Film News

ಮತ್ತೊಮ್ಮೆ ಇಂಟ್ರಸ್ಟಿಂಗ್ ಪೋಸ್ಟ್ ಹಂಚಿಕೊಂಡ ಸ್ಯಾಮ್, ಸಾವಿನಿಂದ ಯಾವುದೂ ಕಾಪಾಡಲು ಸಾಧ್ಯವಾಗದೇ ಇದ್ದಾಗ ಎಂದು ಪೋಸ್ಟ್……!

ಸೌತ್ ಅಂಡ್ ನಾರ್ತ್‌ನಲ್ಲಿ ಬಹುಬೇಡಿಕೆಯೊಂದಿರುವ ನಟಿಯರಲ್ಲೊಬ್ಬರಾದ ಸಮಂತಾ ಇತ್ತೀಚಿಗೆ ಸದಾ ಇಂಟ್ರಸ್ಟಿಂಗ್ ಕಾಮೆಂಟ್ ಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಆಕೆ ವಿಚ್ಚೇದನ, ಮಯೋಸೈಟೀಸ್ ವ್ಯಾದಿಗೆ ಗುರಿಯಾದ ಬಳಿಕ ಮತಷ್ಟು ಸುದ್ದಿಯಾಗುತ್ತಿದ್ದಾರೆ. ಇದೀಗ ಸಮಂತಾ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ಇಂಟ್ರಸ್ಟಿಂಗ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಆಕೆಯ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಸಮಂತಾ ಯಾವ ಮೂಡ್ ನಲ್ಲಿದ್ದು ಆ ಕಾಮೆಂಟ್ ಮಾಡಿದ್ದಾರೆ ಎಂಬ ಚರ್ಚೆಗಳೂ ಸಹ ಶುರುವಾಗಿದೆ.

ದಶಕಗಳಿಂದ ಸಮಂತಾ ಸಿನಿ ಕೆರಿಯರ್‍ ಚೆನ್ನಾಗಿಯೇ ಸಾಗುತ್ತಿದೆ. ಸ್ಟಾರ್‍ ನಟರ ಸಿನೆಮಾಗಳ ಜೊತೆಗೆ ಸ್ಟಾರ್‍ ನಟಿಯಾಗಿ ಮುಂದುವರೆಯುತ್ತಿದ್ದಾರೆ. ಆದರೆ ಆಕೆಯ ವೈಯುಕ್ತಿಕ ಜೀವನ ಮಾತ್ರ ಅಷ್ಟೊಂದು ಚೆನ್ನಾಗಿ ಸಾಗುತ್ತಿಲ್ಲ ಎಂದು ಹೇಳಬಹುದಾಗಿದೆ. ಕೆಲವು ವರ್ಷಗಳ ಕಾಲ ಪ್ರೀತಿಸಿ ನಾಗಚೈತನ್ಯ ಜೊತೆಗೆ ಮದುವೆಯಾದರು. ಮದುವೆಯಾದ ಕೆಲವೇ ವರ್ಷಗಳಲ್ಲಿ ವಿಚ್ಚೇದನ ಪಡೆದುಕೊಂಡರು. ಇದಾದ ಬಳಿಕ ಕಳೆದ ವರ್ಷ ಆಕೆ ಮಯೋಸೈಟೀಸ್ ಎಂಬ ಮಾರಣಾಂತಿಕ ವ್ಯಾಧಿಗೆ ಗುರಿಯಾಗಿದ್ದರು. ಈ ವ್ಯಾದಿಯಿಂದ ಆಕೆ ಗುಣಮುಖರಾಗಿ ಇದೀಗ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಸಮಂತಾ ಆಗಾಗ ಕೆಲವೊಂದು ಇಂಟ್ರಸ್ಟಿಂಗ್ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಎಮೋಷನಲ್ ಪೋಸ್ಟ್ ಹಂಚಿಕೊಂಡಿದ್ದಾರೆ.

ನಟಿ ಸಮಂತಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ತಮ್ಮ ಸಿನೆಮಾ ಅಪ್ಡೇಟ್ ಗಳ ಜೊತೆಗೆ ಆಗಾಗ ಇಂಟ್ರಸ್ಟಿಂಗ್ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಕೆಲವೊಮ್ಮೆ ಆಕೆ ಎಮೋಷನಲ್ ಕೋಟ್ ಗಳನ್ನುಹಂಚಿಕೊಳ್ಳುತ್ತಾರೆ. ಈ ಹಾದಿಯಲ್ಲೇ ಸಮಂತಾ ಇದೀಗ ಎಮೋಷನಲ್ ಕೋಟ್ ಒಂದನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾವಿನಿಂದ ನಮ್ಮನ್ನು ಯಾವುದೂ ಕಾಪಾಡದೇ ಇರುವ ಸಮಯದಲ್ಲಿ ಪ್ರೀತಿಯಿಂದ ಜೀವನವನ್ನು ಕಾಪಾಡಿಕೊಳ್ಳಬೇಕು ಎಂಬಂರ್ಥದಲ್ಲಿ ಎಮೋಷನಲ್ ಕೋಟ್ ಹಂಚಿಕೊಂಡಿದ್ದಾರೆ. ಇನ್ನೂ ಆಕೆಯ ಈ ಪೊಸ್ಟ್ ಕಡಿಮೆ ಸಮಯದಲ್ಲೆ ಸಖತ್ ವೈರಲ್ ಆಗಿದೆ. ಜೊತೆಗೆ ಸಮಂತಾ ಅಭಿಮಾನಿಗಳು ಸಮಂತಾ ಹಂಚಿಕೊಂಡ ಈ ಪೋಸ್ಟ್ ಗೆ ಕಾರಣವಾದರೂ ಏನು ಎಂಬ ಚರ್ಚೆಗಳು ಶುರುವಾಗಿದೆ.

ಇನ್ನೂ ಸಮಂತಾ ಮಯೋಸೈಟೀಸ್ ವ್ಯಾದಿಯಿಂದ ಹೊರಬಂದು ಸಿನೆಮಾಗಳಲ್ಲಿ ಮತ್ತೆ ಆಕ್ಟೀವ್ ಆಗಿದ್ದಾರೆ. ಆಕೆ ಕೊನೆಯದಾಗಿ ಶಾಕುಂತಲಂ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಆಲ್ ಟೈಮ್ ಡಿಜಾಸ್ಟರ್‍ ಆಗಿ ಉಳಿದಿದೆ. ಇನ್ನೂ ವಿಜಯ್ ದೇವರಕೊಂಡ ಜೊತೆಗೆ ಖುಷಿ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾ ಇದೇ ಸೆ.1 ರಂದು ಬಿಡುಗಡೆಯಾಗಲಿದೆ. ಇದರ ಜೊತೆಗೆ ಆಕೆ ಸಿಟಾಡೆಲ್ ಎಂಬ ಸಿರೀಸ್ ನಲ್ಲೂ ಸಹ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಚೆನೈ ಸ್ಟೋರಿ ಎಂಬ ಹಾಲಿವುಡ್ ಸಿನೆಮಾದಲ್ಲೂ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿತ್ತು, ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.

Most Popular

To Top