲ ಎಂದಿದ್ದಾರೆ.

ನನಗೆ 39 ವರ್ಷ ವಯಸ್ಸು ಎಂದು ಗರ್ವದಿಂದ ಹೇಳುತ್ತೇನೆ. ಇಂದಿಗೂ ಸಹ ನಾನು ಸೆಕ್ಸಿಯಾಗಿ ಕಾಣಿಸುತ್ತೇನೆ. ಸುಂದರವಾಗಿದ್ದೇನೆ ಎಂದು ಭಾವಿಸುತ್ತೇನೆ. ಎಲ್ಲರೂ ನನ್ನನ್ನು ಗುರ್ತಿಸಬೇಕು ಎಂದುಕೊಳ್ಳುವುದಿಲ್ಲ. ನನ್ನ ಮೇಲೆ ನನಗೆ ಇಷ್ಟವಿದೆ. ಯಾವ ರೀತಿಯಲ್ಲಿ ವಿಮರ್ಶೆ ಮಾಡುತ್ತಾರೋ ಅದೇ ರೀತಿ ಹೊಗಳುವವರು ಸಹ ಇರುತ್ತಾರೆ. ಈ ಹಿಂದೆ ಅಂತಹ ಕಾಮೆಂಟ್ ಗಳು ನನ್ನ ಮೇಲೆ ತುಂಬಾ ಪರಿಣಾಮ ಬೀರಿತ್ತು. ನಾವು ಮಾಡುವ ಕೆಲಸಗಳಿಗೆ ಸಂಬಂಧವಿಲ್ಲದೇ ಕೆಲವರು ಟ್ರೋಲ್ ಮಾಡುತ್ತಾರೆ. ಅಂತಹ ಟ್ರೋಲ್ ಗಳಿಗಾಗಿ ನಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಬಾರದೆಂದು ಅಂದೇ ನಿರ್ಧಾರ ಮಾಡಿದ್ದೇನೆ ಎಂದರು.

ಇನ್ನೂ ಜವಾನ್ ಸಿನೆಮಾದಲ್ಲಿ ಶಾರುಖ್ ಖಾನ್ ಸೇರಿದಂತೆ ಟೀಂ ನೊಂದಿಗೆ ಕೆಲಸ ಮಾಡಿದ್ದು ನನಗೆ ತುಂಬಾನೆ ಸಂತೋಷವಾಗಿದೆ. ಶಾರುಖ್ ರವರೂ ಪ್ರತಿಯೊಬ್ಬರನ್ನೂ ಸಹ ಸಮಾನವಾಗಿಯೇ ನೋಡುತ್ತಿದ್ದರು. ಎಲ್ಲಾ ಕಲಾವಿದರಿಗೆ ತುಂಬಾ ಸೌಕರ್ಯಯುತವಾಗಿ ಅವರು ಇರುತ್ತಾರೆ. ವೃತ್ತಿಪರವಾಗಲೀ ಅಥವಾ ವೈಯುಕ್ತಿಕ ವಿಚಾರಗಳ ಬಗ್ಗೆ ಯಾಗಲಿ ಯಾವುದೇ ಪ್ರಶ್ನೆಯಿರಲಿ ಶಾರುಖ್ ರವರ ಬಳಿ ಒಂದು ಉತ್ತರ ಇದ್ದೇ ಇರುತ್ತದೆ ಎಂದು ಪ್ರಿಯಮಣಿ ಹೇಳಿದ್ದಾರೆ. ಇನ್ನೂ ಪ್ರಿಯಮಣಿ ನೀಡಿದ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top